This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

International NewsNational NewsTechnology News

ಹಕ್ಕಿ ಲೋಗೊಕ್ಕೆ ಬಾಯ್, ಟ್ವಿಟ್ಟರ್ ಯುಆರ್​ಎಲ್ ಕೂಡ ಎಕ್ಸ್ ಆಗಿ ಬದಲಾಯ್ತು

ಹಕ್ಕಿ ಲೋಗೊಕ್ಕೆ ಬಾಯ್, ಟ್ವಿಟ್ಟರ್ ಯುಆರ್​ಎಲ್ ಕೂಡ ಎಕ್ಸ್ ಆಗಿ ಬದಲಾಯ್ತು

ನ್ಯೂಯಾರ್ಕ್,: ಎಕ್ಸ್ ಎಂದು ರೀಬ್ರ್ಯಾಂಡ್ ಆಗಿ ಒಂದು ವರ್ಷದ ಬಳಿಕ ಈಗ ಟ್ವಿಟ್ಟರ್ ಪೂರ್ಣವಾಗಿ ಎಕ್ಸ್ ಆಗಿ ಬದಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಟ್ವಿಟ್ಟರ್ ಡೊಮೈನ್ ಅನ್ನು ಪೂರ್ಣವಾಗಿ ಎಕ್ಸ್ ಡೊಮೈನ್​ಗೆ ಬದಲಾಯಿಸಲಾಗಿದ್ದು, ಬ್ರೌಸರ್​ನಲ್ಲಿ ಟ್ವಿಟ್ಟರ್ ಡಾಟ್ ಕಾಮ್ ಎಂದು ಕೊಟ್ಟರೆ ಅದು ಎಕ್ಸ್ ಡಾಟ್ ಕಾಮ್​ಗೆ ಹೋಗುತ್ತದೆ. ಸದ್ಯದಲ್ಲೇ ಎಲ್ಲರ ಬ್ರೌಸರ್​ಗಳಿಂದ ಟ್ವಿಟ್ಟರ್ ಮಾಯವಾಗಿ ಎಕ್ಸ್ ಪ್ರತ್ಯಕ್ಷವಾಗಲಿದೆ.

ಕಳೆದ ವರ್ಷ ಟ್ವಿಟ್ಟರ್ ಅನ್ನು ಎಕ್ಸ್ ಆಗಿ ರೀಬ್ರ್ಯಾಂಡಿಂಗ್ ಮಾಡಲಾಗಿತ್ತು. ಅದರ ಹಕ್ಕಿಯ ಲೋಗೋವನ್ನೂ ಎಕ್ಸ್ ಆಗಿ ಬದಲಾಯಿಸಲಾಗಿತ್ತು. ಟ್ವೀಟ್ ಎಂಬುದನ್ನು ಎಕ್ಸ್ ಪೋಸ್ಟ್ ಎಂದು ಬದಲಿಸಲಾಗಿದ್ದು, ಯುಆರ್​ಎಲ್​ ಮಾತ್ರ ಟ್ವಿಟ್ಟರ್ ಎಂದೇ ಇತ್ತು. ಮಾಧ್ಯಮಗಳಲ್ಲಿ ವರದಿ ಬರೆಯುವಾಗ ಟ್ವಿಟ್ಟರ್ ಮತ್ತು ಎಕ್ಸ್ ಎರಡನ್ನೂ ಬರೆಯಲಾಗುತ್ತಿತ್ತು. ಈಗ ಟ್ವಿಟ್ಟರ್​ಗೆ ಪೂರ್ಣವಾಗಿ ವಿದಾಯ ಹೇಳಲಾಗಿದೆ.

ಇಲಾನ್ ಮಸ್ಕ್ ಅವರು 2022ರಲ್ಲಿ ಟ್ವಿಟ್ಟರ್ ಅನ್ನು ಲಕ್ಷಾಂತರ ಕೋಟಿ ರುಪಾಯಿ ತೆತ್ತು ಖರೀದಿ ಮಾಡಿದ್ದಾರೆ. ಶೇ 70ಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿರುವ ಅವರು ಕಂಪನಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಆ್ಯಪ್​ನಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಪ್ರೀಮಿಯಮ್ ಸಬ್​ಸ್ಕ್ರಿಪ್ಷನ್ ಇತ್ಯಾದಿ ಅನೇಕ ಸರ್ವಿಸ್​ಗಳನ್ನು ಸೇರಿಸಲಾಗಿದೆ.

ಇಲಾನ್ ಮಸ್ಕ್ ಅವರು ತಮ್ಮ ಎಕ್ಸ್​ನಲ್ಲಿ ಒಂದು ಪೋಸ್ಟ್ ಮಾಡಿದ್ದು,ಎಲ್ಲಾ ಮುಖ್ಯ ಸಿಸ್ಟಂಗಳು ಎಕ್ಸ್ ಡಾಟ್ ಕಾಮ್​ನಲ್ಲಿ ಇವೆ ಎಂದು ಹೇಳಿ ಒಂದು ವಿಶೇಷ ಎಕ್ಸ್ ಲೋಗೊದ ಚಿತ್ರ ಲಗತ್ತಿಸಿದ್ದಾರೆ. ಎಕ್ಸ್​ನ ಈಗಿನ ಲೋಗೊ ಬದಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ.