ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಕೋವಿಡ್‌ನ ಮಹಾಸ್ಪೋಟವಾಗಿದ್ದು ಶನಿವಾರ ಒಂದೇ ದಿನ ೧,೫೬೩ ಜನರಿಗೆ ಕೋವಿಡ್ ಸೋಂಕು ತಗುಲಿದೆ.
ಮೇ ತಿಂಗಳ ಆರಂಭದಿಂದ ಒಂದು ವಾರದೊಳಗೆ ಒಟ್ಟು ೫,೮೫೩ ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೆ, ೨,೧೪೪ ಜನ ಗುಣಮುಖರಾಗಿದ್ದು ೫೦ ಜನ ಮೃತಪಟ್ಟಿದ್ದಾರೆ.
ಮೊದಲ ಅಲೆಗಿಂತಲೂ ಎರಡನೇ ಅಲೆ ಹೊಡೆತ ಹೇಗಿದೆ ಎಂಬುದು ಈ ಸಂಖ್ಯೆಯಿAದಲೇ ತಿಳಿಯುತ್ತದೆ. ಹೊಸದಾಗಿ ಸೋಂಕು ದೃಢಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲೇ ೫೩೭ ಜನರಿದ್ದಾರೆ. ಉಳಿದಂತೆ ಬಾದಾಮಿ ೨೦೫, ಬೀಳಗಿ ೧೧೦, ಜಮಖಂಡಿ ೨೭೦, ಮುಧೋಳ ೧೯೦ ಹಾಗೂ ಹುನಗುಂದದಲ್ಲಿ ೨೫೧ ಜನರಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್‌ನಿಂದ ೩೩೬ ಜನ ಗುಣಮುಖರಾಗಿದ್ದಾರೆ. ಇನ್ನೂ ೧,೯೫೦ ಸ್ಯಾಂಪಲ್ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ೨೩,೧೩೮ ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು ೧೭,೨೬೬ ಜನ ಗುಣಮುಖರಾಗಿದ್ದಾರೆ.
ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು ೫,೭೩,೦೨೦ ಸ್ಯಾಂಪಲ್ ಪರೀಕ್ಷೀಸಲಾಗಿದ್ದು, ಈ ಪೈಕಿ ೫,೪೭,೩೩೨ ನೆಗಟಿವ್ ಪ್ರಕರಣ, ಹಾಗೂ ೧೮೬ ಮೃತ ಪ್ರಕರಣಗಳು ವರದಿಯಾಗಿರುತ್ತದೆ. ಇನ್ನು ೫,೬೮೬ ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು ೪೯೮ ಸ್ಯಾಂಪಲ್ ಮಾತ್ರ ರಿಜೆಕ್ಟ ಆಗಿರುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.