This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Entertainment News

ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೂ ಇದೆ. ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ: ಪ್ರಕಾಶ್ ರೈ

ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೂ ಇದೆ. ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ: ಪ್ರಕಾಶ್ ರೈ

ಪ್ರಕಾಶ್ ರಾಜ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಎಲ್ಲರೂ ಶುಭಾಶಯ ಕೋರುತ್ತಿದ್ದು, ನೇರ ನುಡಿಗಳಿಂದ ಪ್ರಕಾಶ್ ರಾಜ್ ಅನೇಕರಿಂದ ಟೀಕೆಗೆ ಒಳಗಾಗಿದ್ದೂ ಇದೆ. ಪ್ರಕಾಶ್ ರಾಜ್ ಓರ್ವ ಶ್ರೇಷ್ಠ ನಟ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಎಂತಹುದೇ ಪಾತ್ರ ಕೊಟ್ಟರೂ ಮಾಡಿ ತೋರಿಸುತ್ತಾರೆ. ಅವರು ಹಿಟ್ ಸಿನಿಮಾಗಳ ಜೊತೆ ಫ್ಲಾಪ್ ಸಿನಿಮಾಗಳನ್ನೂ ನೀಡಿದ್ದಾರೆ.

ಈ ಬಗ್ಗೆ ಅವರು ಮಾತನಾಡಿದ್ದರು.ಬಹುತೇಕ ಎಲ್ಲರೂ ಹಣಕ್ಕಾಗಿ ನಟನೆ ಮಾಡುತ್ತಾರೆ. ಕೆಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಪ್ರಕಾಶ್ ರಾಜ್ ಆ ರೀತಿ ಅಲ್ಲ. ಈ ವಿಚಾರದಲ್ಲಿ ಅವರದ್ದು ನೇರ ಮಾತು. ‘ಫಿಲ್ಮ್ ಕಂಪಾನಿಯನ್ ಸೌತ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನೂ ಮಾಡಿದ್ದು ಇದೆ ಎಂದು ಅವರು ತಿಳಿಸಿದರು.

ಅವರು ವಿಲನ್ ಆಗಿ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನನ್ನ ಮನಸ್ಸು ಅರೇ ಎಂಥ ಸಿನಿಮಾ ಮಾಡ್ತಾ ಇದೀಯಾ ಎನ್ನುತ್ತದೆ. ಆದರೆ, ನನಗೆ ಹಣ ಬೇಕಲ್ಲ’ ಎಂದಿದ್ದಾರೆ ಪ್ರಕಾಶ್ ರಾಜ್.ಕೆಲವು ಸಿನಿಮಾಗಳನ್ನು ಪ್ರಕಾಶ್ ರೈ ಸಿನಿಮಾ ಫ್ರೀ ಆಗಿ ಮಾಡಿದ್ದಿದೆ. ಈ ಬಗ್ಗೆ ಪ್ರಕಾಶ್ ರೈ ಮಾತನಾಡಿದ್ದಾರೆ. ‘ಆ ಸಿನಿಮಾನ ಉಚಿತವಾಗಿ ಏಕೆ ಮಾಡುತ್ತಾ ಇದೀಯಾ ಎಂದು ಕೆಲವರು ಕೇಳುತ್ತಾರೆ. ಅದು ನನಗೆ ಬಿಟ್ಟ ನಿರ್ಧಾರ. ನಾನು ಸಿನಿಮಾನ ಫ್ರೀ ಆಗಿ ಮಾಡುತ್ತಾ ಇದೀನಿ ಎಂದು ಅವರಿಗೆ ಹೇಳಿದವರು ಯಾರು? ಒಂದು ಸಿನಿಮಾ ಮಾಡುವುದರಿಂದ ಸಿಗುವ ರಿವಾರ್ಡ್​​ಗಳು ಅವರಿಗೆ ಕಾಣುವುದಿಲ್ಲ’ ಎಂದಿದ್ದಾರೆ ಪ್ರಕಾಶ್ ರೈ.

‘ಮರದ ಸುತ್ತುತ್ತಾ ಡ್ಯಾನ್ಸ್ ಮಾಡೋದನ್ನು ಮಿಸ್ ಮಾಡಿಕೊಳ್ತೀರಾ’ ಎಂಬ ಪ್ರಶ್ನೆಗೆ, ‘ನಿಜವಾಗಿಯೂ ಇಲ್ಲ. ನನಗೆ ಹಾಗಿಲ್ಲ. ಅದಕ್ಕೆ ಸಾಕಷ್ಟು ಎಕ್ಸೈಸ್​, ಪ್ರ್ಯಾಕ್ಟಿಸ್ ಬೇಕು. ನನಗೆ ಅದು ಇಷ್ಟ ಆಗುವುದಿಲ್ಲ ಎಂದರ್ಥವಲ್ಲ. ನನಗೆ ಕಂಫರ್ಟ್ ಇಲ್ಲ’ ಎಂದಿದ್ದಾರೆ ಪ್ರಕಾಶ್ ರೈ.

‘ಈ ಸಿನಿಮಾ ಮಾಡಿದರೆ ನನಗೆ ಹಣ ಸಿಗುತ್ತದೆ ಎಂದು ಯಾವಾಗಲೂ ಯೋಚನೆ ಮಾಡಿದ್ದೀರೇ’ ಎಂದು ಸಂದರ್ಶಕಿ ಪ್ರಕಾಶ್​ ರಾಜ್​ಗೆ ಪ್ರಶ್ನೆ ಮಾಡಿದ್ದಾರೆ. ‘ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೂ ಇದೆ. ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ. ಕಮರ್ಷಿಯಲ್ ಚಿತ್ರಗಳನ್ನು ನಾನು ಹೇಟ್ ಮಾಡಲ್ಲ. ಅವುಗಳಿಗೂ ದೊಡ್ಡ ಪ್ರೇಕ್ಷಕ ವರ್ಗ ಇದೆ. ಎಲ್ಲರೂ ಎಷ್ಟು ಶ್ರಮ ಹಾಕುತ್ತಾರೋ ಅಷ್ಟೇ ಶ್ರಮವನ್ನು ಅವರೂ ಹಾಕುತ್ತಾರೆ.

";