This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Education NewsLocal NewsNational NewsPolitics NewsState News

ಸಹಕಾರ ಶಕ್ತಿ ದೊಡ್ಡದು:ರವೀಂದ್ರ ಕಲಬುರ್ಗಿ

ಸಹಕಾರ ಶಕ್ತಿ ದೊಡ್ಡದು:ರವೀಂದ್ರ ಕಲಬುರ್ಗಿ

ನಿಮ್ಮ ಸುದ್ದಿ ಬಾಗಲಕೋಟೆ

ಪರಸ್ಪರ ಸಹಕಾರದಿಂದಲೇ ಎಲ್ಲ ಕೆಲಸಗಳು ಸುಲಲಿತವಾಗುತ್ತವೆ. ಇದು ಕುಟುಂಬವೂ ಸೇರಿದಂತೆ ಸಹಕಾರಿ ರಂಗಕ್ಕೆ ಅವಶ್ಯಕವಾಗಿದೆ ಎಂದು ಸೂಳೇಬಾವಿಯ ಗಾಯತ್ರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ಶಾಖಾಂಬರಿ ಕಲ್ಯಾಣ ಮಂಟಪದಲ್ಲಿ ಗಾಯತ್ರಿ ಬ್ಯಾಂಕ್‌ನ 29ನೇ ವಾರ್ಷಿಕ ಸರ್ವ ಸಾಧಾರಣೆ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. 1996 ರಲ್ಲಿ 686 ಜನ ಸದಸ್ಯರೊಂದಿಗೆ ಆರಂಭವಾದ ಸಂಘ ಇಂದು ಬೃಹದಕಾರವಾಗಿ ಬೆಳೆದು 14,290 ಸದಸ್ಯರನ್ನು ಹೊಂದಿದ್ದು 200 ಕೋಟಿ ರೂ. ಠೇವಣಿ ಹೊಂದಿದೆ ಎಂದರು.

ಕಳೆದ 28 ವರ್ಷಗಳಿಂದ ಮುನ್ನಡೆಯುತ್ತಿರುವ ಬ್ಯಾಂಕ್‌ಗೆ ಆಡಳಿತ ಮಂಡಳಿ, ಸಿಬ್ಬಂದಿ, ಸಲಹಾ ಸಮಿತಿ ಸೇರಿದಂತೆ ನಮ್ಮ ಮೇಲೆ ವಿಶ್ವಾಸವಿಟ್ಟ ಗ್ರಾಹಕರು ಏಳಿಗೆಗೆ ಕಾರಣರಾಗಿದ್ದಾರೆ. ಸಂಘದ ವ್ಯಾಪ್ತಿಯಲ್ಲಿ ಹಲವು ಜಿಲ್ಲೆಗಳಲ್ಲಿ ಶಾಖೆ ಆರಂಭಿಸಿ 200ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ. ಇತ್ತೀಚಿನ ನಾಲ್ಕೆöÊದು ವರ್ಷದಲ್ಲಿ ಸಂಘದ ತ್ವರಿತ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಗ್ರಾಹಕರಿಗೆ ಕೊಟ್ಟ ಭರವಸೆಗೆ ಮೋಸ ಮಾಡದೆ ಸಂಘ ಅಭಿವೃದ್ಧಿಯತ್ತ ಸಾಗಿದೆ ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಗ್ರಾಮೀಣ ಪ್ರದೇಶದ ಬಡವರ ಆರ್ಥಿಕ ಸ್ಥಿತಿಗತಿ ಸುಧಾರಣೆಯ ಉದ್ದೇಶವಿಟ್ಟುಕೊಂಡು ಆರಂಭವಾದ ಸಂಘ ಇಂದು ಸಾವಿರಾರು ಜನರಿಗೆ ಆಸರೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿನ ಬೇಡಿಕೆಗೆ ತಕ್ಕಂತೆ ಸೌಲಭ್ಯ ಒದಗಿಸುತ್ತಿರುವುದು ಉತ್ತಮ ಬೆಳವಣಿಗೆಗೆ ಆಗಿದ್ದು ಇತರೆ ಸಂಘಗಳಿಗೆ ಗಾಯತ್ರಿ ಪತ್ತಿನ ಸಂಘ ಮಾದರಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ 70 ವಿದ್ಯಾರ್ಥಿಗಳಿಗೆ, 52 ಜನ ಅತ್ಯುತ್ತಮ ಗ್ರಾಹಕರು, ಉತ್ತಮ ಪಿಗ್ಮಿ ಸಂಗ್ರಹಕಾರರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಗ್ರಾಪಂ ಮಾಜಿ ಅಧ್ಯಕ್ಷ ಮಹಾಂತಪ್ಪ ಭದ್ರಣ್ಣವರ, ನಿರ್ದೇಶಕರಾದ ಮಲ್ಲೇಶಪ್ಪ ಧೂಪದ, ಲುಮ್ಮಣ್ಣ ಕಣಗಿ, ಜಗನ್ನಾಥ ಗಾಡಿ, ಶಂಕ್ರಪ್ಪ ಜನಿವಾರದ, ರೋಮಣ್ಣ ಧುತ್ತರಗಿ, ಹನಮಂತ ಕತ್ತಿ, ಸುಭಾಷ ಭಾಪ್ರಿ, ಹನಮಂತ ಒಡ್ಡೋಡಗಿ, ಮಹೇಶ ಜೀರಗಿ, ಸಕ್ಕೂಬಾಯಿ ಇಜೇರಿ, ಲಕ್ಷಿö್ಮಬಾಯಿ ಹನಮಸಾಗರ, ರೋಮಣ್ಣ ಭಜಂತ್ರಿ, ನಾಗಪ್ಪ ವಾಲ್ಮೀಕಿ, ಮೈಬೂಬಸಾಬ್ ಮುಲ್ಲಾ, ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ ಸೇರಿದಂತೆ ನಾನಾ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಶಾಖೆ ವ್ಯವಸ್ಥಾಪಕರು, ಸಿಬ್ಬಂದಿ ಇದ್ದರು.

 

Nimma Suddi
";