This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

National NewsPolitics NewsState News

ಕಾಂಗ್ರೆಸ್ ಸರಕಾರ ವೈಫಲ್ಯ ಸಂಸದ ಜಿಗಜಿಣಗಿ ಹೇಳಿಕೆ

<span class=ಕಾಂಗ್ರೆಸ್ ಸರಕಾರ ವೈಫಲ್ಯ ಸಂಸದ ಜಿಗಜಿಣಗಿ ಹೇಳಿಕೆ" title="ಕಾಂಗ್ರೆಸ್ ಸರಕಾರ ವೈಫಲ್ಯ ಸಂಸದ ಜಿಗಜಿಣಗಿ ಹೇಳಿಕೆ" decoding="async" />

ವಿಜಯಪುರ:

ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ಸಂಪೂರ್ಣ ವೈಲ್ಯವಾಗಿದ್ದು, ಉಚಿತ ಗ್ಯಾರಂಟಿಗಳನ್ನು ಸಂಸತ್ ಚುನಾವಣೆವರೆಗೂ ಮಾತ್ರ ಮುಂದುವರಿಸುತ್ತಾರೆ. ಬಳಿಕ ಗ್ಯಾರಂಟಿಗಳನ್ನು ಕೈಬಿಡುತ್ತಾರೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ಚುನಾವಣೆ ಮುನ್ನ ನೀಡಿದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಸರಕಾರ ಏದುಸಿರು ಬಿಡುತ್ತಿದೆ. ಅಭಿವೃದ್ಧಿ ಕೆಲಸಗಳಂತೂ ಇಲ್ಲವೇ ಇಲ್ಲಘಿ. ಹುಡುಕಿದರೂ ಸಿಗುತ್ತಿಲ್ಲ. ಎಲ್ಲವನ್ನೂ ಉಚಿತವಾಗಿ ನೀಡುವುದರ ಮೂಲಕ ಸರಕಾರ ಸಂಪೂರ್ಣ ವೈಲ್ಯತೆ ಕಂಡಿದೆ ಎಂದರು. ಎಸ್‌ಸಿಪಿಟಿ ಯೋಜನೆಗೆ ಮೀಸಲಿರಿಸಿದ್ದ 30 ಕೋಟಿ ರೂ. ಹಣವನ್ನು ಕಿತ್ತುಕೊಂಡು ಬೇರೆ ಉದ್ದೇಶಕ್ಕೆ ಬಳಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಯಾರ್ಯಾರ ಬರ್ತಾರೆ ಬರಲಿ
ಬರುವ ಲೋಕಸಭೆ ಚುನಾವಣೆಯಲ್ಲಿ ವಿಜಯಪುರದಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಗಜಿಣಗಿ, ಬೇಡ ಅಂದವರ್ಯಾರು. ಬರಲಿ. ನನ್ನೂರಿಗೆ ಯಾರ್ಯಾರು ಬರುತ್ತಾರೆ ಬರಲಿ. ನಾನು ಮಾತ್ರ ಚುನಾವಣೆಯನ್ನು ಅಚ್ಚುಕಟ್ಟಾಗಿ ಎದುರಿಸುತ್ತೇನೆ ಎಂದರು.

 ಪಂಢರಪುರ ವಿಠ್ಠಲನ ದರ್ಶನಕ್ಕೆ ಅನುಕೂಲ

ಸುಕ್ಷೇತ್ರ ಪಂಢರಪುರಕ್ಕೆ ರೈಲ್ವೆ ಸೌಲಭ್ಯ
ವಿಕ ಸುದ್ದಿಲೋಕ ವಿಜಯಪುರ
ಮೈಸೂರು-ಸೊಲ್ಲಾಪೂರ ಗೋಲಗುಂಬಜ್ ಎಕ್ಸಪ್ರೆಸ್ ರೈಲ್ವೆಯನ್ನು ಶೀಘ್ರದಲ್ಲಿ ಪಂಢರಪುರವರೆಗೆ ವಿಸ್ತರಿಸಲಾಗುವುದು. ಈ ಕ್ರಮದಿಂದಾಗಿ ಪಂಢರಪುರ ವಿಠ್ಠಲನ ಭಕ್ತರಿಗೆ ಅನುಕೂಲವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಢರಪುರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂಬುದು ವಿಠ್ಠಲನ ಭಕ್ತರ ಬಹುದಿನಗಳ ಬೇಡಿಕೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಾನು ಈ ಸೌಲಭ್ಯ ಕಲ್ಪಿಸಲು ಮುಂದಾಗಿದ್ದೇನೆ. ಕರ್ನಾಟಕದ ಬಹುತೇಕ ಭಕ್ತರು ಪಂಢರಪುರಕ್ಕೆ ಭೇಟಿ ನೀಡುವುದು ವಾಡಿಕೆ. ಹಾಗಾಗಿ ರೈಲ್ವೆ ಮೂಲಕ ವಿಠ್ಠಲನ ದರ್ಶನವನ್ನು ಆರಾಮಾಗಿ ಪಡೆಯಬೇಕೆಂಬ ದೂರದೃಷ್ಟಿಯಿಂದ ಈ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಮುಖ್ಯವಾಗಿ ವಿಜಯಪುರ ಮತ್ತು ಸೊಲ್ಲಾಪುರ ಮಧ್ಯೆದ ರೈಲ್ವೆ ಪ್ರಯಾಣದ ಅವಧಿ ಈಗಿರುವ 3 ಗಂಟೆ ಬದಲಿಗೆ ಕೇವಲ 2 ಗಂಟೆ ತಗುಲಲಿದೆ. ಈ ರೈಲ್ವೆ ಬೆಳಗ್ಗೆ 8.30ಕ್ಕೆ ವಿಜಯಪುರದಿಂದ ಹೊರಟು ಸೊಲ್ಲಾಪುರಕ್ಕೆ 12.10ರ ಬದಲಿಗೆ 8.30ಕ್ಕೆ ತಲುಪಲಿದೆ. ನಂತರ 12.25ಕ್ಕೆ ಪಂಢರಪುರ ತಲುಪಲಿದೆ. ಪುನಃ ಈ ರೈಲ್ವೆ ಮಧ್ಯಾಹ್ನ 1ಕ್ಕೆ ಹೊರಟು, 3.30ಕ್ಕೆ ಸೊಲ್ಲಾಪುರ, ವಿಜಯಪುರ ಸಂಜೆ ಎಂದಿನಂತೆ 5.445ಕ್ಕೆ ಬೆಂಗಳೂರಿನತ್ತ ಹೊರಡಲಿದೆ ಎಂದರು.

ಹೊಸ ರೈಲ್ವೆಗಳು:

ಮುಂಬಯಿ-ಗದಗ ನಿತ್ಯದ ಸೂಪರ್ ಾಸ್ಟ್ ರೈಲ್ವೆಯನ್ನು ವಿಜಯಪುರ ಮೂಲಕ ಹೊಸಪೇಟೆವರೆಗೆ ಶೀಘ್ರದಲ್ಲಿ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ರೈಲ್ವೆ ಬೆಳಗ್ಗೆ 7.30ಕ್ಕೆ ವಿಜಯಪುರದಿಂದ ಹೊರಟು 10.40ಕ್ಕೆ ಗದಗ ತಲುಪಲಿದೆ. ಅಲ್ಲಿಂದ 10.45ಕ್ಕೆ ಹೊರಟು, ಮಧ್ಯಾಹ್ನ 12.45ಕ್ಕೆ ಹೊಸಪೇಟೆ ತಲುಪಲಿದೆ. ಪುನಃ ಅದೇ ರೈಲ್ವೆ ಮಧ್ಯಾಹ್ನ 2ಗಂಟೆಗೆ ಹೊರಟು ಗದಗ 3.25ಕ್ಕೆ ವಿಜಯಪುರಕ್ಕೆ ಸಂಜೆ 6.30ಕ್ಕೆ ತಲುಪಿ, ಸೊಲ್ಲಾಪುರ ಮಾರ್ಗವಾಗಿ ಬೆಳಗ್ಗೆ 5.10ಕ್ಕೆ ಮುಂಬಯಿ ತಲುಪಲಿದೆ ಎಂದರು.

ಈ ರೈಲ್ವೆ ಸಂಚಾರದಿಂದ ವಿಜಯಪುರ-ಮುಂಬಯಿ ಹಾಗೂ ಗದಗ ಮಧ್ಯೆ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ ಎಂದರು. ಸೊಲ್ಲಾಪುರ-ಗದಗ ಎಕ್ಸ್‌ಪ್ರೆಸ್ ರೈಳ್ವೆಯನ್ನು ಹೊಸಪೇಟೆಯವರೆಗೂ ವಿಸ್ತರಿಸಲಾಗುವುದು. ವಿಜಯಪುರ-ಮಂಗಳೂರು ಎಕ್ಸಪ್ರೆಸ್ ದೈನಂದಿನ ರೈಲ್ವೆ ಉತ್ತರ ಕರ್ನಾಟಕದಿಂದ ಕರಾವಳಿ ಕರ್ನಾಟಕ ಸಂಪರ್ಕಿಸುವ ಮೊದಲ ರೈಲ್ವೆ ಇದಾಗಿದೆ. ಈ ರೈಲ್ವೆ ಮೂಲಕ ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಮತ್ತು ಸುತ್ತಮುತ್ತಲಿನ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗಿದೆ ಎಂದರು.
ವಿಜಯಪುರ-ಹುಬ್ಬಳ್ಳಿ ಇಂಟರ್ ಸಿಟಿ ಎಕ್ಸಪ್ರೆಸ್ ರೈಲ್ವೆ ಹೊಸಪೇಟೆ ಕೊಟ್ಟೂರು ಮಾರ್ಗವಾಗಿ ವಿಜಯಪುರ-ಯಶವಂತಪುರ ಎಕ್ಸಪ್ರೆಸ್ ಈ ರೈಲ್ವೆಯನ್ನು ಸಾಮಾನ್ಯ ರೈಲ್ವೆಯಾಗಿ ಪರಿವರ್ತಿಸುವ ಪ್ರಯತ್ನಗಳು ನಡೆದಿವೆ. ವಿಜಯಪುರ ಸೋಲಾಪುರ ಮೂಲಕ ಹುಬ್ಬಳ್ಳಿ ವಾರಣಾಸಿ ಸಾಪ್ತಾಹಿಕ ಎಕ್ಸಪ್ರೆಸ್ ರೈಲ್ವೆ ಕಾಶಿ ವಿಶ್ವನಾಥ ದರ್ಶನ ಪಡೆಯಲು ಅಥವಾ ಪ್ರಯಾಗ ರಾಜ್ಯದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಇದು ಸಹಾಯಕವಾಗಲಿದೆ ಎಂದರು.

ವಿಜಯಪುರ ಮತ್ತು ಸೊಲ್ಲಾಪೂರ ಮೂಲಕ ಹುಬ್ಬಳ್ಳಿ ನಿಜಾಮುದ್ದೀನ್ ಸಾಪ್ತಾಹಿಕ ಸೂಪರ್-ಾಸ್ಟ್ ರೈಲ್ವೆ, ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ಸಾಧ್ಯವಾಗಿದೆ. ಕಳೆದ 10 ವರ್ಷಗಳಿಂದ ಈ ರೈಲ್ವೆಗೆ ಬೇಡಿಕೆಯಿತ್ತು. ಇದನ್ನು ಕಾರ್ಯರೂಪಕ್ಕೆ ತಂದಿದ್ದಾಗಿ ತಿಳಿಸಿದರು. ಈ ರೈಲ್ವೆಯ ಫ್ರಿಕ್ವೆನ್ಸಿ ಹೆಚ್ಚಿಸಲು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾಗಿ ತಿಳಿಸಿದರು.

9 ವರ್ಷಗಳಲ್ಲಿ ರೈಲ್ವೆಗೆ 1311 ಕೋಟಿ ಖರ್ಚು
9 ವರ್ಷಗಳ ಆಚೆ ಜಿಲ್ಲೆಯ ವ್ಯಾಪ್ತಿಯ ರೈಲ್ವೆ ಇಲಾಖೆಯಲ್ಲಿ ಮೂಲ ಸೌಲಭ್ಯಗಳಿರಲಿಲ್ಲ. ಆದರೆ ನಾನು ಕಳೆದ 9 ವರ್ಷಗಳ ಅವಧಿಯಲ್ಲಿ ರೈಲ್ವೆ ಇಲಾಖೆಗೆ ಶಕ್ತಿ ತುಂಬಿದ್ದು, ಒಟ್ಟು 1,311 ಕೋಟಿ ರೂ. ಖರ್ಚು ಮಾಡಿ, ಇಲಾಖೆಯನ್ನು ಬಲಪಡಿಸಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ವಿಜಯಪುರ ರೈಲ್ವೆ ನಿಲ್ದಾಣ ನವೀಕರಿಸಿದ್ದೇನೆ. ರೈಲ್ವೆ ಜಾಲ ವಿಸ್ತರಿಸಿದ್ದೇನೆ. ಹೊಟಗಿಯಿಂದ ಎನ್‌ಟಿಪಿಸಿಯವರೆಗೆ ಡಬಲ್ ರೈಲ್ವೆ ಟ್ರ್ಯಾಕ್ ನಿರ್ಮಾಣ, 75 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ತೀಕರಣ, ಮೇಲ್ಸೆತುವೆ (ಆರ್‌ಒಬಿ) ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸೊಲ್ಲಾಪುರ ಮತ್ತು ವಂದಾಲ್ ನಿಲ್ದಾಣಗಳ ನಡುವೆ ವಿದ್ಯುದ್ದೀಕರಣದೊಂದಿಗೆ ಡಬ್ಲಿಂಗ್ ಪೂರ್ಣಗೊಳಿಸಲಾಗಿದೆ. ವಂದಾಲದಿಂದ ಗದಗ ನಿಲ್ದಾಣಗಳ ಮಧ್ಯೆ ಕಾಮಗಾರಿ ಭರದಿಂದ ನಡೆದಿದೆ. 2024ರ ಮಾರ್ಚ್ ಅಂತ್ಯದೊಳಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.
ವಿಜಯಪುರ-ಹೈದರಾಬಾದ್ ಮತ್ತು ವಿಜಯಪುರ-ರಾಯಚೂರು (ರೈಲು ಸಂಖ್ಯೆ 07663/07654) ಮಧ್ಯೆ ಈಗಾಗಲೇ ಎಲೆಕ್ಟ್ರಿಕ್ ರೈಲ್ವೆಗಳು ಸಂಚರಿಸುತ್ತಿವೆ. ಕೂಡಗಿ ಉಷ್ಣ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸುವ ಗೂಡ್ಸ್ ರೈಲ್ವೆಗಳು ವಿದ್ಯುತ್ ಲೋಕೋದಿಂದ ಚಲಿಸುತ್ತಿವೆ. ಬಾಗಲಕೋಟೆ ರಸ್ತೆಯ ವಜ್ರ ಹನುಮಾನ ನಗರ ಮತ್ತು ಬಸವನಬಾಗೇವಾಡಿ ರಸ್ತೆಯ ಇಬ್ರಾಹಿಂಪುರದಲ್ಲಿ ರೈಲ್ವೆ ಮೇಲೆ ಮೇಲ್ಸೆತುವೆಗಳ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ ಎಂದರು.

ಇಂಡಿ ರಸ್ತೆಯಲ್ಲಿರುವ ಕಿರಾಣಾ ಮಾರುಕಟ್ಟೆಯ ಬಳಿ ಆರ್‌ಒಬಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಸಿಮೆಂಟ್, ರಸಗೊಬ್ಬರಗಳು, ಆಹಾರ ಧಾನ್ಯಗಳು ಮತ್ತು ಇತರ ಸರಕುಗಳನ್ನು ಸಾಗಿಸುವ ರೈಲ್ವೆಗಳ ಎಲ್ಲ ಲೋಡಿಂಗ್, ಅನ್ ಲೋಡಿಂಗ್ ಮತ್ತಿತರೆ ಕಾರ್ಯಗಳನ್ನು ಅಲಿಯಾಬಾದ್‌ನಲ್ಲಿ ನಿರ್ವಹಿಸಲು 20 ಕೋಟಿ ರೂ. ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುವ ಮೂಲಕ ವಾಣಿಜ್ಯ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದರು.

ಅಮೃತ ನಿಲ್ದಾಣದಲ್ಲಿ ವಿಜಯಪುರ ಸೇರ್ಪಡೆ
ಅಮೃತ ನಿಲ್ದಾಣ ಯೋಜನೆಯಡಿ ವಿಜಯಪುರ ರೈಲ್ವೆ ನಿಲ್ದಾಣ ಸೇರ್ಪಡೆಯಾಗಿದೆ. ನಿಲ್ದಾಣದ ಯಾರ್ಡ್‌ನ್ನು 28 ಕೋಟಿ ರೂ. ವೆಚ್ಚದಲ್ಲಿ ಆಧುನಿಕರಣಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಮೊದಲ ಹಂತದ ಕಾಮಗಾರಿ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ವಿಜಯಪುರದಲ್ಲಿ ರೈಲ್ವೆಗಳ ನಿರ್ವಹಣೆಗಾಗಿ 4 ಪ್ಲಾಟ್‌ಾರ್ಮ್‌ಗಳನ್ನು ಮತ್ತು ಪಿಟ್ ಲೈನ್ ನಿರ್ಮಿಸಲಾಗುತ್ತಿದೆ. ಇದರಿಂದ ವಿಜಯಪುರದಿಂದ ತಿರುಪತಿ, ವಿಜಯವಾಡ, ಕನ್ಯಾಕುಮಾರಿ ಮುಂತಾದ ಊರುಗಳಿಗೆ ನೇರ ಸಂಪರ್ಕ ಹೊಂದಿರದ ಅನೇಕ ನಿಲ್ದಾಣಗಳಿಗೆ ನೇರ ಹೊಸ ರೈಲ್ವೆಗಳನ್ನು ಆರಂಭಿಸಲು ಸಹಾಯವಾಗುತ್ತದೆ ಎಂದರು.