This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

State News

ಚರಂತಿಮಠರ ಹೇಳಿಕೆ ಬಾಲಿಶತನದ್ದು:ಬದ್ನೂರ್

ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಹೇಳಿಕೆ

ನಿಮ್ಮ ಸುದ್ದಿ ಬಾಗಲಕೋಟೆ

೨೦೧೪-೧೫ ರಲ್ಲಿ ಬಾಗಲಕೋಟೆಗೆ ಘೋಷಣೆಯಾಗಿರುವ ಸರಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುದಾದನಕ್ಕೆ ನಮ್ಮದೇನು ತಕರಾರು ಇಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಅವರು ನೀಡಿದ ಹೇಳಿಕೆ ಬಾಲಿಶತನದಿಂದ ಕೂಡಿದ್ದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಹೇಳಿದರು.

ಏಪ್ರೀಲ್ ೬ರ ಮಂಗಳವಾರದಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಬೃಹತ್ ಜನಾಂದೋಲನ ಕಾರ್ಯಕ್ರಮದ ನಿಮಿತ್ತ ಶನಿವಾರ ಜಿಲ್ಲೆಯ ವಿವಿಧ ಪಕ್ಷದ ಹಾಗೂ ಸಂಘಟನೆಯ ಮುಖಂಡುರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯ ಶಾಸಕ ವೀರಣ್ಣ ಚರಂತಿಮಠ ಅವರು ೨೦೧೮ರಿಂದ ಇಲ್ಲಿಯವರೆಗೆ ಕಾಲೇಜು ಅನುದಾನಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಎಷ್ಟು ಬಾರಿ ಪತ್ರವನ್ನು ಬರೆದಿದ್ದಾರೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಎಷ್ಟು ಬಾರಿ ಮುಖ್ಯಮಂತ್ರಿಗಳ ಬಳಿ ನಿಯೋಗವನ್ನು ತೆಗೆದುಕೊಂಡು ಹೋಗಿದ್ದೇವೆ ಎಂದು ಸ್ಪಷ್ಟನೆ ನೀಡಬೇಕು. ಬಜೆಟ್ ಅಧಿವೇಶನದಲ್ಲಿ ಕಾಲೇಜು ಆರಂಭಕ್ಕೆ ಮಾತನಾಡಿದ್ದೀರಿ ಎಂಬುದನ್ನು ವಿಡಿಯೋ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಆದರೆ ಜನರ ದಿಕ್ಕನ್ನು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದೀರಿ. ಅದೇ ರೀತಿ ತಾವು ಬಸವೇಶ್ವರ ಸಂಘವನ್ನು ಎಷ್ಟು ಪ್ರೀತಿಯಿಂದ ಬೆಳೆಸುತ್ತಿದ್ದೀರಿ ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿ ಮಂಜೂರಾಗಿರುವ ಸರಕಾರಿ ವೈದ್ಯಕೀಯ ಕಾಲೇಜನ್ನು ಜಿಲ್ಲೆಗೆ ತಂದು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕು. ಜಿಲ್ಲೆಯ ಶ್ರಮಿಕರ ಹಾಗೂ ಬಡವರ, ದೀನ ದಲಿತರ, ಪರವಾಗಿ ಧ್ವನಿ ಎತ್ತಿ ಕಾಲೇಜನ್ನು ಆರಂಭಕ್ಕೆ ಮುಂದಾಗಬೇಕು ಎಂದು ವಿನಂತಿಸಿದ್ದೇವೆ ವಿನ: ನಿಮ್ಮನ್ನು ತೇಜೋವಧೆ ಮಾಡುವ ಉದ್ದೇಶ ನಮ್ಮದಲ್ಲ ಎಂದು ಹೇಳಿದ್ದಾರೆ.

ಯುವ ಮುಖಂಡ ಸಂತೋಷ ಹೊಕ್ರಾಣಿ ಮಾತನಾಡಿ, ಜಿಲ್ಲೆಯಲ್ಲಿ ಮಂಜೂರಾದ ಸರಕಾರಿ ವೈಧ್ಯಕೀಯ ಕಾಲೇಜನ್ನು ಮಂಜೂರಿ ಮಾಡಿಸಲು ಪಕ್ಷಾತೀತ ಹೋರಾಟ ಅಗತ್ಯ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಕಾರಣ ಜಿಲ್ಲೆಯ ಪ್ರಗತಿಪರ ಚಿಂತಕರು, ಬುದ್ದಿ ಜೀವಿಗಳು, ವಿವಿಧ ಸಂಘಟನೆಯ ಮುಖಂಡರು ಬೃಹತ್ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಗೆ ಮಂಜೂರಾದ ಸರಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಶಿವರಾಮೇಗೌಡ ಬಣದ ಕರವೇ ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ, ಜೈಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಆರ್.ಡಿ.ಬಾಬು ಮಾತನಾಡಿ, ಜಿಲ್ಲೆಗೆ ಮಂಜೂರಾಗಿರುವ ಸರಕಾರಿ ವೈದ್ಯಕಿಯ ಕಾಲೇಜ್ ಆರಂಭಕ್ಕೆ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾಡುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಏಪ್ರೀಲ್ ೬ ರಂದು ನಡೆಯುವ ಬೃಹತ್ ಜನಾಂದೋಲನ ಕಾರ್ಯಕ್ರಮಕ್ಕೆ ನಾವು ಜೈಲಿಗೆ ಹೋಗಲು ಸಿದ್ದ ಎಂದು ಹೇಳಿದರು.

ಪೂರ್ವಭಾವಿ ಸಭೆಯಲ್ಲಿ ಹಿಂದೂ ಜಾಗರಾಣಾ ವೇದಿಕೆಯ ಮುಖಂಡ ಅಶೋಕ ಮುತ್ತಿನಮಠ, ನಗರಸಭೆ ಸದಸ್ಯ ಚೆನ್ನವೀರ ಅಂಗಡಿ, ಲಕ್ಷಿö್ಮÃ ಚವ್ಹಾಣ, ಕಾಂಗ್ರೆಸ್ ಮುಖಂಡರಾದ ಹಣಮಂತ ರಾಕುಂಪಿ, ಗೋವಿಂದ ಬಳ್ಳಾರಿ, ಎಸ್,ಎನ್,ರಾಂಪೂರ, ನಿಂಗಪ್ಪ ಕೋಟಿ, ಯುವ ಕಾಂಗ್ರೆಸ್ ಮುಖಂಡರಾದ ಮಹೇಶ ಜಾಲವಾದಿ, ಮಂಜುನಾಥ ಮುಚಖಂಡಿ, ಮಂಜುನಾಥ ಪುರತಗೇರಿ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಅಮರೇಶ ಕೊಳ್ಳಿ, ಮಹಿಳಾ ಮುಖಂಡರಾದ ಭಾಗ್ಯಶ್ರೀ ಬೆಟಗೇರಿ, ಕರವೇ ಪದಾಧಿಕಾರಿಗಳಾದ ಬಸವರಾಜ ಧರ್ಮಟ್ಟಿ, ಬಸವರಾಜ ಅಂಬಿಗೇರ, ವಿನೂತ ಮೇಲಿನಮನಿ, ಮಲ್ಲು ಕಟ್ಟಿಮನಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು

ಒಕ್ಕೂಲರಿನಿಂದ ಏಪ್ರೀಲ್ ೬ ರಂದು ನಡೆಯುವ ಬೃಹತ್ ಜನಾಂದೋಲನ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿ ಜಿಲ್ಲೆಗೆ ಮಂಜೂರಾಗಿರುವ ಸರಕಾರಿ ವೈಧ್ಯಕೀಯ ಮಹಾವಿದ್ಯಾಲಯ ಆರಂಭವಾಗುವವರೆಗೆ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.