ಮೂವರು ಖತರ್ನಾಕ್ ಕಳ್ಳಿಯರು ಅಂದರ್
ಬಾಗಲಕೋಟೆ
ಸಾರಿಗೆ ಬಸ್ ನಲ್ಲಿ ಕಳ್ಳತನ ಮಾಡುತ್ತಿದ್ದ ಬೆಳಗಾವಿ ಮೂಲದ ಮೂವರು ಕಳ್ಳಿಯರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಾಗಲಕೋಟೆಯ ಮುಚಖಂಡಿ ಕ್ರಾಸ್ ನಿವಾಸಿ ಶ್ರೀಮತಿ ಭಾರತಿ ಗಂಡ ಲಿಂಗಬಸಯ್ಯ ಹಿರೇಮಠ ಆ.19 ರಂದು ತವರು ಮನೆಗೆ ಹೋಗುವಾಗ ಬಾಗಲಕೋಟೆ ಶಹರದ ಬಸ್ಟ್ಯಾಂಡದಲ್ಲಿ ಹುಬ್ಬಳ್ಳಿ ಬಸ್ಸನಲ್ಲಿ ಹತ್ತುವಾಗ ಯಾರೋ ಕಳ್ಳರು ತನ್ನ ವ್ಯಾನಿಟಿ ಬ್ಯಾಗಿನಲ್ಲಿದ್ದ ಬಂಗಾರದ ಒಟ್ಟು 11 ತೊಲೆ ಬಂಗಾರದ ಆಭರಣಗಳು ಸುಮಾರು 6.60,000/-ರೂಪಾಯಿ ನೇದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದರು.
ಶಹರ ಠಾಣೆ ಎಸ್ಐ ಜೆ ವಾಯ್ ನಧಾಪ ರವರು ದೂರು ಸ್ವೀಕೃತಿ ಮಾಡಿಕೊಂಡು ಬಾಗಲಕೋಟ ಶಹರ ಪೊಲೀಸ್ ಠಾಣೆ ಗುನ್ನೆ 20:56/2024 400: 303(2) 5. 2023 ಚವ್ಹಾಣ ಪೊಲೀಸ್ ಇನ್ಸಪೇಕ್ಟರ್ ರವರು ತನಿಖೆ ಕೈಕೊಂಡಿದ್ದರು.
ಸದರ ಪ್ರಕರಣದ ಬಗ್ಗೆ ಶ್ರೀ ಅಮರನಾಥ ರೆಡ್ಡಿ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಜಿಲ್ಲೆ, ಶ್ರೀ ಪ್ರಸನ್ನ ದೇಸಾಯಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಜಿಲ್ಲೆ, ಶ್ರೀ ಪಂಪನಗೌಡ ಡಿಎಸ್‌ಪಿ ಸಾಹೇಬರು ಬಾಗಲಕೋಟ ಉಪ-ವಿಭಾಗ ಮಾರ್ಗದರ್ಶನದಲ್ಲಿ, ಶ್ರೀ ಗುರುನಾಥ ಚವ್ಹಾಣ. ಪೊಲೀಸ್ ಇನ್ಸಪೆಕ್ಷರ ಬಾಗಲಕೋಟ ಶಹರ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀಮತಿ ಜೆ.ವಾಯ್ ನದಾಫ ಮಪಿಎಸ್‌ಐ (ಅವಿ) ನೇತೃತ್ವದಲ್ಲಿ ತಂಡ ರಚಿಸಿಲಾಗಿತ್ತು
ಸದರ ಪ್ರಕರಣದ ಪತ್ತೆ ಕುರಿತು ಈ ದಿವಸ ದಿನಾಂಕ: 29/08/2024 ರಂದು ಬೆಳಗ್ಗೆ ಪತ್ತೆ ಕಾರ್ಯವನ್ನು ಮಾಡುತ್ತಿರುವಾಗ ಬಸ್ಟ್ಯಾಂಡ್ ಹತ್ತಿರ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ 3 ಜನ ಮಹಿಳೆಯರಾದ 1) ರೋಶನಿ ಗಂಡ ಹರಿದಾಸ ಚೌಗಲೆ, ವಯಾ 30 ವರ್ಷ ಆರ್.ಎಸ್ ನಂ 1009 ವಡ್ಡರವಾಡಿ ರಾಮನಗರ [ನೆಹರು ನಗರ] ಬೆಳಗಾವಿ, 2) ರೇಣುಕಾ ಗಂಡ ರವಿ ವರಗಂಡೆ, ವಯಾ 22 ವರ್ಷ ಮನೆ ನಂ 76 ಗ್ಯಾಂಗವಾಡಿ ಶಿವಬಸವನಗರ [ನೆಹರು ನಗರ] ಬೆಳಗಾವಿ. 3) ಸವಿತಾ ಗಂಡ ಸಾಯಿನಾಥ ಲೋಂಡೆ. ವಯಾ 34 ವರ್ಷ ಮನೆ ನಂ 01 ಗ್ಯಾಂಗವಾಡಿ ಶಿವಬಸವನಗರ [ನೆಹರು ನಗರ] ಬೆಳಗಾವಿ ಇವರೆಲ್ಲರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ಅವರು ಬಾಗಲಕೋಟ ಶಹರದ ಬಸ್ಟ್ಯಾಂಡದಲ್ಲಿ ಹುಬ್ಬಳ್ಳಿ ಬಸ್ಸನಲ್ಲಿ ಹತ್ತುವಾಗ ವ್ಯಾನಿಟಿ ಬ್ಯಾಗಿನಲ್ಲಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದರೆ.
ಸದರಿ ಮೇಲಿನ ಆರೋಪಿತರಿಂದ ಬಂಗಾರದ ಆಭರಣಗಳು ಒಟ್ಟು 91.98 ಗ್ರಾಂ, ಅಂದಾಜು ಒಟ್ಟು 6,00,000/- ರೂ.ಗಳಷ್ಟು ಮೌಲ್ಯದ ಬಂಗಾರದ ಆಭರಣಗಳ ಜಪ್ತ ಮಾಡಿದ್ದು ಇರುತ್ತದೆ. ಆರೋಪಿತರಿಗೆ ಮಾನ್ಯ ನ್ಯಾಯಾಲಯದ ಮುಂದೆ ಹಾಜರಪಡಿಸಿದ್ದು ಇರುತ್ತದೆ. ಬಾಗಲಕೋಟ ಶಹರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಪ್ರಸಂಶಿಸಿ ಬಹುಮಾನ ಘೋಷಿಸಿಲಾಗಿದೆ ಎಂದು ಎಸ್ಪಿ ಅಮರನಾಥ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.