This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

State News

ಆಕ್ಸಿಜನ್ ಘಟಕಕ್ಕೆ ಒತ್ತಾಯ

 

ನಿಮ್ಮ ಸುದ್ದಿ ಬಾಗಲಕೋಟೆ

ಬಾಗಲಕೋಟೆ- ಬೆಳಗಾವಿ ಜಿಲ್ಲೆಯಲ್ಲಿ ಓಎನ್ ಜಿಸಿಯಿಂದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಡಿಸಿಎಂ ಗೋವಿಂದ ಎಂ ಕಾರಜೋಳ, ಡಾ.ಚರಂತಿಮಠ ಒತ್ತಾಯಿಸಿದ್ಧಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ನೀಗಿಸಲು ಅನುವಾಗುವಂತೆ ಬಾಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಓಎನ್ ಜಿಸಿ ಸಂಸ್ಥೆಯಿಂದ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ‌ ಮತ್ತು ಶಾಸಕರಾದ ಡಾ.ವೀರಣ್ಣ ಚರಂತಿಮಠ ಅವರು ಅವರು ಒತ್ತಾಯಿಸಿದ್ದಾರೆ.

ಆಕ್ಸಿಜನ್ ಉತ್ಪಾದಕ ಮತ್ತು ವಿತರಕರೊಂದಿಗೆ ಸಮನ್ವತೆ ಸಾಧಿಸಿ ಬೇಡಿಕೆ ಈಡೇರಿಸುವ ಜವಾಬ್ದಾರಿ ಹೊತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರನ್ನು ಶಾಸಕರಾದ ಡಾ.ವೀರಣ್ಣ ಚರಂತಿಮಠ ಅವರೊಂದಿಗೆ ಡಿಸಿಎಂ ಭೇಟಿ ಮಾಡಿ, ಈ ಎರಡೂ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸುವುದರಿಂದ ಜಿಲ್ಲೆಯಿಂದ 70 ರಿಂದ 80 ಕಿ.ಮೀ ಅಂತರದಲ್ಲಿರುವ ನೆರೆಹೊರೆಯ ನಾಲ್ಕು ಜಿಲ್ಲೆಗಳಿಗೆ ಸುಲಲಿತವಾಗಿ ಆಕ್ಸಿಜನ್ ಅನ್ನು ಸಕಾಲದಲ್ಲಿ ಪೂರೈಕೆ ಮಾಡಿ ಆಕ್ಸಿಜನ್ ಕೊರತೆಯನ್ನು ತ್ವರಿತವಾಗಿ ನೀಗಿಸಬಹುದು.

ಈ ಘಟಕ ಸ್ಥಾಪನೆಯಿಂದ ಈ ಪ್ರದೇಶದಲ್ಲಿ ಚಿಕಿತ್ಸೆಗೆ ಅವಶ್ಯಕವಾಗುವ ಆಕ್ಸಿಜನ್ ‌ಕೊರತೆಯನ್ನು ಶಾಶ್ವತ ನೀಗಿಸಬಹುದಾಗಿದೆ‌ . ಈ ಜಿಲ್ಲೆಗಳು ಆಕ್ಸಿಜನ್ ಉತ್ಪಾದನಾ ಘಕಟವನ್ನು ಸ್ಥಾಪಿಸಲು ಪೂರಕವಾಗಿವೆ ಎಂಬ ಎಲ್ಲಾ ಅಂಶಗಳನ್ನು ಶ್ರೀ ಜಗದೀಶ್ ಶೆಟ್ಟರ್ ಅವರೊಂದಿಗೆ ಚರ್ಚಿಸಿ, ಪೂರಕವಾಗಿ ಕ್ರಮಕೈಗೊಳ್ಳುವಂತೆ ವಿನಂತಿಸಲಾಗಿದೆ.

ಈ‌ ಕುರಿತು ಈಗಾಗಲೇ ಬಾಗಲಕೋಟೆ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಡಿಸಿಎಂ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

Nimma Suddi
";