This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Entertainment News

ಅಸಹ್ಯಪಟ್ಟುಕೊಂಡ ನೀನಾ ಗುಪ್ತಾ:‘ಹಣಕ್ಕಾಗಿ ಆ ರೀತಿಯ ಪಾತ್ರಗಳನ್ನು ಮಾಡಬೇಕಾಯಿತು

ಅಸಹ್ಯಪಟ್ಟುಕೊಂಡ ನೀನಾ ಗುಪ್ತಾ:‘ಹಣಕ್ಕಾಗಿ ಆ ರೀತಿಯ ಪಾತ್ರಗಳನ್ನು ಮಾಡಬೇಕಾಯಿತು

ನೀನಾ ಗುಪ್ತಾ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಅವರು ‘ಪಂಚಾಯತ್​’ ಸೀರಿಸ್​ನಲ್ಲಿ ಮಂಜು ದೇವಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ವೆಬ್ ಸೀರಿಸ್​ಗೆ ಮೂರನೇ ಸೀಸನ್ ಬರುತ್ತಿದೆ. ಮೇ 28ರಂದು ‘ಪಂಚಾಯತ್ 3’ ರಿಲೀಸ್ ಆಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ.

1982ರಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ನೀನಾ ಗುಪ್ತಾ ಆ್ಯಕ್ಟೀವ್ ಆಗಿದ್ದಾರೆ. ಮೊದಲು ನಟಿಯಾಗಿ ಮಿಂಚಿದ್ದ ಅವರು ಈಗ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ನಾನು ದೆಹಲಿಯಿಂದ ಬಂದವಳು. ನನಗೆ ಆರಂಭದಲ್ಲಿ ಮುಂಬೈ ಹೊಂದಾಣಿಕೆ ಆಗಲಿಲ್ಲ. ನಾನು ಮರಳಿ ದೆಹಲಿಗೆ ಹೋಗಿ ಪಿಚ್​ಡಿ ಪೂರ್ಣಗೊಳಸಬೇಕು ಎಂದುಕೊಂಡೆ. ಆದರೆ, ಈ ನಗರ ನನ್ನನ್ನು ಬಿಡಲಿಲ್ಲ. ಅನೇಕ ಬಾರಿ ಈ ರೀತಿ ಆಗಿದೆ’ ಎಂದಿದ್ದಾರೆ ಅವರು.

‘ಮೊದಲು ಹಣದ ಅವಶ್ಯಕತೆ ತುಂಬಾನೇ ಇತ್ತು. ಕೆಟ್ಟ ಪಾತ್ರ, ಸಿನಿಮಾಗಳನ್ನು ಮಾಡಬೇಕಾಯಿತು. ಈ ಸಿನಿಮಾ ರಿಲೀಸ್ ಆಗದೇ ಇರಲಿ ಎಂದು ದೇವರ ಬಳಿ ಕೋರಿಕೊಳ್ಳುತ್ತಿದ್ದೆ. ನಾನು ಈಗ ಸಿನಿಮಾ ಆಫರ್​ನ ತಿರಸ್ಕರಿಸಬಹುದು. ನನಗೆ ಇಷ್ಟವಾದ ಸಿನಿಮಾಗಳನ್ನು ಮಾತ್ರ ಮಾಡುತ್ತೇನೆ’ ಎಂದಿದ್ದಾರೆ ನೀನಾ ಗುಪ್ತಾ.

ಈ ಮಧ್ಯೆ ಅವರು ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ನೀನಾ ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾತೆ. ಇದರಲ್ಲಿ ಕೆಲವು ಕೆಟ್ಟ ಪಾತ್ರಗಳೂ ಇವೆ. ಆ ರೀತಿಯ ಪಾತ್ರಗಳ ಆಯ್ಕೆಗೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

";