This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

International NewsNational NewsSports News

ಮುಂಬೈ ಇಂಡಿಯನ್ಸ್ ನಾಯಕ ಪಾಂಡ್ಯಗೆ ಷರತ್ತು ವಿಧಿಸಿದ ಬಿಸಿಸಿಐ

ಮುಂಬೈ ಇಂಡಿಯನ್ಸ್ ನಾಯಕ ಪಾಂಡ್ಯಗೆ ಷರತ್ತು ವಿಧಿಸಿದ ಬಿಸಿಸಿಐ

2024ರ ಐಪಿಎಲ್ ಮುಂಬೈ ಇಂಡಿಯನ್ಸ್ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ (Hardik Pandya), ಇದುವರೆಗಿನ ಆರು ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ಗೂ (T20 World Cup) ಮುನ್ನ ತನ್ನ ಸ್ಥಾನ ಅಪಾಯದಲ್ಲಿದೆ. ಪ್ರಸ್ತುತ ಲೀಗ್​ನಲ್ಲಿ ನಿಯಮಿತವಾಗಿ ಬೌಲಿಂಗ್ ಮಾಡದ ಹಾರ್ದಿಕ್, ಭಾರತಕ್ಕೆ ಪುನರಾಗಮನ ಮಾಡಲು ಮತ್ತು ವಿಶ್ವಕಪ್‌ಗೆ ತಂಡದ ಆಯ್ಕೆಯಾಗಲು ಬಯಸಿದರೆ, ಬೌಲಿಂಗ್​ನಲ್ಲಿ ಸಾಬೀತುಪಡಿಸುವುದು ಅನಿವಾರ್ಯ.

ಭಾರತದ ಪರ 2023ರ ಏಕದಿನ ವಿಶ್ವಕಪ್​​​ನಲ್ಲಿ (ODI World Cup)​​ ಅಕ್ಟೋಬರ್ 19ರಂದು ಬಾಂಗ್ಲಾದೇಶದ ವಿರುದ್ಧ ಕೊನೆಯದಾಗಿ ಆಡಿರುವ ಹಾರ್ದಿಕ್, 2024ರ ಐಪಿಎಲ್​ನಲ್ಲಿ ಎಷ್ಟು ಚೆನ್ನಾಗಿ ಪ್ರದರ್ಶನ ನೀಡುತ್ತಾರೆ ಎನ್ನುವುದರ ಮೇಲೆ ಟಿ20 ವಿಶ್ವಕಪ್​​ಗೆ ಆಯ್ಕೆಯಾಗಲಿದ್ದಾರೆ. ಮುಂಬೈ ಇಂಡಿಯನ್ಸ್​ ಪರ ತನ್ನ ಬೌಲಿಂಗ್​ನಲ್ಲಿ ಸಾಬೀತುಪಡಿಸಿದರೆ ಮಾತ್ರ ವಿಶ್ವಕಪ್​ಗೆ ಆಯ್ಕೆ ಮಾಡುತ್ತೇವೆ ಎಂಬ ಷರತ್ತನ್ನು ಬಿಸಿಸಿಐ ಹಾಕಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿ ಮಾಡಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಕಳೆದ ವಾರ ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದರು. ಇದೇ ವೇಳೆ ಹಾರ್ದಿಕ್ ಆಯ್ಕೆ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಹಾರ್ದಿಕ್ ಅವರು ಪುನರಾಗಮನ ಮಾಡಲು ಬಯಸಿದರೆ ನಿಯಮಿತವಾಗಿ ಬೌಲಿಂಗ್ ಮಾಡಬೇಕು. ಉತ್ತಮ ಪ್ರದರ್ಶನ ನೀಡಿ ಪ್ರೂವ್ ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ರೇಸ್​​ನಲ್ಲಿದ್ದಾರೆ ಶಿವಂ ದುಬೆ?
ಜೂನ್ 2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್ ಆಯ್ಕೆಗೆ ಬಿಸಿಸಿಐ ಉತ್ಸುಕವಾಗಿದೆ. ಏಕೆಂದರೆ, ಹಾರ್ದಿಕ್ ಮುಂಬೈ ಪರ 6 ಪಂದ್ಯಗಳಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 11 ಓವರ್‌ ಬೌಲ್ ಮಾಡಿದ್ದು 12.00ರ ಎಕಾನಮಿಯಲ್ಲಿ ರನ್‌ ಬಿಟ್ಟು ಕೊಟ್ಟಿದ್ದಾರೆ. ಸಿಎಸ್​ಕೆ ವಿರುದ್ಧ ಎಂಎಸ್ ಧೋನಿಯಿಂದ ತನ್ನ ಕೊನೆಯ ಓವರ್​​​​ನಲ್ಲಿ ಸತತ ಮೂರು ಸಿಕ್ಸರ್‌ ಚಚ್ಚಿಸಿಕೊಂಡಿದ್ದರು.

ಹಾರ್ದಿಕ್ ಬದಲಿಗೆ ಟಿ20 ವಿಶ್ವಕಪ್ ತಂಡಕ್ಕೆ ಶಿವಂ ದುಬೆ ಅವರನ್ನು ಆಯ್ಕೆ ಮಾಡಲು ಆಯ್ಕೆದಾರರು ಆಸಕ್ತಿ ಹೊಂದಿದ್ದರು ಎಂದು ವರದಿಯಾಗಿದೆ. ಆದರೆ ಸಿಎಸ್‌ಕೆ ಪರ ದುಬೆ ಕೇವಲ ಬ್ಯಾಟಿಂಗ್​ ಮಾತ್ರ ಮಾಡುತ್ತಿದ್ದು, ಬೌಲಿಂಗ್​​ ಮಾಡುತ್ತಿಲ್ಲ. ಹಾರ್ದಿಕ್‌ನಂತೆ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುವ ಶಿವಂ ದುಬೆ, ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆದಿದ್ದರು. ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಿವಂ ದುಬೆ, ಅತ್ಯುತ್ತಮ ಫಿನಿಷರ್​​ ಆಗಿದ್ದಾರೆ.

ಆದರೆ ಐಪಿಎಲ್​ನಲ್ಲಿ ಶಿವಂ ದುಬೆ ಬೌಲಿಂಗ್​ ಮಾಡದಿರುವುದು ತನ್ನ ಮೇಲೆ ಪರಿಣಾಮ ಬೀರುವಂತೆ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆತನನ್ನು ಐಪಿಎಲ್​ನಲ್ಲಿ ಕೇವಲ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಸಿದೆ. ಹಾಗಾಗಿ ದುಬೆಗೆ ಬೌಲಿಂಗ್ ಮಾಡುವ ಅವಕಾಶವೇ ಇಲ್ಲದಂತಾಗಿದೆ. ಹಾಗಾಗಿ, ಸಭೆಯಲ್ಲಿ ಆಯ್ಕೆ ಮಾಡಬೇಕೇ ಅಥವಾ ಮಾಡಬೇಕೇ ಎನ್ನುವ ನಿರ್ಧಾರ ಪೆಂಡಿಂಗ್ ಇಡಲಾಗಿದೆ. ಸದ್ಯಕ್ಕೆ ಯಾವುದೇ ಸೀಮ್ ಬೌಲಿಂಗ್ ಆಲ್‌ರೌಂಡರ್ ಲಭ್ಯವಿಲ್ಲ.

ಬೌಲಿಂಗ್​ನಲ್ಲಿ ವಿಫಲರಾದರೆ ಸಂಕಷ್ಟ
ಇದರಿಂದ ಹಾರ್ದಿಕ್​ಗೆ ಬಿಸಿಸಿಐ ಷರತ್ತುಗಳನ್ನು ವಿಧಿಸಿ ಟಿ20 ವಿಶ್ವಕಪ್​ಗೆ ಸಜ್ಜಾಗುವಂತೆ ಸೂಚಿಸಲಾಗಿದೆ. ಹಾರ್ದಿಕ್ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲವಾದರೆ, ಮೆಗಾ ಈವೆಂಟ್‌ನಲ್ಲಿ ಸ್ಥಾನವನ್ನು ಕಳೆದುಕೊಳ್ಳಬಹುದೆಂಬ ಸ್ಪಷ್ಟವಾದ ಸಂದೇಶ ರವಾನಿಸಿದ್ದಾರೆ. ಬ್ಯಾಟಿಂಗ್​ಗಿಂತ ಬೌಲಿಂಗ್​​​ನಲ್ಲಿ ನೀಡುವ ಕೊಡುಗೆಯೇ ತನ್ನ ಫಿಟ್​ನೆಸ್​ ಏನೆಂಬುದನ್ನು ತೋರಿಸುತ್ತದೆ ಎಂದು ಬಿಸಿಸಿಐ ತಿಳಿಸಿದೆ. ಹಾಗಾಗಿ ಹಾರ್ದಿಕ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Nimma Suddi
";