ಬಾಗಲಕೋಟೆ:
ಅಪಘಾತಕ್ಕೊಳಗಾದ ನವನಗರದ ಸೆಕ್ಟರ್ ನಂ.೮ರ ನಿವಾಸಿ ಆಕಾಶ ಪ್ರಕಾಶ ಸುಲಾಖೆಯ ವೈದ್ಯಕೀಯ ಶಸ್ತ್ರಚಿಕಿತ್ಸೆಗಾಗಿ ಚರಂತಿಮಠ ಮತ್ತು ವಸ್ತ್ರದ ಪೌಂಡೇಶನ್‌ನಿಂದ ೫೦ ಸಾವಿರ ರೂ. ಸಹಾಯಧನ ವಿತರಿಸಲಾಯಿತು.
ಚರಂತಿಮಠ ವಸ್ತ್ರದ ಫೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಗಾಯಾಳುವಿನ ತಾಯಿಗೆ ಚೆಕ್ ವಿತರಿಸಿ ಅಪಘಾತಕ್ಕೊಳಗಾದ ಯುವಕನಿಗೆ ಮಾತನಾಡಿಸಿ ಆರೋಗ್ಯ ವಿಚಾರಿಸಿದರು.
ಕಾಮಧೇನು ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ಗುರು ಅನಗವಾಡಿ, ವಿಜಯ ಸುಲಾಖೆ, ಶಿವು ಮೇಲ್ನಾಡ, ಅರುಣ ಲೋಕಾಪುರ, ರಾಜು ಗೌಳಿ, ಬಸವರಾಜ ಕಳಸಾ, ನಾಗರಾಜ ಕೆರೂರ ಇತರರು ಇದ್ದರು.