ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಕದನ ಭಾನುವಾರ ಮಧ್ಯಾಹ್ನದಿಂದ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿದೆ.
ಗೆಲುವಿಗೆ ಭಾರತವೇ ಫೇವರಿಟ್ ಆದರೂ ನ್ಯೂಜಿಲೆಂಡ್ ತಂಡವನ್ನು ಕಡೆಗಣಿಸುವಂತಿಲ್ಲ. ಮೈದಾನದಲ್ಲಿ ನೈಜವಾದ ಆಟವಾಡುವ ತಂಡ ಈ ಸಲ ಪ್ರಶಸ್ತಿ ಎತ್ತಿ ಹಿಡಿಯಲಿದೆ.
ಫೈನಲ್ ಪಂದ್ಯಕ್ಕೆ ಸಜ್ಜಾಗಿರುವ ದುಬೈ ಮೈದಾನದ ಪಿಚ್ ಅಂಶ ನಿರ್ಣಾಯಕವಾಗಲಿದೆ. ದುಬೈನಲ್ಲೇ ಎಲ್ಲಾ ಪಂದ್ಯವಾಡಿರುವ ಭಾರತ ತಂಡ ಪಿಚ್ ಮರ್ಮವನ್ನು ಚೆನ್ನಾಗಿ ಅರಿತುಕೊಂಡಿದೆ. ಹೀಗಾಗಿಯೇ ಲೀಗ್ ಕೊನೆ ಪಂದ್ಯ ಹಾಗೂ ಸೆಮಿಫೈನಲ್‌ನಲ್ಲಿ ನಾಲ್ವರು ಸ್ಪಿನರ್‌ಗಳನ್ನು ಆಡಿಸಿದ್ದ ಭಾರತ ತಂಡದ ಮ್ಯಾನೇಜ್‌ಮೆಂಟ್ ಎದುರಾಳಿಗಳನ್ನು ಸುಲಭವಾಗಿ ಕಟ್ಟಿಹಾಕಿತ್ತು.
ಭಾರತ ತಂಡದಲ್ಲಿ ಘಟಾನುಘಟಿ ಆಟಗಾರರಿದ್ದು, ಹಿಟ್‌ಮ್ಯಾನ್ ರೋಹಿತ್ ಶಮಾ, ಸುಬನ್ ಗಿಲ್ಲ, ಕಿಂಗ್ ಕೊಹ್ಲಿ, ಶ್ರೇಯಸ್ ಅಯ್ಯರ ಅವರಿಂದ ಉತ್ತಮ ಬ್ಯಾಟಿಂಗ್ ಮೂಡಿ ಬರಬೇಕಿದೆ. ಜತೆಗೆ ಸ್ಪಿನ್ಸರ್‌ಗಳಾದ ವರುಣ ಚಕ್ರವರ್ತಿ, ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ತಮ್ಮ ಕೈಚಳಕ ತೋರಿಸಬೇಕಿದೆ. ಇವರಿಗೆ ವೇಗದ ಬೌಲರ್‌ಗಳಾದ ಸಮಿ, ಹಾದಿಕ್ ಪಾಂಡ್ಯ ಕೂಡ ಸಪೋಟ್ ಮಾಡಿದಾಗ ಮಾತ್ರ ಇಡೀ ತಂಡ ಗೆಲ್ಲಲ್ಲು ಸಾಧ್ಯ.
ಫೈನಲ್ ಪಂದ್ಯದಲ್ಲಿ ವೇಗಿ ಮ್ಯಾಟ್ ಹೆನ್ರಿ ಅವರನ್ನು ಕಿವೀಸ್ ಹೆಚ್ಚು ಅವಲಂಬಿಸಿದೆ. ಅರಂಭಿಕ ಓವರ್‌ಗಳಲ್ಲಿ ಎದುರಾಳಿಗಳಿಗೆ ಹೆನ್ರಿ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಟೂರ್ನಿಯಲ್ಲಿ ಅತ್ಯಧಿಕ 10 ವಿಕೆಟ್ ಪಡೆದಿರುವ ಹೆನ್ರಿ, ಭಾರತದ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯದಲ್ಲಿಐದು ವಿಕೆಟ್ ಪಡೆದುಕೊಂಡು ಕಂಟಕವಾಗಿ ಪರಿಣಮಿಸಿದ್ದರು. ಭಾನುವಾರದ ಪಂದ್ಯದಲ್ಲಿ ಹೆನ್ರಿ ಮಿಂಚಿದರೆ ನ್ಯೂಜಿಲೆಂಡ್ ಗೆಲುವಿನ ಹಾದಿ ಸುಲಭವಾಗಬಹುದು. ಆದರೆ, ಫೈನಲ್ ಪಂದ್ಯಕ್ಕೆ ಎರಡು ದಿನ ಇರುವಾಗ ಹೆನ್ರಿ ಗಾಯಗೊಂಡಿರುವುದು ಕಿವಿಸ್‌ಗೆ ಆತಂಕ ಹೆಚ್ಚಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುವಾಗ ಹೆನ್ರಿ ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ. ಅಂತಿಮ ಪಂದ್ಯದಲ್ಲಿಹೆನ್ರಿ ಕಣಕ್ಕೆ ಇಳಿಯದಿದ್ದರೆ ಬ್ಲ್ಯಾಕ್ ಕ್ಯಾಫ್ಸ್‌ಗೆ ಹಿನ್ನಡೆಯಾಗಲಿದೆ. ಹೆನ್ರಿ 11ರ ಬಳಗದಲ್ಲಿ ಇರಲಿದ್ದಾರೆ ಎಂದು ಕಿವೀಸ್ ಕೋಚ್ ಗ್ಯಾರಿ ಸ್ಪೀಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜತೆಗೆ ನ್ಯೂಜಿಲೆಂಡ್ ತಂಡದಲ್ಲಿ ಯುವ ಆಟಗಾರ ರಚಿನ್ ರವೀಂದ್ರ, ಮಾಜಿ ನಾಯಕ ಕೇನ್ ವಿಲಿಯಮ್ಸನ್ ಕಿವೀಸ್ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಲಾಹೋರ್‌ನಲ್ಲಿ ಆಫ್ರಿಕಾ ಬೌಲರ್‌ಗಳನ್ನು ಬೆಂಡೆತ್ತಿದ್ದ ಜೋಡಿ 2ನೇ ವಿಕೆಟ್‌ಗೆ 164 ರನ್ ಜತೆಯಾಟದಲ್ಲಿ ಭಾಗಿಯಾಗಿತ್ತು. ಶತಕ ಸಿಡಿಸಿದ್ದ ಇಬ್ಬರೂ ಆಟಗಾರರು ನ್ಯೂಜಿಲೆಂಡ್ ಜಯದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಭಾರತೀಯ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸುವ ಚಾಕಚಕ್ಯತೆ ಹೊಂದಿರುವ ಇಬ್ಬರೂ, ಕೊನೆಯ ಲೀಗ್ ಪಂದ್ಯದಲ್ಲಿ ಭಾರತವನ್ನು ಕಾಡಿದ್ದರು. ಫೈನಲ್ ಪಂದ್ಯದಲ್ಲಿ ಈ ಇಬ್ಬರೂ ದಾಂಡಿಗರು ಬಲವಾಗಿ ನಿಂತರೆ ಕಿವೀಸ್ ಜಯದ ಹಾದಿ ಸುಲಭವಾಗಬಹುದು.
”ಪಿಚ್ ಯಾವುದೇ ಇರಲಿ, ಎದುರಾಳಿ ಯಾರೇ ಇರಲಿ ಪರಿಸ್ಥಿತಿಗೆ ಹೊಂದಿಕೊಂಡು ಆಟವಾಡುವುದಕ್ಕೆ ನಾವು ಇಷ್ಟಪಡುತ್ತೇವೆ,” ಎಂಬ ರಚಿನ್ ರವೀಂದ್ರ ಮಾತು ಫೈನಲ್ ಪಂದ್ಯದ ಕಾವು ಹೆಚ್ಚಿಸಿದೆ.