This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Health & Fitness

ಈರುಳ್ಳಿ ತಿನ್ನೋದು ಶುಗರ್ ಇರುವವರಿಗೆ ಒಳ್ಳೆಯದು

ಈರುಳ್ಳಿ ತಿನ್ನೋದು ಶುಗರ್ ಇರುವವರಿಗೆ ಒಳ್ಳೆಯದು

ನಾವು ನಿತ್ಯವೂ ಅಡುಗೆಯಲ್ಲಿ ಬಳಕೆ ಮಾಡುವಂತಹ ಈರುಳ್ಳಿ ಕೂಡ ಇದರಲ್ಲಿ ಒಂದು. ಈರುಳ್ಳಿಯು ಯಾವುದೇ ಖಾದ್ಯಕ್ಕೆ ಒಳ್ಳೆಯ ರುಚಿ ನೀಡುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಇದು ಒಳ್ಳೆಯದು ಎಂದು ಮಾಹಿತಿ ತಿಳಿದು ಬಂದಿದೆ.

ಈರುಳ್ಳಿಯಲ್ಲಿ ಫ್ಲಾವನಾಯ್ಡ್ ಮತ್ತು ಸಲ್ಫರ್ ಅಂಶವು ಉತ್ತಮ ಪ್ರಮಾಣದಲ್ಲಿದೆ. ಇದೆಲ್ಲವೂ ಉರಿಯೂತ ಶಮನಕಾರಿ ಗುಣ ಹೊಂದಿವೆ. ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು ಇದು ಸಹಕಾರಿ. ಹೃದಯದ ಕಾಯಿಲೆ, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ನ್ನು ಇದು ತಡೆಯುವುದು.

ಈರುಳ್ಳಿಯಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಇದ್ದು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.ಈರುಳ್ಳಿಯನ್ನು ಆಹಾರ ಕ್ರಮದಲ್ಲಿ ನಿತ್ಯವೂ ಬಳಸಿದರೆ ಆಗ ಇದು ಜೀರ್ಣಕ್ರಿಯೆ ಆರೋಗ್ಯಕ್ಕೆ ಒಳ್ಳೆಯದು. ಇದು ಕರುಳಿನ ಕ್ರಿಯೆ ಸರಾಗವಾಗಿಸುವುದು ಮತ್ತು ಮಲಬದ್ಧತೆ ನಿವಾರಿಸುವುದು. ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಅಂಶವು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು ಮತ್ತು ಹೃದಯದ ಕಾಯಿಲೆ ಅಪಾಯ ಕಡಿಮೆ ಮಾಡುವುದು. ಇದರಲ್ಲಿ ಇರುವ ಕರಗುವ ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು ಸಹಕಾರಿ. ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.

ಪ್ರಿಬಯೋಟಿಕ್ ಹೊಟ್ಟೆಯಲ್ಲಿನ ಬ್ಯಾಕ್ಟೀರಿಯಾಗೆ ಲಾಭಕಾರಿ ಮತ್ತು ಇದು ಜೀರ್ಣಕ್ರಿಯೆ ಸುಧಾರಿಸಿ, ಪೋಷಕಾಂಶಗಳ ಹೀರುವಿಕೆ ಹೆಚ್ಚಿಸುವುದು ಮತ್ತು ಹೊಟ್ಟೆಯ ಸಂಪೂರ್ಣ ಆರೋಗ್ಯ ಕಾಪಾಡುವುದು. ಈರುಳ್ಳಿಯನ್ನು ನಿತ್ಯವೂ ಸೇವನೆ ಮಾಡಿದರೆ ಇದು ಹೊಟ್ಟೆಯ ಬ್ಯಾಕ್ಟೀರಿಯಾದ ಸಮತೋಲನ ಕಾಪಾಡುವುದು.

ಈರುಳ್ಳಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಉತ್ತಮ ಪ್ರಮಾಣದಲ್ಲಿದೆ. ಇದು ಚಯಾಪಚಯ ವೃದ್ಧಿಸುವುದು ಮತ್ತು ನರ ವ್ಯವಸ್ಥೆಯನ್ನು ಸುಧಾರಿಸುವುದು. ಈರುಳ್ಳಿ ಸೇವನೆ ಮಾಡಿದರೆ ಆಗ ಇದರಿಂದ ಸಂಪೂರ್ಣ ವಿಟಮಿನ್ ಸೇವನೆ ಹೆಚ್ಚಾಗುವುದು. ಮುಂದಿನ ಸಲ ನಿಮ್ಮ ಖಾದ್ಯಕ್ಕೆ ಈರುಳ್ಳಿ ಹಾಕುವುದನ್ನು ಮರೆಯಬೇಡಿ.ಈರುಳ್ಳಿಯಲ್ಲಿ ಇನುಲಿನ್ ಎನ್ನುವ ನಾರಿನಾಂಶವಿದೆ ಮತ್ತು ಪ್ರಿಬಯೋಟಿಕ್ ಆಗಿ ಕೆಲಸ ಮಾಡುವುದು.

Nimma Suddi
";