ಅಲೋವೆರಾವನ್ನು ಮಹಿಳೆಯರು ಹೆಚ್ಚಾಗಿ ತ್ವಚೆ ಹಾಗೂ ಕೂದಲಿನ ಸೌಂದರ್ಯ ಕಾಪಾಡಲು ಬಳಸುತ್ತಿದ್ದು, ಅನಾದಿ ಕಾಲದಿಂದಲೂ ಈ ಅಲೋವೆರಾ ಔಷಧಿಯಾಗಿ ಬಳಕೆ ಮಾಡಲಾಗುತ್ತಿದೆ. ಈ ಅಲೋವೆರಾದಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಅಲೋವೆರಾದಲ್ಲಿ ವಿಟಮಿನ್ ಎ, ಸಿ, ಇ ಮತ್ತು ಬಿ ಕಾಂಪ್ಲೆಕ್ಸ್ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು ಮತ್ತು ಅಮೈನೋ ಆಮ್ಲಗಳು ಹೇರಳವಾಗಿದ್ದು, ದೇಹ, ತ್ವಚೆ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಅಲೋವೆರಾ ಜ್ಯೂಸ್ ಸೇವನೆ ಮಾಡುವುದರಿಂದ ಆರೋಗ್ಯ ಲಾಭಗಳು ಅಧಿಕವಾಗಿದೆ.
ಅಲೋವೆರಾ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳು
* ತೂಕ ನಷ್ಟಕ್ಕೆ ಸಹಕಾರಿ: ಅಲೋವೆರಾ ಆಹಾರವನ್ನು ಜೀರ್ಣವಾಗುವಂತೆ ಮಾಡಿ ಕೊಬ್ಬನ್ನು ಶೇಖರಿಸುವುದನ್ನು ತಪ್ಪಿಸುತ್ತದೆ. ಈ ಮೂಲಕ ತೂಕ ನಷ್ಟಕ್ಕೂ ಸಹಕಾರಿಯಾಗಿದೆ.
ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ : ಅಲೋವೆರಾ ಜ್ಯೂಸ್ ಸೇವನೆಯಿಂದ ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚರ್ಮದ ಕಾಂತಿಯು ಹೆಚ್ಚಾಗುವುದಲ್ಲದೆ, ಕೂದಲು ಉದುರುವ ಸಮಸ್ಯೆಯೂ ನಿವಾರಣೆಯಾಗುತ್ತದೆ.
* ಹಲ್ಲುಗಳ ಆರೋಗ್ಯಕ್ಕೆ ಪೂರಕ: ಲೋಳೆರಸದ ಜ್ಯೂಸ್ ಕುಡಿಯುವುದರಿಂದ ಬಾಯಿಯ ದುರ್ವಾಸನೆಯೂ ಕಡಿಮೆ ಮಾಡಿ, ಒಸಡು ಮತ್ತು ಹಲ್ಲುಗಳನ್ನು ಶುಚಿಯಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
* ಜೀರ್ಣ ಕ್ರಿಯೆಯ ಸುಧಾರಣೆಗೆ ಸಹಾಯಕ : ಈ ಅಲೋವೆರಾ ಅಥವಾ ಲೋಳೆಸರದಲ್ಲಿನ ಕಿಣ್ವಗಳು ಹಾಗೂ ನಾರುಗಳು ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯನ್ನು ಹೊಟ್ಟೆಯನ್ನು ಸ್ವಚ್ಛಗೊಳಿಸಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಯನ್ನು ದೂರ ಮಾಡುತ್ತದೆ.