ವಿಜಯಪುರ: ಹಳೆಯ ವೈಷಮ್ಯ ಹಿನ್ನಲೆಯಲ್ಲಿ
ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆದ ಘಟನೆ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜು ನ್ಯಾಮಗೊಂಡ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ.
ಶಿವು ಜಗದಾಳೆ ಎಂಬಾತ ರಾಜು ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾನೆ.
ಇಬ್ಬರೂ ಸಂಬಂಧಿಕರಾಗಿದ್ದು, ಇದಕ್ಕೆ ಹಳೇ ವೈಷಮ್ಯವೇ ಕಾರಣವಾಗಿದ್ದು, ಗುಂಡಿನ ದಾಳಿಗೊಳಗಾದ ರಾಜು ನ್ಯಾಮಗೊಂಡ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆದರೆ ಗುಂಡಿನ ದಾಳಿ ನಡೆಸಿದ ಶಿವು ಜಗದಾಳೆ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಕೊಲ್ಹಾರ ಪೊಲೀಸರ ಭೇಟಿ ಪರಿಶೀಲಿಸಿದ್ದು, ರೋಣಿಹಾಳ ಗ್ರಾಮದಲ್ಲಿ ಪೊಲೀಸರು ಠಿಕಾಣಿ ಹೂಡಿದ್ದಾರೆ.
ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.