This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Entertainment NewsState News

ಚಂದನಶೆಟ್ಟಿ ಪತ್ನಿ ನಿವೇದಿತರ ನಾನಾವತಾರ

ಚಂದನಶೆಟ್ಟಿ ಪತ್ನಿ ನಿವೇದಿತರ ನಾನಾವತಾರ

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ಅಷ್ಟೂ ಮಾಡದೇ ಇದ್ದರೆ ಹೇಗೆ? ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಕೆಲವರಂತೂ ಕಾನೂನಿನ ಮೆಟ್ಟಿಲನ್ನು ಹತ್ತುತ್ತಾರೆ. ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿತ್ತಾರೆ.

ಉದಾಹರಣೆಗೆ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ. ಹೌದು, ರೀಲ್ಸ್ ಮಾಡುವುದನ್ನೇ ಹವ್ಯಾಸವನ್ನಾಗಿಸಿಕೊಂಡಿರುವ ನಿವೇದಿತಾ ಗೌಡ, ಸದ್ಯಕ್ಕೆ ಹೊಸದೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕೆಂಪುಡುಗೆಯಲ್ಲಿ Dont Go Insane ಎನ್ನುವ ಇಂಗ್ಲಿಷ್ ಹಾಡಿಗೆ, ಸೊಂಟ ಬಳುಕಿಸಿದ್ದಾರೆ. ಸದ್ಯಕ್ಕೆ ನಿವೇದಿತಾ ಅವರ ಈ ವಿಡಿಯೋ ಅನೇಕರ ಕಣ್ಮನವನ್ನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ನಿವೇದಿತಾ ಗೌಡ ಅವರ ಈ ಹಾಟ್ ಅವತಾರವನ್ನ ಒಬ್ಬರಲ್ಲ, ಇಬ್ಬರಲ್ಲ ಹೆಚ್ಚು ಕಡಿಮೆ ಹದಿನಾರೂವರೆ ಲಕ್ಷಕ್ಕೂ ಅಧಿಕ ಜನ ಕಣ್ತುಂಬಿಕೊಂಡಿದ್ದಾರೆ.

ಬಾರ್ಬಿ ಡಾಲ್ ನಿವೇದಿತಾ ಅವರ ಬೆನ್ನು ಹತ್ತಿದ್ದಾರೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ ಸದಸ್ಯರು ಚಂದನ್ ಶೆಟ್ಟಿ ಎಲ್ಲಿದ್ದೀಯಪ್ಪ ಎಂಬ ಪ್ರಶ್ನೆಯನ್ನೂ ಕೇಳ್ತಿದ್ದಾರೆ.

ಕೆಲವರ ಕಣ್ಣಿಗೆ ನಿವಿಯ ಈ ಥಳಕು ಬಳಕು ಕಾಮಪ್ರಚೋದಕದಂತೆ ಕಂಡರೆ, ಕೆಲವರಿಗೆ ಪಕ್ಕದ ಆಂಧ್ರದ ನಟಿಯರು ನೆನಪಾಗ್ತಿದ್ದಾರೆ. ಇನ್ನೂ ಬಹುತೇಕರಿಗೆ ನಿವೇದಿತಾ ಗೌಡ ಹಾಕಿಕೊಂಡಿರುವ ಡ್ರೆಸ್ ಬಗ್ಗೆ ಚಿಂತೆ ಕಾಡ್ತಿದ್ದರೆ, ಉಳಿದವರ ಕಣ್ಮುಂದೆ ಚಂದನ್ ಶೆಟ್ಟಿ ಕಥೆ-ವ್ಯಥೆ ಪ್ರಸಾರವಾಗ್ತಿದೆ.

ಥರೇವಾರಿ ಅಭಿಪ್ರಾಯಗಳಿಂದ ನಿವೇದಿತಾ ಅವರ ಕಮೆಂಟ್ ಸೆಕ್ಷನ್ ತುಂಬಿ ತುಳುಕುತ್ತಿದೆ. ಆ ಪೈಕಿ ಕೆಟ್ಟಾ ಕೊಳಕು ಕಮೆಂಟ್ ಗಳೂ ಇವೆ. ಪ್ರೇಮಿಗಳ ದಿನದ ಪ್ರಯುಕ್ತ ಸಾನ್ಯಾ ಅಯ್ಯರ್ ಹೊಚ್ಚ ಹೊಸ ಅವತಾರ ; ಪಡ್ಡೆಗಳ ಹೃದಯ ಪುಕಪುಕ..! ಒಟ್ಟಿನಲ್ಲಿ ಸದ್ಯಕ್ಕೆ ನಿವೇದಿತಾ ಗೌಡ, ಮತ್ತೊಮ್ಮೆ-ಮಗದೊಮ್ಮೆ ಟ್ರೋಲ್ ಹೈಕ್ಳ ಬಾಯಿಗೆ ಆಹಾರವಾಗಿದ್ದಾರೆ. ಪಡ್ಡೆಗಳ ಹೃದಯಕ್ಕೆ ಕನ್ನ ಹಾಕ್ತಿದ್ದಾರೆ. ಚಂದನ್ ಶೆಟ್ಟಿ ಪತ್ನಿಯ ಈ ವಿಡಿಯೋ ಬಗ್ಗೆ ಮಾತನಾಡ್ತಾರಾ, ಚಂದನ್ ಶೆಟ್ಟಿ ಎಲ್ಲಿದ್ದೀಯಪ್ಪ ಎಂಬ ಸಿನಿರಸಿಕರ ಪ್ರಶ್ನೆಗೆ ಉತ್ತರ ಕೊಡ್ತಾರಾ ಅನ್ನುವುದನ್ನ ಕಾದು ನೋಡಬೇಕಿದೆ.

Nimma Suddi
";