This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Entertainment News

ಉಪೇಂದ್ರ ನಿರ್ದೇಶನದ ಕಲ್ಟ್ ಕ್ಲಾಸಿಕ್ ಸಿನಿಮಾ ಮತ್ತೊಮ್ಮೆ ರಿಲೀಸ್

ಉಪೇಂದ್ರ ನಿರ್ದೇಶನದ ಕಲ್ಟ್ ಕ್ಲಾಸಿಕ್ ಸಿನಿಮಾ ಮತ್ತೊಮ್ಮೆ ರಿಲೀಸ್

ಸ್ಟಾರ್ ನಟರ ಸಿನಿಮಾಗಳು ಮಾತ್ರವೇ ಅಲ್ಲದೆ ಬಿಡುಗಡೆ ಆದಾಗ ಹೊಸ ಅಲೆ ಎಬ್ಬಿಸಿದ್ದ ಸಿನಿಮಾಗಳನ್ನು ಮರು ಬಿಡುಗಡೆ ಮಾಡಿ ಭಾರಿ ಕಮಾಯಿಯನ್ನೇ ತೆಲುಗಿನ ನಿರ್ಮಾಪಕರು ಇತ್ತೀಚೆಗೆ ಮಾಡುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಇದೀಗ ಈ ಟ್ರೆಂಡ್ ಕನ್ನಡಕ್ಕೂ ಹಬ್ಬಿದೆ. ಕನ್ನಡದಲ್ಲಿ ಆಯ್ದೆ ಕೆಲವು ಸಿನಿಮಾಗಳನ್ನಷ್ಟೆ ಮರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗ ಲೋಕಸಭೆ ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು ಮುಂದಾಗಿದ್ದಾರೆ.

ನಿನ್ನೆ (ಮೇ 10) ಯಷ್ಟೆ ದಿವಂಗತ ಪುನೀತ್ ರಾಜ್​ಕುಮಾರ್ ನಟಿಸಿದ್ದ ಎರಡು ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗಿದ್ದವು. ಅಪ್ಪು ಹಾಗೂ ತ್ರಿಷಾ ನಟಿಸಿದ್ದ ‘ಪವರ್’ ಹಾಗೂ ಪುನೀತ್ ರಾಜ್​ಕುಮಾರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದ ‘ಅಂಜನಿಪುತ್ರ’ ಸಿನಿಮಾಗಳು ನಿನ್ನೆ ಬಿಡುಗಡೆ ಆಗಿದ್ದವು. ತಮ್ಮ ಮೆಚ್ಚಿನ ನಾಯಕನ ಎರಡು ಸಿನಿಮಾಗಳನ್ನು ಒಂದೇ ದಿನ ಬಿಡುಗಡೆ ಮಾಡಿ, ಪರಸ್ಪರ ಸಿನಿಮಾಗಳು ಸ್ಪರ್ಧೆಗಳು ಬೀಳುವಂತೆ ಮಾಡಿದ ನಿರ್ಮಾಪಕರ ವಿರುದ್ಧ ಅಪ್ಪು ಅಭಿಮಾನಿಗಳು ಅಸಮಾಧಾನವನ್ನು ಹೊರಹಾಕಿದರು.

ಸಾಂಪ್ರದಾಯಿಕ ಕತೆ ಹೇಳುವ ಪದ್ಧತಿಯನ್ನು ನುಚ್ಚು ನೂರು ಮಾಡಿದ್ದ ಉಪೇಂದ್ರ ‘ಎ’ ಸಿನಿಮಾ ಮೂಲಕ ಭಿನ್ನ ವ್ಯಕ್ತಿಯ ಕತೆಯನ್ನು ಅಷ್ಟೆ ಭಿನ್ನವಾಗಿ ಹೇಳಿದ್ದರು. ಸಿನಿಮಾದ ನಾಯಕ, ನಾಯಕಿಗೆ ಆ ಹಿಂದೆ ಇದ್ದ ಎಲ್ಲ ಗಡಿಗಳನ್ನು ಒಡೆದು ನಾಯಕನನ್ನು ಬಹಳ ಭಿನ್ನವಾಗಿ ತೋರಿಸಿದ್ದರು. ಈ ಸಿನಿಮಾಕ್ಕೆ ಉಪೇಂದ್ರ ಬರೆದಿದ್ದ ಚುರುಕು ಸಂಭಾಷಣೆಗಳು ಈಗಲೂ ಜನಪ್ರಿಯ. ಈ ಸಿನಿಮಾದ ಹಾಡುಗಳು ಸಹ ಎವರ್​ಗ್ರೀನ್. ಈ ಸಿನಿಮಾದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದು ಅದನ್ನೇ ಎನ್​ಕ್ಯಾಶ್ ಮಾಡಿಕೊಳ್ಳುವ ಉದ್ದೇಶದಿಂದ ‘ಎ’ ಸಿನಿಮಾವನ್ನು ಈಗ ಮರು ಬಿಡುಗಡೆ ಮಾಡಲಾಗುತ್ತಿದೆ.

ಇದೀಗ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ಕಲ್ಟ್ ಕ್ಲಾಸಿಕ್ ಸಿನಿಮಾ ಒಂದನ್ನು ಮರು ಬಿಡುಗಡೆ ಮಾಡಲಾಗಿದೆ. ಉಪೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದ ‘ಎ’ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಲಾಗುತ್ತಿದೆ. 1998 ರಲ್ಲಿ ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿತ್ತು. ಆ ವರೆಗೆ ಕೇವಲ ನಿರ್ದೇಶಕನಾಗಿ ಹಾಗೂ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡುತ್ತಿದ್ದ ಉಪ್ಪಿ ಈ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕ ನಟರಾದರು. ಇದೀಗ ಈ ಸಿನಿಮಾ ಮೇ 17 ರಂದು ಮರು ಬಿಡುಗಡೆ ಆಗಲಿಕ್ಕಿದೆ.

Nimma Suddi
";