ಲವಂಗದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಷಿಯಮ್, ರಂಜಕ, ಪೊಟ್ಯಾಷಿಯಮ್, ಸೋಡಿಯಂ ಹಾಗೂ ಸತು ಸೇರಿದಂತೆ ಹಲವಾರು ಫೋಷಕಾಂಶಗಳುಶಗಳು ಹೇರಳವಾಗಿದೆ. ಕಟುವಾದ ವಾಸನೆಯಿಂದ ಆಹಾರದ ಪದಾರ್ಥಗಳ ಘಮ ಹೆಚ್ಚಿಸುವ ಲವಂಗದಲ್ಲಿ ರೋಗನಿವಾರಕ ಗುಣವು ಅಡಗಿದೆ. ಹೀಗಾಗಿ ಹಿರಿಯರು ಆರೋಗ್ಯ ಸಮಸ್ಯೆಗಳಾದಾಗ ಲವಂಗವನ್ನು ಬಳಸಿ ಮನೆ ಔಷಧಿಯನ್ನು ತಯಾರಿಸಿ ಆರೋಗ್ಯ ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು.
ಲವಂಗವನ್ನು ಬಾಯಲ್ಲಿ ಹಾಕಿಕೊಂಡು ಅಗಿದು ರಸವನ್ನು ನುಂಗುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
* ಲವಂಗವನ್ನು ಬಾಯಿಯಲ್ಲಿಟ್ಟುಕೊಂಡು ಅಗಿಯುತ್ತಿದ್ದರೆ ಬಾಯಿಯ ದುರ್ವಾಸನೆ ದೂರವಾಗುತ್ತದೆ.
* ರಾತ್ರಿ ಮಲಗುವ ಮೊದಲು ಲವಂಗವನ್ನು ಸೇವಿಸಿ ಒಂದು ಕ್ಲಾಸ್ ಬಿಸಿ ನೀರನ್ನು ಸೇವಿಸುವುದರಿಂದ ಕೀಲು ನೋವು ಶಮನವಾಗುತ್ತದೆ.
* ಊಟದ ಬಳಿಕ ಲವಂಗ ತಿಂದು ಬಿಸಿನೀರು ಕುಡಿಯುವುದರಿಂದ ಸೊಂಟದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ.
* ನೆಗಡಿ ಸಮಸ್ಯೆಯಿಂದ ಬಳಲುತ್ತಿರುವವರು ನಾಲ್ಕೈದು ಲವಂಗ, ಎರಡು ಸ್ವಲ್ಪ ಪ್ರಮಾಣದಲ್ಲಿ ಕಾಳುಮೆಣಸು, ತುಳಸಿ ಎಲೆಯೊಂದಿಗೆ ಚೂರು ಶುಂಠಿ ಸೇರಿಸಿ ನೀರಿನಲ್ಲಿ ಕುದಿಸಿ, ಈ ನೀರಿಗೆ ಜೇನು ಸೇರಿಸಿ ಕುಡಿದರೆ ಪರಿಣಾಮಕಾರಿ ಔಷಧಿಯಾಗಿದೆ.
* ಲವಂಗವನ್ನು ಹುರಿದು, ಬಿಸಿಯಿರುವಾಗಲೇ ಹತ್ತಿಬಟ್ಟೆಯಲ್ಲಿ ಕಟ್ಟಿ ನೋವಿದ್ದ ಜಾಗಕ್ಕೆ ಶಾಖ ಕೊಡುವುದರಿಂದ ನೋವು ನಿವಾರಣೆಯಾಗುತ್ತದೆ.
* ಲವಂಗದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುತ್ತಿದ್ದರೆ ತಲೆನೋವು ಕಡಿಮೆಯಾಗುತ್ತದೆ.
* ರಾತ್ರಿ ಮಲಗುವ ಮುನ್ನ ಲವಂಗ ತಿಂದು ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂದರೆ ಕ್ಯಾನ್ಸರ್ ಕಾಯಿಲೆಗಳ ಅಪಾಯ ಮಟ್ಟವು ಕಡಿಮೆಯಾಗುತ್ತದೆ.
* ಲವಂಗವನ್ನು ಸಣ್ಣ ಹುರಿಯಲ್ಲಿ ಹುರಿದು, ಬೆಲ್ಲದೊಂದಿಗೆ ಸೇವಿಸುತ್ತಿರುವುರಿಂದ ಕೆಮ್ಮಿನ ಸಮಸ್ಯೆಗೆ ರಾಮಬಾಣವಾಗಿದೆ.
* ಲವಂಗವನ್ನು ಹಲ್ಲಿನ ನೋವಿರುವಲ್ಲಿ ಇಟ್ಟುಕೊಳ್ಳುವುದರಿಂದ ಹಲ್ಲು ನೋವಿನ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಬಹುದು.
* ಪಚ್ಚಕರ್ಪೂರ ಮತ್ತು ಲವಂಗವನ್ನು ಪುಡಿ ಮಾಡಿ ಹತ್ತಿಯೊಳಗೆ ಹಾಕಿಕೊಂಡು ನೋವಿರುವ ಹಲ್ಲಿನ ಬಳಿ ಇಟ್ಟುಕೊಂಡರೆ ಹಲ್ಲುನೋವು ಕಡಿಮೆಯಾಗುತ್ತದೆ.
* ಕಲ್ಲು ಉಪ್ಪಿನ ಜೊತೆ ಸೇರಿಸಿ ಲವಂಗವನ್ನು ತಿನ್ನುವುದರಿಂದ ಗಂಟಲಿನಲ್ಲಿ ಕಾಣಿಸಿಕೊಳ್ಳುವ ತುರಿಕೆ, ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.
* ದಿನ ನಿತ್ಯ ಲವಂಗವನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆಯು ಸರಿಯಾಗಿ ಆಗುತ್ತದೆ.
* ಪದೇ ಪದೇ ವಾಂತಿಯಾಗುತ್ತಿದ್ದಂತೆ ಲವಂಗ ಜಗಿದು ರಸವನ್ನು ನುಂಗುತ್ತಿದ್ದರೆ ವಾಂತಿಯಾಗುತ್ತಿದ್ದರೆ ನಿಂತು ಹೋಗುತ್ತದೆ.
* ಲವಂಗದ ಕಷಾಯ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದ ರಿಂದ ಹೊಟ್ಟೆ ಉಬ್ಬರವಿದ್ದರೆ ದೂರವಾಗುತ್ತದೆ.