This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Health & Fitness

ಅರಿಶಿನ ಹಾಗೂ ಶುಂಠಿ ಜತೆಯಾಗಿ ಸೇವಿಸಿದ್ರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎನ್ನುವುದನ್ನು ಕಂಡುಕೊಳ್ಳಿ

ಅರಿಶಿನ ಹಾಗೂ ಶುಂಠಿ ಜತೆಯಾಗಿ ಸೇವಿಸಿದ್ರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎನ್ನುವುದನ್ನು ಕಂಡುಕೊಳ್ಳಿ

ಕೇವಲ ಔಷಧಿಗಳಲ್ಲಿ ಮಾತ್ರವಲ್ಲದೆ, ಶತಮಾನಗಳಿಂದಲೂ ಭಾರತೀಯರು ತಮ್ಮ ಅಡುಗೆಯಲ್ಲಿ ಬಳಸಿಕೊಂಡು ಬರುತ್ತಿರುವರು. ಇದು ಅಡುಗೆ ರುಚಿ ಹಾಗೂ ಸುವಾಸನೆ ಹೆಚ್ಚಿಸುವ ಜತೆಗೆ ಹಲವಾರು ಬಗೆ ಆರೋಗ್ಯ ಲಾಭಗಳನ್ನು ಕೂಡ ನೀಡುವುದು. ಈ ಎರಡನ್ನು ಜತೆಯಾಗಿ ಬಳಸಿಕೊಂಡರೆ, ಆಗ ದೇಹಕ್ಕೆ ನಾನಾ ರೀತಿಯ ಆರೋಗ್ಯ ಲಾಭ ಸಿಗುವುದು. ಅದರ ಬಗ್ಗೆ ತಿಳಿಯೋಣ.

ಶುಂಠಿ ಮತ್ತು ಅರಿಶಿನದಲ್ಲಿ ಚಯಾಪಚಯ ಮತ್ತು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವಂತಹ ಅಂಶಗಳು ಇವೆ. ಇದರಲ್ಲಿ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಅಂಶಗಳಿವೆ. ಅರಿಶಿನದಲ್ಲಿ ಕರ್ಕ್ಯೂಮಿನ್ ಅಂಶವಿದ್ದು, ಇದು ಪ್ರಬಲ ಆ್ಯಂಟಿಆಕ್ಸಿಡೆಂಟ್ ಆಗಿದೆ ಮತ್ತು ಉರಿಯೂತ ಶಮನಕಾರಿ ಗುಣ ಕೂಡ ಇದರಲ್ಲಿದೆ. ಅದೇ ರೀತಿಯಾಗಿ ವಿಟಮಿನ್ ಮತ್ತು ಖನಿಜಾಂಶಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಪೊಟಾಶಿಯಂ, ಕಬ್ಬಿಣಾಂಶ ಮತ್ತು ಮ್ಯಾಂಗನೀಸ್ ಇದರಲ್ಲಿದೆ.

ಅರಿಶಿನ ಮತ್ತು ಶುಂಠಿಯಲ್ಲಿ ಜೈವಿಕ ಸಕ್ರಿಯ ಅಂಶಗಳಿದ್ದು, ಇದರು ಉರಿಯೂತ ಶಮನಕಾರಿ ಗುಣ ಹೊಂದಿದೆ. ಅರಿಶಿನದಲ್ಲಿ ಇರುವ ಕರ್ಕ್ಯೂಮಿನ್ ಮತ್ತು ಶುಂಠಿಯಲ್ಲಿ ಇರುವ ಜಿಂಜರಾಲ್ ಅಂಶವು ಉರಿಯೂತ ತಗ್ಗಿಸುವ ಗುಣ ಹೊಂದಿದೆ. ಇದರಿಂದ ಸಂಧಿವಾತದ ಲಕ್ಷಣಗಳು ಕಡಿಮೆ ಆಗುವುದು ಮತ್ತು ಸಂಪೂರ್ಣ ಗಂಟುಗಳ ಆರೋಗ್ಯವು ರಕ್ಷಿಸಲ್ಪಡುವುದು.

ಜೀರ್ಣಕ್ರಿಯೆ ಕಿಣ್ವಗಳನ್ನು ಉತ್ಪಾದಿಸುವ ಮೂಲಕವಾಗಿ ಶುಂಠಿಯು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ ಆಗಿದೆ. ಅರಿಶಿನವು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಶಮನಗೊಳಿಸುವುದು ಮತ್ತು ಅಜೀರ್ಣ ಮತ್ತು ಹೊಟ್ಟೆಉಬ್ಬರದ ಸಮಸ್ಯೆಯನ್ನು ತಗ್ಗಿಸುವುದು. ಇದರಿಂದ ಹೊಟ್ಟೆಯ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗಿರುವುದು.

ಅರಿಶಿನದಂತೆ ಶುಂಠಿಯಲ್ಲಿ ಕೂಡ ಜಿಂಜರಾಲ್ ಎನ್ನುವ ಅಂಶವಿದ್ದು, ಇದು ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿರುವ ಜೈವಿಕ ಸಕ್ರಿಯ ಅಂಶವಾಗಿದೆ. ಇಷ್ಟು ಮಾತ್ರವಲ್ಲದೆ, ವಿಟಮಿನ್ ಮತ್ತು ಖನಿಜಾಂಶಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಬಿ೬, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ತಾಮ್ರ ಇದರಲ್ಲಿದೆ. ಎರಡರಲ್ಲೂ ಆಹಾರದ ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಆರೋಗ್ಯಕ್ಕೆ ಸಹಕಾರಿ ಮತ್ತು ವಿವಿಧ ಬಗೆಯ ಪೈಥೋಕೆಮಿಕಲ್ ಪ್ರತಿರೋಧಕ ವ್ಯವಸ್ಥೆ, ಹೃದಯದ ಆರೋಗ್ಯ, ಮೆದುಳಿನ ಕಾರ್ಯ ಇತ್ಯಾದಿಗಳನ್ನು ಸುಧಾರಣೆ ಮಾಡುವುದು.

ಅರಿಶಿನದಲ್ಲಿ ಪ್ರಮುಖ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು, ಇದು ಫ್ರೀ ರ್ಯಾಡಿಕಲ್ ನಿಂದ ಜೀವಕೋಶಗಳಿಗೆ ಆಗುವ ಹಾನಿಯನ್ನು ತಪ್ಪಿಸುವುದು. ಅರಿಶಿನವು ಪಿತ್ತರಸ ಉತ್ಪಾದನೆಯನ್ನು ಉತ್ತೇಜಿಸಿ, ಕೊಬ್ಬು ಮತ್ತು ಸಂಪೂರ್ಣ ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಣೆ ಮಾಡುವುದು.

Nimma Suddi
";