ಪ್ರಪಂಚದ ಒಂದೊಂದು ಕಡೆ ಒಂದೊಂದು ರೀತಿಯಾಗಿ ಶವಗಳ ಅಂತ್ಯಸಂಸ್ಕಾರ ನಡೆಯುತ್ತೆ. ಕೆಲವು ಕಡೆ ಶವವನ್ನು ಸುಟ್ಟರೆ ಇನ್ನೂ ಕೆಲವು ಕಡೆ ಹೂಳುತ್ತಾರೆ. ಆದರೆ ವಿಚಿತ್ರ ಸಂಗತಿ ಎಂದರೆ ಇಂಡೋನೇಷ್ಯಾದ ಬಾಲಿಯಲ್ಲಿ ಶವವನ್ನು ಹೂಳುವುದೂ ಇಲ್ಲ, ಸುಡುವುದೂ ಇಲ್ಲ ಬದಲಾಗಿ ಶವವನ್ನು ಕಾಡಿನಲ್ಲಿಯೇ ಕೊಳೆಯಲು ಬಿಡುತ್ತಾರೆ.
ಇದು ಸಂಪೂರ್ಣ ವಿರುದ್ಧವಾಗಿದ್ದು, ಮೃತದೇಹಗಳನ್ನು ರಣಹದ್ದುಗಳು, ಕಾಗೆಗಳು ತಿನ್ನದಂತೆ ಬಿದಿರಿನ ಪಂಜರಗಳಲ್ಲಿ ಇರಿಸಲಾಗುತ್ತದೆ. ಏಕೆಂದರೆ ಯಾವುದೇ ಜೀವಿ ಈ ಮೃತದೇಹವನ್ನು ತಿಂದರೆ ಸತ್ತವರಿಗೆ ಅವಮಾನವಾಗುತ್ತೆ ಎಂಬುದು ಅವರ ನಂಬಿಕೆ.
ಅಮ್ಯೂಸಿಂಗ್ ಪ್ಲಾನೆಟ್ ವರದಿ ಪ್ರಕಾರ, ಮೃತದೇಹದಿಂದ ಮಾಂಸವನ್ನು ತೆಗೆದ ನಂತರ ಈ ಜನರು ತಲೆಬುರುಡೆ ಮತ್ತು ಇತರೆ ಮೂಳೆಗಳನ್ನು ಹೊರತೆಗೆದು ಒಂದು ಕಡೆ ಅಲಂಕರಿಸುತ್ತಾರೆ.
ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಟ್ರುನಿಯನ್ ಎಂಬ ಹೆಸರಿನ ಗ್ರಾಮವಿದೆ. ಇಲ್ಲಿ ವಾಸಿಸುವ ಜನರು ಬಲಿ, ಬಲಿಯಾಗ, ಬಲಿ ಮುಲಾ ಎಂದು ಕರೆಯಲಾಗುತ್ತದೆ. ಇಲ್ಲಿನ ಜನರು ಹೊಸ ಸಂಪ್ರದಾಯಕ್ಕೆ ಕಟ್ಟುಬಿದ್ದಿಲ್ಲ, ತಮ್ಮದೇ ಆದ ನಿಯಮಗಳನ್ನು ಅನುಸರಿಸುತ್ತಾರೆ. ಪಾರ್ಸಿ ಜನಾಂಗವು ತಮ್ಮ ಪ್ರೀತಿಪಾತ್ರರ ಶವವನ್ನು ಪಕ್ಷಿ, ಪ್ರಾಣಿಗಳಿಗೆ ತಿನ್ನಲು ಬಿಡುತ್ತಾರೆ ಎಂಬುದನ್ನು ನೀವು ಕೇಳಿರಬೇಕು.