This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

State News

ಹವಾಮಾನ ಆದಾರಿತ ಕೃಷಿ ಸಲಹೆಗಳು

ಹವಾಮಾನ ಆದಾರಿತ ಕೃಷಿ ಸಲಹೆಗಳು
———————————
ಬಾಗಲಕೋಟೆ

ಈ ಬೇಸಿಗೆಯಲ್ಲಿ ಮಧ್ಯ, ಪೂರ್ವ ಹಾಗೂ ವಾಯುವ್ಯ ಭಾರತವು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಗರಿಷ್ಟ ತಾಪಮಾನ ಮತ್ತು ಶಾಖದ ಅಲೆಗಳನ್ನು ಅನುಭವಿಸುವ ಸಾಧ್ಯತೆ ಇದ್ದು, ಹವಾಮಾನ ಆಧರಿತ ಕೃಷಿ ಸಲಹೆಗಳನ್ನು ಅನುಸರಿಸುವುದು ಸೂಕ್ತವೆಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞ ಬಸವರಾಜ ನಾಗಲೀಕರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಏಪ್ರೀಲ್ ತಿಂಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಜಾಸ್ತಿಯಾಗಿರಲಿದೆ. ಇದಕ್ಕನುಗುಣವಾಗಿ ಈಗಾಗಲೇ ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ 38 ರಿಂದ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಆದ್ದರಿಂದ ರೈತರು ಈ ಬೇಸಿಗೆಯಲ್ಲಿ ಈ ಕೆಳಗೆ ತಿಳಿಸಿದ ಕೆಲವು ಹವಾಮಾನಾಧಾರಿತ ಕೃಷಿ ಸಲಹೆಗಳನ್ನು ಅನುಸರಿಸುವುದು ಸೂಕ್ತವಾಗಿದೆ.
ತಾಪಮಾನ ಏರುತ್ತಿರುವುದರಿಂದ ಕೃಷಿ ಚಟುವಟಿಕೆಗಳನ್ನು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಕೈಗೊಳ್ಳಬೇಕು. ನೀರಾವರಿ ಆಶ್ರಯದಲ್ಲಿ ತಡವಾಗಿ ಬಿತ್ತಿದ ಬೆಳೆಗಳು ಕಟಾವಿನ ಹಂತದಲ್ಲಿದ್ದು ಬೇಸಿಗೆ ಅವಧಿಯಲ್ಲಿ ಅಡ್ಡಮಳೆ ಸಾಧ್ಯತೆ ಇರುವುದರಿಂದ ಕಟಾವನ್ನುಆದಷ್ಟು ಬೇಗನೆ ಮುಗಿಸಬೇಕು. ಹಾಗೂ ಕಟಾವು/ರಾಶಿ ಮಾಡಿದ ಬೆಳೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಬೇಕು.

ಬೇಸಿಗೆಯಲ್ಲಿ ತರಕಾರಿ ಬೆಳೆಯುತ್ತಿದ್ದರೆ ಗಿಡಗಳ ಕಾಂಡದ ಸುತ್ತಕಣಿಕೆ ಹೊಟ್ಟು ಹರಡುವುದರಿಂದ ಭೂಮಿಯ ತೇವಾಂಶ ಕಾಪಾಡಿಕೊಳ್ಳಬಹುದು. ಎರೆಹುಳು ಕೃಷಿ ಮಾಡುತ್ತಿರುವ ರೈತರು ಎರೆಹುಳು ಕುಣಿಯಲ್ಲಿ ಶೇ. 60 ರಷ್ಟು ತೇವಾಂಶ ನಿರಂತರವಾಗಿ ಇರುವಂತೆ ನೋಡಿಕೊಳ್ಳಬೇಕು. ಹಿಂಗಾರಿ ಬೆಳೆಗಳ ಕಟಾವಿನ ನಂತರ ಮಾಗಿ ಉಳುಮೆ ಮಾಡುವ ಮೊದಲು ಮಣ್ಣಿನ ಪೋಷಕಾಂಶಗಳ ಪರೀಕ್ಷೆ ಮಾಡಿಸಲು ಮಣ್ಣಿನ ಮಾದರಿಗಳನ್ನು ತೆಗೆಯಬೇಕು.

ದನದ ಕೊಟ್ಟಿಗೆಯ ಮೇಲ್ಛಾವಣಿಯ ಮೇಲೆ ಒಣಗಿದ ಹುಲ್ಲು ಅಥವಾ ಮರದ ಎಲೆಗಳನ್ನು ಹಾಕಿ ನೀರನ್ನು ಸಿಂಪಡಿಸಬೇಕು. ಇದರಿಂದ ಜಾನುವಾರುಗಳಿಗೆ ತಂಪಾದ ವಾತಾವರಣ ಸಿಗುತ್ತದೆ. ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡುವುದರಿಂದ ಭೂಮಿಯಲ್ಲಿರುವ ಕೀಟದ ಮೊಟ್ಟೆಗಳು, ಕೋಶಗಳು ಭೂಮಿಯ ಮೇಲೆ ಬಂದು ಬಿಸಿಲಿನ ಪ್ರಖರತೆಗೆ ಹಾಗೂ ನೈಸರ್ಗಿಕ ಶತ್ರುಗಳಿಗೆ ಆಹಾರವಾಗುತ್ತವೆ. ಮತ್ತು ಕಳೆಯ ಬೀಜಗಳು ಆಳಕ್ಕೆ ಹೋಗುವುದರಿಂದ ಕಳೆ ಬೀಜಗಳ ಮೊಳಕೆ ಪ್ರಮಾಣ ಕಡಿಮೆಯಾಗುತ್ತದೆ.

*ಫಸಲ್ ಬಿಮಾ ಯೋಜನೆ : ಆಕ್ಷೇಪಣೆಗೆ ಅರ್ಜಿ*
————————————-
ಬಾಗಲಕೋಟೆ:

ಕಳೆದ 2021-22 ನೇ ಸಾಲಿನ ಮುಂಗಾರು ಮತ್ತು ಹಿಂಗಾರು, ಬೇಸಿಗೆ ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಿರಸ್ಕøತ ಅರ್ಜಿಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಬಾಗಲಕೋಟೆ ತಾಲೂಕಿನ 2021-22 ನೇ ಸಾಲಿನ ಮುಂಗಾರು ಹಂಗಾಮಿನ-124, ಹಿಂಗಾರು ಹಂಗಾಮಿನ-39 ಮತ್ತು ಬೇಸಿಗೆ ಹಂಗಾಮಿನ-01, ಒಟ್ಟು 164 ಪ್ರಸ್ತಾವನೆಗಳು ವಿಮಾ ಸಂಸ್ಥೆಯಿಂದ ತಿರಸ್ಕøತವಾಗಿದ್ದು, ಈ ಮಾಹಿತಿಯನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕಛೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕಗಳ ಮೇಲೆ ಅಳವಡಿಸಲಾಗಿದೆ. ಈ ಕುರಿತು ಆಕ್ಷೇಪಣೆಗಳು ಇದ್ದಲ್ಲಿ ಮರು ಪರಿಶೀಲನೆಗೆ ರೈತರು ಪತ್ರಿಕೆಯಲ್ಲಿ ಪ್ರಕಟಣೆಗೊಂಡ 15 ದಿನಗಳೊಳಗಾಗಿ ಬೆಳೆ ವಿಮೆಗೆ ನೋಂದಣಿಯಾಗಿರುವ ಬೆಳೆಯನ್ನು ಬೆಳೆದಿರುವ ಕುರಿತು, ಅಗತ್ಯ ದಾಖಲಾತಿಯೊಂದಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಕೋರಲಾಗಿದೆ.
ಆಕ್ಷೇಪಣೆ ಸಲ್ಲಿಸಲು 2021-22 ರ ಪಹಣಿ ಪತ್ರಿಕೆಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು. ಬೆಂಬಲ ಬೆಲೆ ಪ್ರಯೋಜನೆ ಪಡೆದಿದ್ದಲ್ಲಿ, ರಶೀದಿ ನೀಡುವುದು. ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಂPಒಅ ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ, ರಶೀದಿಯನ್ನು ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಮತ್ತು ತೋಟಗಾಕೆ ಇಲಾಖೆಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಹಾಯಕ ಕೃಷಿ ನಿದೇಶಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.