This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsState News

ಶಿಕ್ಷಣಕ್ಕೆ ಆದ್ಯತೆ:ಸುರೇಶ ರಾಠೋಡ

ನಿಮ್ಮ ಸುದ್ದಿ ಬಾಗಲಕೋಟೆ

ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವುದರಿಂದ ಗ್ರಾಮ ತನ್ನಿಂದ ತಾನೇ ಸುಧಾರಿಸುವುದು ಎಂದು ಹಿರೇಮಾಗಿ ಗ್ರಾಪಂ ನೂತನ ಅಧ್ಯಕ್ಷ ಸುರೇಶ ರಾಠೋಡ ಹೇಳಿದರು.
ಮತಕ್ಷೇತ್ರದ ಹುನಗುಂದ ತಾಲೂಕಿನ ಹಿರೇಮಾಗಿಯ ಸರಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಸದಸ್ಯರ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎಸ್ಡಿಎಂಸಿ ಜವಾಬ್ದಾರಿ ಹೆಚ್ಚಿದ್ದು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದರೆ ಗ್ರಾಮವು ಸುಧಾರಿಸುತ್ತದೆ ಎಂದರು.

ಅತಿಥಿಗಳಾಗಿ ಆಗಮಿಸಿದ ಇಳಕಲ್ ಡೈಟ್ ಉಪನ್ಯಾಸಕಿ ಸಿದ್ದಮ್ಮ ಪಾಟೀಲ, ಮಕ್ಕಳ ಕಲಿಕೆಯ ಪ್ರಗತಿಯಲ್ಲಿ ಸಮುದಾಯದ ಪಾತ್ರ ತುಂಬಾ ಮಹತ್ವವಾಗಿದ್ದು ಶಾಲೆಯ ಪ್ರಗತಿಗಾಗಿ ತಮ್ಮ ಪಾಲ್ಗೊಳ್ಳುವಿಕೆ ಅವಶ್ಯವಾಗಿದೆ ಎಂದರು.

ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಪಿ.ಎಚ್.ಪವಾರ್, ಬಿಆರ್‌ಪಿ ಆರ್.ಎಂ.ಬಾಗವಾನ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ರೇಣವ್ವ ಆಸಂಗಿ, ಸದಸ್ಯರಾದ ರಮೇಶ ಚಿತ್ತರಗಿ, ಮೈಲಾರಪ್ಪ ವಾಲಿಕಾರ, ಖೂಬವ್ವ ಚವ್ಹಾಣ, ಮುತ್ತಪ್ಪ ಹುನಗುಂದ, ಭೀಮಪ್ಪ ಮಾದರ, ಭೀಮವ್ವ ತಳವಾರ, ನೀಲವ್ವ ಹುಲಿಕೆರೆ ಪಿಡಿಒ ಎಸ್.ಸಿ.ಹಿರೇಮಠ, ಶಿಕ್ಷಕರಾದ ಎಂ.ಪಿ.ಕುದುರೆ, ಕೆ.ವೈ.ಬೇನಾಳ, ಅಶೋಕ ಹುಲ್ಲೂರ, ವೀರಭದ್ರಪ್ಪ ಹಡಗಲಿ, ಸಿಆರ್‌ಸಿ ಮಲ್ಲಿಕಾರ್ಜುನ್ ಸಜ್ಜನ, ಎಸ್ಡಿಎಂಸಿ ಸದಸ್ಯರು ಇದ್ದರು.

 

 

";