ಕೆಲವೊಂದು ಪಾನೀಯಗಳು ಆರೋಗ್ಯವನ್ನು ಕಾಪಾಡಿಕೊಂಡು ನಿರ್ಜಲೀಕರಣವನ್ನು ದೂರ ಮಾಡುವುದು. ಇದು ಬೇಸಿಗೆ ಸಮಯದಲ್ಲಿ ಹೇಳಿ ಮಾಡಿಸಿರುವ ಪಾನೀಯವಾಗಿದೆ. ಪುದೀನಾದಲ್ಲಿ ಇರುವ ಆರೋಗ್ಯ ಲಾಭಗಳು ಹಾಗೂ ಅದು ಬೇಸಗೆಯಲ್ಲಿ ಎಷ್ಟು ದೇಹಕ್ಕೆ ನೆರವಾಗುವುದು.
ಬೇಸಗೆಯಲ್ಲಿ ಉರಿಯುತ್ತಿರುವ ಉಷ್ಣತೆಯಿಂದ ಪಾರಾಗಲು ಪುದೀನಾದಲ್ಲಿ ಇರುವ ತಂಪುಕಾರಕ ಗುಣಗಳು ತುಂಬಾ ನೆರವಿಗೆ ಬರುವುದು. ಪುದೀನಾದಲ್ಲಿ ಇರುವ ಮೆಂಥಾಲ್ ಎನ್ನುವ ಅಂಶವು ತಂಪು ನೀಡಿ, ದೇಹದ ತಾಪಮಾನ ತಗ್ಗಿಸುವುದು ಮತ್ತು ಉಷ್ಣತೆ ಹೆಚ್ಚಾಗಿರುವುದರಿಂದ ಉಂಟಾಗಿರುವ ಅಸ್ವಸ್ಥತೆಯನ್ನು ಇದು ದೂರ ಮಾಡುವುದು.
ಪುದೀನಾದಲ್ಲಿ ಇರುವ ಕೆಲವೊಂದು ಅಂಶಗಳು ಮನಸ್ಥಿತಿ ಸುಧಾರಣೆ ಮಾಡುವುದು ಹಾಗೂ ಒತ್ತಡ ತಗ್ಗಿಸುವುದು. ಪುದೀನಾ ಎಲೆಗಳ ಸುವಾಸನೆಯನ್ನು ಉಚ್ವಾಸ ಮಾಡಿದರೆ ಆಗ ಮನಸ್ಸಿಗೆ ಶಾಂತಿ ಹಾಗೂ ಮಾನಸಿಕವಾಗಿ ಸ್ಪಷ್ಟತೆ ಸಿಗುವುದು. ಇದರಿಂದ ತುಂಬಾ ಶಾಂತವಾಗಿ ಇರಬಹುದು ಮತ್ತು ಇದು ಬೇಸಗೆಯ ಸಮಯದಲ್ಲಿ ಅತೀ ಅನಿವಾರ್ಯ ಕೂಡ.
ಬೇಸಗೆಯಲ್ಲಿ ಖಾಲಿ ನೀರು ಕುಡಿಯಲು ಕೆಲವರಿಗೆ ಇಷ್ಟವಾಗದು. ಇದರ ಬದಲಿಗೆ ನೀರಿಗೆ ಸ್ವಲ್ಪ ಪುದೀನಾ ಎಲೆಗಳನ್ನು ಹಾಕಿಟ್ಟು, ಅದನ್ನು ಕುಡಿದರೆ ಆಗ ಅದು ರುಚಿಕರ. ಸ್ವಲ್ಪ ಲಿಂಬೆ ರಸ ಮತ್ತು ಉಪ್ಪು ಹಾಕಿಕೊಂಡು ಸೇವಿಸಬಹುದು. ಪುದೀನಾ ನೀರು ದೇಹವನ್ನು ಹೈಡ್ರೇಟ್ ಮಾಡುವುದು. ಇದರಿಂದ ದೇಹಕ್ಕೆ ಉಲ್ಲಾಸ ಮತ್ತು ತೃಪ್ತಿ ಸಿಗುವುದು.
ಪುದೀನಾದಲ್ಲಿ ಇರುವ ನೈಸರ್ಗಿಕ ಎಲೆಕ್ಟ್ರೋಲೈಟ್ಸ್ ಅಂಶವು ದೇಹವು ಕಳೆದುಕೊಂಡಿರುವ ಖನಿಜಾಂಶವನ್ನು ಒದಗಿಸುವುದು. ಇದರಿಂದ ಬೇಸಗೆಯಲ್ಲಿ ದೇಹ ನಿರ್ಜಲೀಕರಣಕ್ಕೆ ಒಳಗಾಗುವುದನ್ನು ತಪ್ಪಿಸಲು ಇದು ಸಹಕಾರಿ.
ಪುದೀನಾದಲ್ಲಿ ಇರುವ ತಂಪುಕಾರಕ ಗುಣಗಳ ಜತೆಗೆ ಇದು ಜೀರ್ಣಕ್ರಿಯೆಗೆ ಕೂಡ ತುಂಬಾ ಲಾಭಕಾರಿ ಆಗಿರುವುದು. ಪುದೀನಾ ಹಾಕಿರುವ ಪಾನೀಯ ಸೇವನೆ ಮಾಡಿದರೆ ಆಗ ಇದು ಜೀರ್ಣಕ್ರಿಯೆ ಸಮಸ್ಯೆಗಳಾಗಿರುವ ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ವಾಕರಿಕೆ ದೂರ ಮಾಡುವುದು.
ಪುದೀನಾವು ಜೀರ್ಣಕ್ರಿಯೆ ಕಿಣ್ವ ಉತ್ಪತ್ತಿಯನ್ನು ಉತ್ತೇಜಿಸುವುದು ಮತ್ತು ಜೀರ್ಣಕ್ರಿಯೆಯು ಆರೋಗ್ಯವಾಗಿಡುವುದು ಹಾಗೂ ಜಠರಕರುಳಿನ ಸಮಸ್ಯೆ ದೂರ ಮಾಡುವುದು. ಬೇಸಗೆ ಸಮಯದಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು ಅತೀ ಅಗತ್ಯ. ಇದನ್ನು ಪಾನೀಯವಾಗಿ ಸೇವನೆ ಮಾಡಬಹುದು ಅಥವಾ ಪುದೀನಾವನ್ನು ಮೈಗೆ ಹಚ್ಚಿಕೊಳ್ಳಬಹುದು.