This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Health & Fitness

ಬೇಸಿಗೆ ಕಾಲದಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಪಾಲೋ ಮಾಡಿ

ಬೇಸಿಗೆ ಕಾಲದಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಪಾಲೋ ಮಾಡಿ

ಸ್ತ್ರೀರೋಗ ತಜ್ಞೆ ಡಾ. ಸಲೋನಿ ಚಡ್ಡಾ ಹೇಳುವ ಪ್ರಕಾರ, ಬೇಸಿಗೆ ಕಾಲದಲ್ಲಿ ಗರ್ಭಿಣಿಯರು ಸಾಕಷ್ಟು ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಅದರ ಜೊತೆಗೆ ತಾಜಾ ಹಣ್ಣಿನ ರಸವನ್ನು ಸಹ ಕುಡಿಯುವುದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಮಹಿಳೆಯರು ಮೊಸರು ಮತ್ತು ಮಜ್ಜಿಗೆಯನ್ನು ಸಹ ಸೇವಿಸಬಹುದು. ಇದು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ.

ಗರ್ಭಿಣಿಯರು ಆದಷ್ಟು ಮಧ್ಯಾಹ್ನ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಇದೆಲ್ಲದರ ಜೊತೆಗೆ ಗರ್ಭಿಣಿಯರು ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳು ಇಲ್ಲಿವೆ.

ಸಿಹಿ ಆಲೂಗಡ್ಡೆ: ಗರ್ಭಿಣಿಯರಿಗೆ ಆರೋಗ್ಯ ಕಾಪಾಡಿಕೊಳ್ಳಲು ಸಿಹಿ ಆಲೂಗಡ್ಡೆ ಸೇವನೆಯು ಅತ್ಯುತ್ತಮ ಆಯ್ಕೆಯಾಗಿದೆ. ಇದು ವಿಟಮಿನ್ ಎ, ಸಿ, ಮತ್ತು ಪೊಟ್ಯಾಸಿಯಮ್ ನಿಂದ ಸಮೃದ್ಧವಾಗಿದೆ.

ಹಸಿರು ತರಕಾರಿಗಳು: ಹಸಿರು ತರಕಾರಿಗಳು ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅವು ಉತ್ತಮ ಪ್ರಮಾಣದ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಒಳಗೊಂಡಿರುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮವಾಗಿದೆ.

ಈ ವಿಷಯಗಳನ್ನು ಮರೆಯಬೇಡಿ -ಗರ್ಭಾವಸ್ಥೆಯಲ್ಲಿ ಹೆಚ್ಚು ಸಮಯಗಳ ಕಾಲ ನಿಂತ ಜಾಗದಲ್ಲಿಯೇ ನಿಲ್ಲಬೇಡಿ. -ಆರಾಮದಾಯಕವಾಗಿರುವ ಚಪ್ಪಲಿಗಳನ್ನು ಧರಿಸಿ. -ವೈದ್ಯರ ಸಲಹೆಯಂತೆ ಪ್ರತಿದಿನ ನಡೆಯಿರಿ. ಇದು ನಿಮ್ಮ ದೇಹವನ್ನು ಆರೋಗ್ಯವಾಗಿರಿಸುತ್ತದೆ. -ಹೆಚ್ಚು ಶಾಖ ಇರುವಾಗ ಹೊರಗೆ ಹೋಗುವುದನ್ನು ತಪ್ಪಿಸಿ.

ಗರ್ಭಾವಸ್ಥೆಯಲ್ಲಿ ಬಟ್ಟೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ. ಈ ಋತುವಿನಲ್ಲಿ ಹತ್ತಿ ಮತ್ತು ಲಿನಿನ್ ಬಟ್ಟೆಗಳು ಉತ್ತಮವಾಗಿವೆ. ಬಿಳಿ, ಕಿತ್ತಳೆ, ನಿಂಬೆ, ನೀಲಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಇದರೊಂದಿಗೆ ಮಹಿಳೆಯರು ತಮ್ಮ ಆಹಾರದ ಬಗ್ಗೆಯೂ ಕಾಳಜಿ ವಹಿಸಬೇಕು.

ಗರ್ಭಿಣಿಯರು ಬೇಸಿಗೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಹೆಚ್ಚಿನವರು ಆರಂಭಿಕ ತಿಂಗಳುಗಳಲ್ಲಿ ವಾಂತಿ, ತಲೆತಿರುಗುವುದು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇದರಿಂದ ಸಹಜವಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ.

ಓಟ್ ಮೀಲ್: ಇದು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವಾಗಿದ್ದು, ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಫೈಬರ್, ಪ್ರೋಟೀನ್, ಖನಿಜಗಳಿದ್ದು ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ.

ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇವೆಲ್ಲದರ ಪರಿಣಾಮ ಮಹಿಳೆಯರ ಆರೋಗ್ಯ ಹದಗೆಡುವ ಅಪಾಯವಿದೆ. ಇದು ಮಗುವಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಈ ಋತುವಿನಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

Nimma Suddi
";