This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ನಗರದಲ್ಲಿ 86 ಕಡೆ ಸಿಸಿಟಿವಿ ಕಣ್ಗಾವಲು

ವರ್ಣರಂಜಿತ ವಿಶೇಷ ಹೋಳಿ ಆಚರಣೆಗೆ ಜಿಲ್ಲಾಧಿಕಾರಿ ಕರೆ

ನಿಮ್ಮ ಸುದ್ದಿ ಬಾಗಲಕೋಟೆ

ದೇಶದಲ್ಲಿಯೇ ಹೋಳಿ ಆಚರಣೆಯಲ್ಲಿ ಎರಡನೇ ಸ್ಥಾನ ಪಡೆದ ಬಾಗಲಕೋಟೆ ಹೋಳಿ ಹಬ್ಬವು ಈ ವರ್ಷವೂ ಗತಕಾಲದ ವೈಭವದೊಂದಿಗೆ ವರ್ಣರಂಜಿತವಾಗಿ ಹೋಳಿ ಆಚರಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಕರೆ ನೀಡಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ಜರುಗಿದ ಹೋಳಿ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಹಿಂದೆ ವೈಭವದಿಂದ ಆಚರಿಸುತ್ತಾ ಬಂದಿದ್ದು, ಈ ವರ್ಷವೂ ವ್ಯವಸ್ಥಿತವಾಗಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದೇ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಹಬ್ಬದ ಆಚರಣೆಗೆ ಅಗತ್ಯವಿರುವ ಕೆಲಸಗಳನ್ನು ನಗರಸಭೆಯಿಂದ ಮಾಡಿಸಲಾಗುತ್ತಿದೆ. ಆಚರಣೆಗೆ ತೊಂದರೆಯಾಗದಂತೆ ಎಲ್ಲ ರೀತಿಯ ಅವಕಾಶ ನೀಡಲಾಗುತ್ತಿದ್ದು, ಅದರ ಸದುಪಯೋಗ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಿದೆ ಎಂದರು.

ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವ ಹಿಂದಿನ ಸಚಿವ ಅರವಿಂದ ಲಿಂಬಾವಳಿ ಅವರು ನೀಡಿರುವ 10 ಲಕ್ಷ ರೂ.ಗಳನ್ನು ಹೋಳಿ ಆಚರಣೆಗೆ ಮೀಸಲಿಡಲಾಗಿತ್ತು. ಕೋವಿಡ್ ಹಿನ್ನಲೆಯಲ್ಲಿ ಆ ಹಣವನ್ನು ಸರಕಾರಕ್ಕೆ ಮರಳಿ ಹೋಗದಂತೆ ತಡೆದು ಹಿಂದಿನ ಜಿಲ್ಲಾಧಿಕಾರಿಗಳು ಬ್ಯಾಂಕ್‍ನಲ್ಲಿ ಠೇವಣಿ ಮಾಡಿರುತ್ತಾರೆ. ಪ್ರತಿ ವರ್ಷ ಹೋಳಿ ಆಚರಣೆಗೆ ಈ ಅನುದಾನದಿಂದ ಬರುವ ಬಡ್ಡಿಯ ಹಣವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಲಾಗುವುದೆಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಮಾತನಾಡಿ ಹೋಳಿ ಪ್ರಾರಂಭದಲ್ಲಿ ನಗರದಲ್ಲಿ ಕೆಲವು ಅಹಿತಕರ ಘಟನೆ ಕಂಡು ಬಂದ ಹಿನ್ನಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಗರದಾದ್ಯಂತ 86 ಕಡೆಗಳಲ್ಲಿ ಹೆಚ್ಚಿನ ಸಾಮಥ್ರ್ಯದ ಆಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮರಾಗಳನ್ನು ಮಾರ್ಚ 7 ರಿಂದ 11 ವರೆಗೆ ಅಳವಡಿಸಲಾಗುತ್ತಿದೆ. ಈ ಎಲ್ಲ ಸಿಸಿಟಿವಿ ಕ್ಯಾಮರಾಗಳಿಗೆ ಒಂದೇ ಕಡೆಗಳಲ್ಲಿ ಕಂಟ್ರೋಲ್ ರೂಮ್ ಮಾಡಿ ಅಲ್ಲಿ ಸಿಬ್ಬಂದಿ ನೇಮಿಸಲಾಗಿದ್ದು, ಅಲ್ಲಿ ಪ್ರತಿಯೊಂದು ಘಟನೆಗಳು ದಾಖಲಾಗುತ್ತಲಿದೆ. ಅಹಿತಕರ ಘಟನೆಗೆ ಅವಕಾಶ ಮಾಡಿಕೊಡುವವರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ಹೋಳಿ ಆಚರಣೆ ಸಮಿತಿಯ ಅಧ್ಯಕ್ಷ ಕಳಕಪ್ಪ ಬಾದೊಡಗಿ ಮಾತನಾಡಿ ನಗರದಲ್ಲಿ ಮಾರ್ಚ 6 ರಿಂದ 11 ವರೆಗೆ ಹೋಳಿ ಆಚರಣೆ ನಡೆಯಲಿದ್ದು, ಮಾರ್ಚ 6 ರಂದು ಹೋಳಿ ಆಚರಣೆ ಉದ್ಘಾಟನೆ, 7 ರಂದು ಕಾಮದಹನ, ನಂತರ 8 ರಿಂದ 10 ವರೆಗೆ ಬಣ್ಣದಾಟ ನಡೆಯಲಿದೆ. ಮರುದಿನ ಮಾರ್ಚ 11 ರಂದು ವಿವಿಧ ಕಲಾಕೃತಿಗಳ ಸೋಗಿನ ಬಂಡಿ ಪ್ರದರ್ಶನ ನಡೆಯಲಿದೆ ಎಂದರು.
ಎ.ಎ.ದಂಡಿಯಾ ಮಾತನಾಡಿ ಪ್ರತಿ ವರ್ಷ ಎಲ್ಲ ಸಮುದಾಯದವರು ಕೂಡಿ ಹೋಳಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದು, ಈ ವರ್ಷವು ಸಹೋದರತ್ವದಿಂದ ಆಚರಿಸುತ್ತೆವೆ. ಮಾರ್ಚ 7 ರಂದು ಮುಸ್ಲಿಂ ಸಮಾಜದ ಶಬ್ಬೆ ಭರಾತ್ ಆಚರಿಸಲಾಗುತ್ತಿದ್ದು, ಈ ಆಚರಣೆಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಹೋಳಿ ಉತ್ಸವ ಕುರಿತಾಗಿ ಮಹಾಬಳೇಶ್ವರ ಗುಡಗುಂಟಿ, ಸಂಜು ವಾಡಕರ, ಹೋಳಿ ಹಬ್ಬದ ಬಾಬದಾರ ಕಾತೇದಾರ, ಶಿವು ಮೇಲ್ನಾಡ, ವಿರೇಶ ರೋಣದ ಸೇರಿದಂತೆ ಇತರರು ಮಾತನಾಡಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಸೇರಿದಂತೆ ಕುತುಬುದ್ದಿನ ಖಾಜಿ, ಬಾಬು ಕಾಂಟ್ರ್ಯಾಕ್ಟರ, ಮುತ್ತಿನಮಠ, ಮನೋಹರ ಎಳ್ಳೆಮ್ಮಿ ಹಾಗೂ ಇತರರು ಉಪಸ್ಥಿತರಿದ್ದರು.

Nimma Suddi
";