This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಭೀಮಾ ತೀರದ ಫೈರಿಂಗ್

ನಿಮ್ಮ ಸುದ್ದಿ ವಿಜಯಪುರ

ಭೀಮಾ ತೀರದ ನಟೋರಿಯಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಫೈರಿಂಗ್ ಪ್ರಕರಣದಲ್ಲಿ ಗಾಯಗೊಂಡಿದ್ದ ಮಹದೇವ ಬೈರಗೊಂಡ ಅಲಿಯಾಸ್ ಮಹದೇವ ಸಾವುಕಾರನ ಚಾಲಕ ಸಾವಿಗೀಡಾಗಿದ್ದಾನೆ. ಟಿಪ್ಪರ್ ಮೂಲಕ ಅಪಘಾತ ಮಾಡಿಸಿ ಮಹದೇವ ಸಾವುಕಾರನ ಮೇಲೆ ಫೈರಿಂಗ್ ನಡೆದ ಸಮಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭೀಮಾ ತೀರದ ಸಾಹುಕಾರ್ ಕಾರ್ ಚಾಲಕ ಲಕ್ಷ್ಮಣ ದಿಂಡೋರೆ (27) ಸಾವಿಗೀಡಾಗಿದ್ದಾನೆ. ವಿಜಯಪುರ ಜಿಲ್ಲೆಯ ಅರಕೇರಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಶೂಟೌಟ್ ನಡೆದಿತ್ತು. ಲಕ್ಷ್ಮಣ ದಿಂಡೋರೆಗೂ ಒಂದು ಗುಂಡು ತಗುಲಿತ್ತು. ಅತಿಯಾದ ರಕ್ತಸ್ರಾವದಿಂದ ಸಾವಿಗೀಡಾಗಿದ್ದಾನೆ. ಘಟನೆ ನಡೆದ ಸಮಯದಲ್ಲಿ ಬೈರಗೊಂಡ ಸಾವುಕಾರನ ಮ್ಯಾನೇಜರ ಬಾಬುರಾಯ ಕಂಚನಾಳಕರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮಹದೇವ ಬೈರಗೊಂಡ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Nimma Suddi
";