This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Agriculture NewsBusiness NewsLocal NewsState News

ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಅನ್ನದಾತ

ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಅನ್ನದಾತ

ಪದವಿ ಪಡೆದರೂ ಕೃಷಿ ನಂಬಿ ಬದುಕಿದ ಅನ್ನದಾತ
ಮಲಪ್ರಭೆ ನದಿ ದಡದಲ್ಲಿ ಫಲಪ್ರದ ಬೆಳೆ ಬೆಳೆದ ಹುನಗುಂದ ತಾಲೂಕಿನ ಬೆಳಗಲ್ ಗ್ರಾಮದ ಪದವೀಧರ ರೈತ ಮಹಾಂತೇಶ ನಿಂಗಪ್ಪ ಹಳಬರ

ಅವರು ಬಿಎಸ್ಸಿ ಪದವೀಧರ. ಸರಕಾರಿ ನೌಕರಿ ಹುಡುಕಿ ಕೊಂಡು ಹೋಗಿದ್ದರೆ ಇಷ್ಟೊತ್ತಿಗೆ ಯಾವುದೋ ಹುದ್ದೆಯಲ್ಲಿ ಎಲ್ಲೋ ದೂರದ ಊರಲ್ಲಿ ಕೆಲಸ ಮಾಡುತ್ತಿದ್ದರು.

ಆದರೆ ಅದನ್ನೆಲ್ಲ ಬಿಟ್ಟು ಭೂತಾಯಿ ನಂಬಿ, ‘ಭೂಮಿಯಲ್ಲಿಯೇ ಉತ್ತಿ ಬಿತ್ತಿ, ವರ್ಷಕ್ಕೆ 15ರಿಂದ 20 ಲಕ್ಷದಷ್ಟು ಆದಾಯ ತೆಗೆಯುವ ರೈತ ಅವರು.

ಅವರ ಹೆಸರು ಮಹಾಂತೇಶ ಹಳಬರ. ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದವರು. ಉದ್ಯೋಗ ಅರಸಿ ಹೋಗದೇ ಬಿಎಡ್ ಮುಗಿಸಿರುವ ತಮ್ಮನ್ನು ಕರೆದುಕೊಂಡು ಪೂರ್ವಜರ ಆಸ್ತಿಯನ್ನೇ ನಂಬಿ ಉಳುಮೆ ಮಾಡಿ ಕಾಯಕದಲ್ಲಿಯೇ ಕೈಲಾಸ ಕಾಣುತ್ತಿರುವ ಅನ್ನದಾತ ಎಂದರೆ ತಪ್ಪಾಗಲಾರದು.

ಬೆಳಗಲ್ಲ ಗ್ರಾಮ ಮಲಪ್ರಭಾ ನದಿಯ ದಡದಲ್ಲಿ ಇದ್ದು, ಗ್ರಾಮದ ಬಹುತೇಕ ರೈತರು ಸಾಂಪ್ರದಾಯಿಕ ಬೇಸಾಯ ಮಾಡುತ್ತಿದ್ದಾರೆ. ನದಿಯಲ್ಲಿ 6 ತಿಂಗಳು ನೀರು ಇದ್ದರೆ ಉಳಿದ ಆರು ತಿಂಗಳು ನೀರು ಇರುವುದಿಲ್ಲ. ಇದರಿಂದ ಈ ಭಾಗದ ರೈತರು ತೋಟಗಾರಿಕಾ ಬೇಸಾಯದ ಕಡೆ ಒಲವು ಮಾಡಿರಲಿಲ್ಲ. ನದಿಯ ನೀರು ಇಲ್ಲದೆ ಕೊಳವೆ ಭಾವಿಯಿಂದಲೇ ತೋಟಗಾರಿಕಾ ಬೆಳೆ ಬೆಳೆದು ಇತರ ರೈತರಿಗೆ ಸೂರ್ತಿ ತುಂಬುವ ಕಾರ್ಯವನ್ನು ಮಹಾಂತೇಶ ಹಳಬರ ಮಾಡುತ್ತಿದ್ದಾರೆ.

ಒಟ್ಟು 52 ಎಕರೆ ಜಮೀನಿ ಹೊಂದಿರುವ ಮಹಾಂತೇಶ, 20 ಎಕರೆಯಲ್ಲಿ ನೀರಾವರಿ ಮಾಡಿಕೊಂಡಿದ್ದಾರೆ. ಅದು ಮಲಪ್ರಭಾ ದಂಡೆಯಲ್ಲಿಯೇ ಹೊಲವಿರುವುದರಿಂದ ಶೇಂಗಾ, ಸೂರ್ಯಪಾನ, ಗೋವಿನಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಈ ಸಲದ ಮಲಪ್ರಭೆ ಮುನಿಸಿಗೆ ಅವರ ಬೆಳೆಯಲ್ಲ ಕೊಚ್ಚಿ ಹೋಗಿದ್ದುಘ, ಬರಬೇಕಿದ್ದ ಲಾಭ ಕೈ ತಪ್ಪಿದೆ. ಆದರೂ ಎದೆಗುಂದದೆ ಮತ್ತೆ ಕಡ್ಲಿ, ಈರುಳ್ಳಿ ಹಾಕಿ ಉತ್ತಮ ಸಲಿನ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಉಳಿದ 26 ಎಕರೆಯಲ್ಲಿ ಒಣಬೇಸಾಯ ಮಾಡುತ್ತಿದ್ದು, ಅದರಲ್ಲಿ ಬಿಳಿಜೋಳ, ಮೆಣಸಿನಕಾಯಿ, ಈರುಳ್ಳಿಘ, ತೊಗರಿ ಹೀಗೆ ಮಿಶ್ರ ಬೆಳೆ ಬೆಳೆಯುತ್ತಿದ್ದಾರೆ. ತೊಗರಿ ಈಗ ಕೊಯ್ಲಿಗೆ ಬಂದಿದ್ದುಘ, ಉತ್ತಮ ಬೆಲೆ ನಿರೀಕ್ಷೆಯನ್ನು ಎದುರು ನೋಡುತ್ತಿದ್ದಾರೆ.

ನೌಕರಿ ಅರಸಿ ಹೋಗದೇ ಕಳೆದ 25 ವರ್ಷಗಳಿಂದ ಭೂತಾಯಿ ನಂಬಿ ಕೃಷಿಯಲ್ಲಿಯೇ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.

ಇನ್ನೊಂದು ಕಡೆಗೆ ಇರುವ 6 ಎಕರೆ ಬರಡು ಭೂಮಿಯಲ್ಲಿ ಮೊದಲು ಎಂದು ಬೇಸಾಯ ಮಾಡಿರಲೇ ಇಲ್ಲ.  ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಗ್ರಾಮದಲ್ಲಿ ರೈತರಿಗೆ ಕೃಷಿ ಕುರಿತು ಹಮ್ಮಿಕೊಂಡ ಶಿಬಿರದಿಂದ ಜಾಗೃತರಾಗಿ ಆ ಭೂಮಿಗೆ 5 ಲಕ್ಷ ಖರ್ಚು ಮಾಡಿ ಕೃಷಿ ಭೂಮಿಯಾಗಿ ಬದಲಾಯಿಸಿಕೊಂಡಿದ್ದಾರೆ.

ಅದರಲ್ಲಿ ಮೊದಲ ಕಂತಿನಲ್ಲಿ 1480 ಪೇರಲು ಹಚ್ಚಿ ವರ್ಷಕ್ಕೆ 3 ರಿಂದ 4 ಲಕ್ಷದವರೆಗೂ ಲಾ‘ ಪಡೆದಿದ್ದಾರೆ. ಇನ್ನೊಂದು ಕಡೆ 380 ಪೇರಲ ಹಚ್ಚಿದ್ದುಘಿ, ಅದು ಕೂಡ ಮುಂದಿನ ವರ್ಷದಿಂದ ಸಲು ನೀಡಲಿದೆ ಎನ್ನುತ್ತಾರೆ ರೈತ ಮಹಾಂತೇಶ.

ಇದರಲ್ಲಿ ಅಂತರ ಬೆಳೆಯಾಗಿ ಕಡಲೆ, ಈರುಳ್ಳಿಘಿ, ನಾನಾ ತರಹದ ಹೂಗಳನ್ನು ಬೆಳೆಯುವ ಮೂಲಕ ತಿಂಗಳ ಲೆಕ್ಕದಲ್ಲೂ ಆದಾಯ ತಮ್ಮದಾಗಿಸಿಕೊಂಡಿದ್ದಾರೆ. ಭೂಮಿಯ ಸುತ್ತಲೂ 60 ಜಾತಿಯ ಹಣ್ಣಿನ ಗಿಡಗಳು, ಅರಣ್ಯ ಗಿಡಗಳನ್ನು ನಾಟಿ ಮಾಡಿದ್ದೇನೆ. ನನ್ನ ಕೃಷಿ ಕಾಯಕಕ್ಕೆ ಸಹೋದರ ಬಿಎಡ್ ಮುಗಿಸಿರುವ ಹನಮಂತ ಹಳಬರ ಆಸರೆಯಾಗಿ ನಿಂತಿದ್ದಾರೆ. ಕೃಷಿ ಕಾರ್ಯಕ್ಕೆ ಸರಕಾರದಿಂದ ಯಾವುದೇ ಅನುದಾನ ಪಡೆದಿಲ್ಲ ಎನ್ನುತ್ತಾರೆ ಮಹಾಂತೇಶ.

ನೌಕರಿಗಿಂತ ಕೃಷಿಯಲ್ಲಿ ನೆಮ್ಮದಿ ಇದೆ. ಇರುವ ಭೂಮಿಯನ್ನು ಸಮಪರ್ಕಕವಾಗಿ ಬಳಸಿಕೊಂಡರೆ ಉತ್ತಮ ಆದಾಯ ಬರುವುದು. ಪೇರಲ ಬೇಸಾಯಕ್ಕೆ ಅಕ ನೀರು ಅಗತ್ಯ ಇಲ್ಲ. ಕಡಿಮೆ ನೀರಿನಲ್ಲಿಯೇ ಬೇಸಾಯ ಮಾಡಬಹುದು.
ಮಹಾಂತೇಶ ನಿಂಗಪ್ಪ ಹಳಬರ, ರೈತ