This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಕೃಷಿ, ತೋಟಗಾರಿಗೆ ಅಭಿವೃದ್ದಿಗೆ ಕೊಡುಗೆ ನೀಡಿ : ಗೆಹ್ಲೋಟ್

ಕೃಷಿ, ತೋಟಗಾರಿಗೆ ಅಭಿವೃದ್ದಿಗೆ ಕೊಡುಗೆ ನೀಡಿ : ಗೆಹ್ಲೋಟ್

ನಿಮ್ಮ ಸುದ್ದಿ ಬಾಗಲಕೋಟೆ

ಯುವ ಪದವೀಧರರು ನವೀನ ಆಲೋಚನೆಗಳ ಮತ್ತು ಸೇವಾ ಮನೋಭಾವನೆಯೊಂದಿಗೆ ರಾಜ್ಯ ಮತ್ತು ದೇಶ ಸುಸ್ಥಿತಿಯಲ್ಲಿಡಬೇಕಾದರೆ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಅಭಿವೃದ್ದಿಗೆ ಕೊಡುಗೆ ನೀಡಬೇಕೆಂದು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ನಗರದ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ತೋವಿವಿಯ 12ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ತೋಟಗಾರಿಕೆಯು ಸಮಾಜದ ಪೌಷ್ಠಿಕಾಂಶದ ಬೆನ್ನೆಲುಬು ಮಾತ್ರವಲ್ಲದೇ ರಾಜ್ಯದಲ್ಲಿ ಸುಸ್ಥಿರ ಜೀವನೋಪಾಯದ ಸಾಧನೆ ಆಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆಯು ಉದ್ಯಮಶೀಲತೆಯ ಅಗತ್ಯತೆಯನ್ನು ಗ್ರಾಮೀಣ ಯುವಕರು ಮತ್ತು ಮಹಿಳಾ ಸಬಲೀಕರಣವು ಉದ್ಯಮ ಶೀಲತೆ ಮೂಲಕ ಸ್ವಯಂ ಸಹಾಯಕರಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶವಿದ್ದು, ಇದಕ್ಕೆ ಪೂರಕ ಎಂಬಂತೆ ಸಹಕಾರಿ ಸಂಸ್ಥೆಗಳು ರೈತ ಉತ್ಪಾದಕ ಕಂಪನಿಗಳು ತೋಟಗಾರಿಕಾ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವುದು ಕೂಡಾ ಜೀವನೋಪಾಯ ಸುಧಾರಿಸಲು ಸಹಾಯ ಮಾಡುತ್ತಿವೆ ಎಂದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ 8-9 ವರ್ಷಗಳಿಂದ ನಿರಂತರವಾಗಿ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾ ರಾಷ್ಟ್ರ ಮಟ್ಟದಲ್ಲಿ ವಿಶ್ವಿವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ರಾಜ್ಯಾದ್ಯಂತ ಹರಡಿರುವ 11 ಸಂಶೋದನಾ ಕೇಂದ್ರಗಳು ತೋಟಗಾರಿಕೆಯಲ್ಲಿನ ಸವಾಲುಗಳನ್ನು ಎದುರಿಸಲು ಅಗತ್ಯ ಆಧಾರಿತ ನಿರ್ಧಿಷ್ಟ ಸ್ಥಳ ಸಂಶೋಧನೆಯನ್ನು ಕೈಗೊಳ್ಳುತ್ತಿವೆ. ವಿಶ್ವವಿದ್ಯಾಲಯ ರೈತರ ತಕ್ಷಣದ ಸಮಸ್ಯೆಗಳನ್ನು ಪರಿಹರಿಸಲು ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಲು, ಅಗತ್ಯ, ಸಮಸ್ಯೆ ಆಧಾರಿತ ಸಂಶೋದನೆಗಳನ್ನು ಕೈಗೊಳ್ಳಲು ಹಲವಾರು ಸುಧಾರಿಸಿದ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಘಟಿಕೋತ್ಸವದ ಭಾಷಣಕಾರರಾಗಿ ಆಗಮಿಸಿದ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಉಪ ಮಹಾ ನಿರ್ದೇಶಕ ಡಾ.ಉದಮ್ ಸಿಂಗ್ ಗೌತಮ್ ಮಾತನಾಡಿ ಭಾರತವನ್ನು ಅಭಿವೃದ್ದಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣೆ ಮಹತ್ವದ ಪಾತ್ರ ವಹಿಸುತ್ತಿದೆ. ಕೃಷಿಯಲ್ಲಿ ಸಾಮಾನ್ಯ ಬುದ್ದಿವಂತಿಕೆ ಕೂಡಾ ಕೃಷಿಯನ್ನು ಹೆಚ್ಚು ಬಲಿಷ್ಟ ಮತ್ತು ಉತ್ಪಾದಕವಾಗಿಸಲು ಮಹತ್ವದ ಪಾತ್ರ ವಹಿಸುತ್ತದೆ. ತೋಟಗಾರಿಕೆ ಕ್ರಾಂತಿಯು ಗ್ರಾಮ ಮತ್ತು ನಗರ ಪ್ರದೇಶದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ತೋಟಗಾರಿಕೆ ಶಿಕ್ಷಣದಲ್ಲಿ ಸುಧಾರಣೆಗಳು, ಉದ್ಯಮಕೌಶಲ್ಯ ಹೊಂದಿರುವ ಪದವೀಧರರನ್ನಾಗಿಸಿ ಉದ್ಯೋಗ ಹುಡುಕುವದರಕಿಂತ ಉದ್ಯೋಗ ಸೃಷ್ಠಿಕರ್ತವನ್ನಾಗಿ ಮಾಡುತ್ತದೆ ಎಂದರು.

ವಿದ್ಯಾರ್ಥಿಗಳು ಇಂದು ನಿಮ್ಮ ಸಾಧನೆಗಳ ಸಂಭ್ರಮವನ್ನು ಆಚರಿಸಿದ್ದೀರಿ. ಆದರೆ ಇಷ್ಟಕ್ಕೆ ತೃಪ್ತಿ ಪಡುವಂತದಲ್ಲ ಎಂಬುದನ್ನು ಮರೆಯದಿರಿ. ಹಸಿರು ಕ್ರಾಂತಿಯನ್ನು ತರುವ ಜವಾಬ್ದಾರಿಯುತ ಕಾರ್ಯ ನಿಮ್ಮಿಂದಾಗಬೇಕು. ಈ ನಿಟ್ಟಿನಲ್ಲಿ ನೋಬಲ್ ಪ್ರಶಸ್ತಿ ವಿಜೇತ ಡಾ.ನಾರ್ಮನ್ ಬೋರ್ಲಾಗ್ ಬಿಳಿ ಕ್ರಾಂತಿಯನ್ನು ತಂದ ಡಾ.ವರ್ಗೀಸ್ ಕುರಿಯನ್ ಮತ್ತು ಹಸಿವು ಬಡತನ ಅಪೌಷ್ಠಿಕತೆಯನ್ನು ಜಯಿಸಿದ ಡಾ.ಎಂ.ಎಸ್.ಸ್ವಾಮಿನಾಥನ್ ಅಂತ ಮಹಾನ್ ವ್ಯಕ್ತಿಗಳ ಅನುಭವ ಹಾಗೂ ಕಾರ್ಯವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಪ್ರಾರಂಭದಲ್ಲಿ ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ಸ್ವಾಗತಿ ಮತ್ತು ತೋವಿವಿಯ ಪ್ರಗತಿ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಸೇರಿದಂತೆ ವ್ಯವಸ್ಥಾಪನಾ ಮಂಡಳಿ ಹಾಗೂ ಪ್ರಾಜ್ಞ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

Nimma Suddi
";