This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Entertainment NewsLocal NewsPolitics NewsState News

BBK Season 10: ಏಣಿ ಇದ್ದವರಿಗೆ ಕಾಲಿಲ್ಲ, ಕಾಲಿದ್ದವರಿಗೆ ಏಣಿಯೇ ಇಲ್ಲ ಎಂದ ಪ್ರದೀಪ್‌ ಈಶ್ವರ್‌; ಡೈಲಾಗ್‌ಬಾಜಿ ಶುರು!

BBK Season 10: ಏಣಿ ಇದ್ದವರಿಗೆ ಕಾಲಿಲ್ಲ, ಕಾಲಿದ್ದವರಿಗೆ ಏಣಿಯೇ ಇಲ್ಲ ಎಂದ ಪ್ರದೀಪ್‌ ಈಶ್ವರ್‌; ಡೈಲಾಗ್‌ಬಾಜಿ ಶುರು!

ಬೆಂಗಳೂರು: ಸಾಕಷ್ಟು ಕುತೂಹಲಗಳೊಂದಿಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 10(BBK Season 10) ಅ.8ರಿಂದ ಆರಂಭವಾಗಿದೆ. ನಿರೀಕ್ಷೆಯಂತೆಯೇ ಸಾಕಷ್ಟು ಟ್ವಿಸ್ಟ್‌ ಈ ಬಾರಿ ಎದುರಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಹ್ಯಾಪಿ ಬಿಗ್‌ ಬಾಸ್‌ ಕೂಡ. ಮೊದಲ ದಿನವೇ ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿದ್ದು, ಸ್ಪರ್ಧಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ. ʻನಾವೆಲ್ಲ ಕಾಂಪೀಟ್‌ ಮಾಡ್ತಾ ಇರೋದು ಒಬ್ಬ MLA ಜತೆʼ ಎಂದು ಸ್ಪರ್ಧಿಗಳು ಸಖತ್‌ ಖುಷ್‌ ಆಗಿದ್ದಾರೆ.

ಇದೀಗ ಈ ಪ್ರೋಮೊವನ್ನು ಕಲರ್ಸ್‌ ಕನ್ನಡ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಮತ್ತೊಂದು ಪ್ರೋಮೊ ಔಟ್‌ ಆಗಿದ್ದು ʻʻಏಣಿ ಇದ್ದವರಿಗೆ ಕಾಲಿಲ್ಲ, ಕಾಲಿದ್ದವರಿಗೆ ಏಣಿಯೇ ಇಲ್ಲʼʼಎಂಬ ಮಸ್ತ್‌ ಡೈಲಾಗ್‌ ಹೊಡೆದಿದ್ದಾರೆ ಶಾಸಕ ಪ್ರದೀಪ್‌ ಈಶ್ವರ್‌.

ಮನೆಯಲ್ಲಿ ಈಗಾಗಲೇ ಟಾಸ್ಕ್‌ ಆರಂಭಗೊಂಡಂತಿದೆ. ಮನೆಯವರೆಲ್ಲರೂ ಚರ್ಚೆ ಮಾಡಿದ್ದು, ಬುಲೆಟ್‌ ಪ್ರಕಾಶ್‌ ಮಗ ರಕ್ಷಕ್‌ ʻʻನಮ್ಮನ್ನು ಯಾರ ಮುಂದೆ ಪ್ರೂವ್‌ ಮಾಡಿಕೊಳ್ಳುವುದು ಬೇಡ. ನಮ್ಮನ್ನ ನಾನು ಪ್ರೂವ್‌ ಮಾಡಿಕೊಳ್ಳಲು ಇಲ್ಲಿ ಬಂದಿದ್ದೇವೆʼʼಎಂದಿದ್ದಾರೆ.

ಡ್ರೋನ್‌ ಪ್ರತಾಪ್‌ ಕೂಡ ʻʻನನ್ನನ್ನು ನಂಬಿ ಎಂದು ಹೇಳುತ್ತಿಲ್ಲ. ನಿಮಗೆ ಚಾಲೆಂಜ್‌ ಮಾಡಬೇಕು ಅನ್ನಿಸಿದ್ರೆ, ಖಂಡಿತ ಮಾಡಿʼʼಎಂದಿದ್ದಾರೆ. ಅಷ್ಟೊತ್ತಿಗೆ ಶಾಸಕ ಪ್ರದೀಪ್‌ ಈಶ್ವರ್‌ ಧ್ವನಿ ಎತ್ತಿ ʻʻಇಲ್ಲಿ ಏನಾಗುತ್ತಿದೆ ಅಂದರೆ ಈ ಜನರೇಶನ್‌ನ ಸರಿಯಾಗಿ ಮೋಟಿವೇಟ್ ಮಾಡುವ ಪ್ರತಿಯೊಬ್ಬರು ಸಾಚ ಅಂದುಕೊಂಡು ಬಿಟ್ಟಿದ್ದಾರೆ. ಇಲ್ಲಿ ಏನಾಗುತ್ತಿದೆ ಎಂದರೆ ಈ ಜನರೇಶನ್‌ನಾ ರೈಟ್‌ ಆಗಿ ಮೋಟಿವೇಟ್‌ ಮಾಡುತ್ತಿಲ್ಲ. ನಾವು ತುಂಬ ತಪ್ಪಾಗಿ ಮೋಟಿವೇಟ್‌ ಮಾಡುತ್ತ ಇದ್ದೇವೆ. ದೊಡ್ಡವರು ಹೇಳುತ್ತಾರೆ ಏಣಿ ಹತ್ತೋದೆ ಕಷ್ಟ ಅಂತ. ಇನ್ನು ಕೆಲವರು ಅಂತಾರೆ ಏಣಿ ಏನೋ ಹತ್ತುತ್ತೀಯಾ ತುದಿಯಲ್ಲಿ ನಿಲ್ಲೋದು ಇನ್ನೂ ಕಷ್ಟ ಅಂತ. ನಮ್‌ ಜನರೇಶನ್‌ಗೆ ಏಣಿನೇ ಸಿಗುತ್ತಿಲ್ಲʼʼಎಂದಿದ್ದಾರೆ.

ಇದೀಗ ನೆಟ್ಟಿಗರು ʻʻಅಸಲಿ ಆಟ ಇಷ್ಟು ಬೇಗ ಶುರುವಾಗುತ್ತೆ ಅಂತ ಅಂದುಕೊಂಡಿರಲಿಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻರಾಜ್ಯದ ಅಭಿವೃದ್ಧಿ ಸಂಪೂರ್ಣ ನಿಂತು ವಿಧಾನಸೌಧವೇ ಮನರಂಜನೆಗಷ್ಟೇ ಮೀಸಲಾದ ಬಿಗ್‌‌ ಬಾಸ್‌ ಮನೆಯಂತಾಗಿದೆ. ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಸಲುವಾಗಿ ಈಗ ಸಿದ್ದರಾಮಯ್ಯ ಅವರು ಅವರ ಸಂಪುಟ ಸಹೋದ್ಯೋಗಿಗಳನ್ನು ಬಿಗ್‌‌ಬಾಸ್‌ ಮನೆಗೇ ಕಳಿಸಿಕೊಟ್ಟು ಕೃತಾರ್ಥರಾಗಿದ್ದಾರೆʼʼಎಂದು ಕಮೆಂಟ್‌ ಮಾಡಿದ್ದಾರೆ.

ವೇಟಿಂಗ್‌ ಲಿಸ್ಟ್‌ನಲ್ಲಿ ಯಾರ್ಯಾರು?
ಡ್ರೋನ್‌ ಪ್ರತಾಪ್, ತನಿಶಾ ಕುಪ್ಪಂದ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ರಕ್ಷಕ್, ಮಹೇಶ್ ಕಾರ್ತಿಕ್ ಸದ್ಯ ಹೋಲ್ಡ್‌ನಲ್ಲಿದ್ದಾರೆ. ವೈಟಿಂಗ್ ಲಿಸ್ಟ್‌ನಲ್ಲಿ ಇರುವ ಸ್ಪರ್ಧಿಗಳನ್ನು ವೇದಿಕೆ ಮೇಲೆ ಕರೆದ ಕಿಚ್ಚ ಸುದೀಪ್ ವೀಕ್ಷಕರು ಆಯ್ಕೆ ಮಾಡದ ಈ ಆರು ಸ್ಪರ್ಧಿಗಳನ್ನೂ ಮನೆಗೆ ಒಳಗೆ ಕಳುಹಿಸುವುದಾಗಿ ಘೋಷಿಸಿದ್ದಾರೆ. ಜತೆಗೆ ಎಲ್ಲರಿಗೂ ಒಂದು ವಾರಗಳ ಕಾಲ ಕಾಲಾವಕಾಶ ನೀಡಿದ್ದಾರೆ. ಸೆಕೆಂಡ್ ಚಾನ್ಸ್‌ನಲ್ಲಿ ಇವರು ಆಡುವ ಆಟದ ಮೇಲೆ, ನಿಮ್ಮಲ್ಲಿ ಯಾರು ಉಳಿದುಕೊಳ್ಳಬೇಕು, ಯಾರು ಉಳಿದುಕೊಳ್ಳಬಾರದು ಎಂಬುದನ್ನು ಬಿಗ್​ಬಾಸ್ ನಿರ್ಣಯ ಮಾಡುತ್ತಾರೆ. ಹಾಗಾಗಿ ಈ ಒಂದು ವಾರ ಚೆನ್ನಾಗಿ ಆಟ ಆಡಿ ಎಂದು ಸುದೀಪ್ ಎಲ್ಲರಿಗೂ ಹೇಳಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.