This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Education NewsLocal NewsState News

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ, ಅಪಘಾತ ತಡೆಗೆ ಕ್ರಮ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ, ಅಪಘಾತ ತಡೆಗೆ ಕ್ರಮ

ಬಾಗಲಕೋಟೆ

ಅಪಘಾತ ಸಂಭವಿಸಿದ ವಲಯದಲ್ಲಿ ಜಂಟಿ ಸಮೀಕ್ಷೆ ಕೈಗೊಳ್ಳುವಾಗ ನಾಮಕಾವಸ್ತೆಯಿಂದ ತಪಾಸಣೆ ಮಾಡದೇ ಅಪಘಾತ ಸಂಭವಿಸಲು ಕಾರಣಗಳನ್ನು ಪತ್ತೆ ಹಚ್ಚಿ, ಸುಧಾರಣೆಗೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇತರೆ ಸಾವು ನೋವುಗಳಿಂದ ರಸ್ತೆ ಅಪಘಾತದ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ. ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಅಮಾಯಕರ ಜೀವ ಹಾನಿಗಳ ವರದಿಗಳು ಹೆಚ್ಚಾಗುತ್ತಿದೆ. ಅಂತಹ ಅಪಘಾತ ವಲಯಗಳನ್ನು ಪರಿಶೀಲಿಸಿ ಸುಧಾರಣೆ ಮಾಡಬೇಕು. ರಸ್ತೆ ಸುರಕ್ಷತಾ ಕ್ರಮಗಳಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಪ್ರಾಧಿಕಾರಕ್ಕೆ ಸೂಚಿಸಿದರು.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯಲ್ಲಿ ಪ್ರತ್ಯೇಕ ಓರ್ವ ಅಧಿಕಾರಿ ಮತ್ತು ಸಹಾಯಕ ಅಧಿಕಾರಿಗಳನ್ನು ನೇಮಿಸಬೇಕು. ಎಲ್ಲಿ ಅಪಘಾತ ಹೆಚ್ಚಿಗೆ ಕಂಡುಬರುತ್ತಿವೆ ಅಂತಹ ಸ್ಥಳಗಳನ್ನು ಇತರೆ ಇಲಾಖೆಗಳ ಜೊತೆಗೆ ಜಂಟಿ ಸಮೀಕ್ಷೆಗಳನ್ನು ಕೈಗೊಂಡು ಅಪಘಾತ ತಡೆಗೆ ಕ್ರಮವಹಿಸಲು ತಿಳಿಸಿದರು.

ರಸ್ತೆಗಳ ಪಕ್ಕದಲ್ಲಿರುವ ದಾಬಾಗಳಲ್ಲಿ ಯಾವುದೇ ರೀತಿಯಲ್ಲಿ ಮಧ್ಯ ಮಾರಾಟವಾಗದಂತೆ ನೋಡಿಕೊಂಡು, ಮಾರಾಟ ಕಂಡುಬಂದಲ್ಲಿ ಅವುಗಳ ಮೇಲೆ ನಿರ್ದಾಕ್ಷಣ್ಯವಾಗಿ ಪ್ರಕರಣ ದಾಖಲಿಸಲು ಅಬಕಾರಿ ಇಲಾಖೆಗೆ ಸೂಚಿಸಿದರು.

ರಸ್ತೆಗಳ ಪಕ್ಕದಲ್ಲಿರುವ ಸೂಚನೆಗಳ ನಾಮಫಲಕಗಳನ್ನು ವಾಹನ ಚಾಲಕ ಗಮನಿಸುತ್ತಿಲ್ಲ. ಈ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಬೇಕು. ನಗರದ ಮುಖ್ಯ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಸುವದಷ್ಟೇ ಅಲ್ಲ ಅವುಗಳ ನಿರ್ವಹಣೆ ಕೂಡಾ ಮಹತ್ವದ್ದಾಗಿದೆ. ರಸ್ತೆಗಳ ವೈಜ್ಞಾನಿಕ ರಸ್ತೆ ತಿರುವು, ಹಂಪ್ಸ, ಮಾರ್ಕಿಂಗ್ ಇರಬೇಕು. ವೇಗ ತಡೆಗೆ ಕ್ರಮವಹಿಸಲು ತಿಳಿಸಿದ ಅವರು ರಸ್ತೆ ಅಘಪಾತದಲ್ಲಿ ಪರಿಶೀಲನೆ ಕಾರ್ಯದ ಎಲ್ಲ ರೀತಿಯ ಕಾರ್ಯ ನಡೆಯಬೇಕು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ ಇನ್ನು ಕೆಲವೇ ತಿಂಗಳುಗಳಲ್ಲಿ ಕಬ್ಬು ಕಟಾವು ಪ್ರಾರಂಭವಾಗುತ್ತಿದ್ದು, ಪ್ರತಿಯೊಂದು ಟ್ಯಾಕ್ಟರಗಳಿಗೆ ರಿಪ್ಲೇಕ್ಟರಗಳನ್ನು ಕಡ್ಡಾಯವಾಗಿ ಹಾಕುವುದು ಹಾಗೂ ಧ್ವನಿವರ್ಧಕಗಳನ್ನು ನಿಷೇಧ ಕುರಿತು ಟ್ಯಾಕ್ಟರ ಮಾಲಿಕರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ನೋಟಿಸ್ ಉಲ್ಲಂಘಿಸಿದ ಮಾಲಿಕರ ಟ್ಯಾಕ್ಟರಗಳನ್ನು ಜಪ್ತ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ತಿಂಗಳ 30ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸುತ್ತಿದ್ದು, ಇವುಗಳ ತಡೆಗೆ ಕೇವಲ ಪೊಲೀಸ್ ಇಲಾಖೆಯಿಂದ ಸಾದ್ಯವಿಲ್ಲ. ಇತರೆ ಇಲಾಖೆಯ ಸಹಕಾರ ಮುಖ್ಯವಾಗಿದೆ ಎಂದರು.

ಮುಖ್ಯವಾಗಿ ವಾಹನ ಚಾಲಕ ಮತ್ತು ಅವೈಜ್ಞಾನಿಕ ರಸ್ತೆಗಳಿಂದ ಅಪಘಾತ ಸಂಭವಿಸುತ್ತಿವೆ. ಜಿಲ್ಲೆಯಲ್ಲಿ 186 ಕಿ.ಮೀ ರಾಷ್ಟ್ರೀಯ ಹೆದ್ದಾರಿ, 920 ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳು ಇವೆ. ಅಪಘಾತ ಸಂಭವಿಸುವ ವಲಯಗಳನ್ನು ಗುರುತಿಸಲಾಗಿದ್ದು, ಇಲಾಖೆಯವರು ಅವುಗಳನ್ನು ಪರಿಶೀಲನೆ ಮಾಡಿ ಮುಂದೆ ಅಪಘಾತವಾಗದಂತೆ ತಡೆಯಲು ಕ್ರಮಗಳು ಆಗಬೇಕು. ರಸ್ತೆ ಅಪಘಾತ ವಲಯ ಪರಿಶೀಲನೆ ಮಾಡಿದ ಮೇಲೆ ವರದಿ ಸಲ್ಲಿಸಲು ಐಆರ್ ಎಡಿ ಆ್ಯಪ್ ಇದ್ದು, ಈ ಆ್ಯಪ್ ಸಂಪೂರ್ಣ ಬಳಕೆಯಾಗಬೇಕು. ಈ ಬಗ್ಗೆ ತರಬೇತಿ ನೀಡಲು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗುವುದೆಂದು ತಿಳಿಸಿದರು.

ಲೋಕಾಪೂರ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಕೂಡಲ ಸಂಗಮದಲ್ಲಿ ಮೇಲ್ಸೆತುವೆ ನಿರ್ಮಾಣ, ಟಕ್ಕಳಕಿ ಕ್ರಾಸ್‍ನಲ್ಲಿ ಅವೈಜ್ಞಾನಿಕ ಹಂಪ್ಸ ತೆರವು, ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಹತ್ತಿರದ ಬಾಣಂತಿ ಕೊಳ್ಳದಲ್ಲಿ ರಸ್ತೆ ಏರಿಳಿತವಾಗಿದ್ದರಿಂದ ಹೆಚ್ಚು ಅಪಘಾತ ಆಗುತ್ತಿದ್ದು, ವಾಹನ ಸಂಚಾರಕ್ಕೆ ಸುರಕ್ಷತೆ ಇರುವದಿಲ್ಲ. ರಸ್ತೆ ಮಟ್ಟ ಎತ್ತರಿಸುವುದು ಅವಶ್ಯವಾಗಿದೆ. ಸುಧಾರಣೆಗೆ ಅಗತ್ಯ ಅನುದಾನಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಲೋಕೋಪಯೋಗಿ ಇಲಾಖೆಯಿಂದ ಸೂಚನಾ ಫಲಕ ಅಳವಡಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ರಾಜಶೇಖರ ಕಡಿವಾಳ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜೇಂದ್ರಕುಮಾರ ಹೊಸಮನಿ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಭಿಯಂತರ ಹೆಬ್ಬಳ್ಳಿ, ಪಂಚಾಯತ ರಾಜ್ ಇಲಾಖೆಯ ಮುಖ್ಯ ಅಭಿಯಂತರ ಬಸವರಾಜ ಕಟ್ಟಿ, ಸಾರಿಗೆ ನಿಯಂತ್ರಣಾಧಿಕಾರಿ ಮೈತ್ರಿ ಸೇರಿದಂತೆ ಸಂಚಾರಿ ಪೊಲೀಸ್ ಸಬ್ ಇನ್ಸಪೆಕ್ಟರಗಳು ಉಪಸ್ಥಿತರಿದ್ದರು.

Nimma Suddi
";