This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

200ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ಮನೆಗೊಸ್ಕರ ಯಾರಿಗೂ ಹಣಕೊಡಬೇಡಿ: ಶಾಸಕ ಚರಂತಿಮಠ

ಬಾಗಲಕೋಟೆ

ಬಹುದಿನದ ಬೇಡಿಕೆಯಾಗಿದ್ದ ಹಕ್ಕು ಪತ್ರ ವಿತರಣೆ ಇಂದು ಅಂದಾಜು ೨೦೦ ಜನರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಇನ್ನೊಂದು ವಾರದಲ್ಲಿ ಇನ್ನುಳಿದ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಬೇಣ್ಣೂರ ಗ್ರಾಮದಲ್ಲಿ
ಗ್ರಾಮ ಪಂಚಾಯತಿ ಬೆಣ್ಣೂರವತಿಯಿಂದ
ಹಮ್ಮಿಕೊಂಡ ವತಿಯಿಂದ ನಿವೇಶನ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ಮನೆಗಳನ್ನು ಕೊಡಿಸುತ್ತೇವೆ ಎಂದು ಐದು, ಹತ್ತು,ಮೂವತ್ತು ಸಾವಿರ ಕೇಳುವವರ ನಂಬಿ ಹಣ ಕೊಟ್ಟು ಮೋಸ ಹೋಗಬೇಡಿ. ಸರ್ಕಾರ ಅರ್ಹ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ ನೀಡುತ್ತದೆ. ಈಗಾಗಲೇ ತಳಗಿಹಾಳ‌, ಬೇಣ್ಣೂರ, ಶಿರಗುಪ್ಪಿ, ಇಲಾಳ, ಗ್ರಾಮದ ೨೦೦ಜನರಿಗೆ ಹಕ್ಕು ಪತ್ರಗಳು ವಿತರಣೆ ಮಾಡಿದ್ದೆವೆ.ಇನ್ನೂಳಿದ‌ ಹಕ್ಕು ಪತ್ರಗಳನ್ನು ಎರಡು ದಿನದಲ್ಲಿ ವಿತರಿಸಲಾಗುವುದು. ನಿಮ್ಮ ಮನೆಯ ಹಕ್ಕು ಪತ್ರ ಪಡೆದುಕೊಂಡು ಮುಂದೆ‌ ಪಂಚಾಯತಯಲ್ಲಿ ಉತಾರ ಪಡೆಯಬಹುದಾಗಿದೆ.ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ‌‌ ಅಧ್ಯಕ್ಷ ಸುರೇಶ ಕೊಣ್ಣೂರ,ಶಂಕರಪ್ಪ ರಾಂಪುರ. ರಾಚಪ್ಪ ಬೀಳಗಿ ಹನಮಂತ ಶಿಕ್ಕೇರಿ.ಗವಿಸಿದ್ದಪ್ಪ ತೋಟಗೇರ, ಈರಪ್ಪ ಬಾಗೇವಾಡಿ.ಮಲ್ಲಪ್ಪ ಬೂದಿಹಾಳ.ಸಿದ್ದಪ್ಪ ಕೊಣ್ಣೂರ, ಸಿದ್ದು ದಟ್ಟಿ. ಅಪ್ಪಣ್ಣ ಮಾಳಿ.ಶೇಕಪ್ಪ ಕೊಣ್ಣೂರ ಅಪ್ಪಣ್ಣಹಿರೇನಾಯಕ.
ವಿರೂಪಾಕ್ಷ ಹಂಡೆನ್ನವರು. ಸಿದ್ದಯ್ಯ ಮಠಪತಿ
ಮಲ್ಲಯ್ಯ ಛಬ್ಬಿ, ಬಸಪ್ಪ ಬಾಗೇವಾಡಿ.ಗಣೇಶ ಇಲಾಳ,
ಬೆಣ್ಣೂರ ಗ್ರಾಮದ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Nimma Suddi
";