This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಹಣದ ಸಮಸ್ಯೆ ಇದ್ದರೆ ಹೋಳಿ ಹಬ್ಬದಂದು ಈ ವಸ್ತುಗಳನ್ನು ಕೊಂಡುಕೊಳ್ಳಿ

ಹಣದ ಸಮಸ್ಯೆ ಇದ್ದರೆ ಹೋಳಿ ಹಬ್ಬದಂದು ಈ ವಸ್ತುಗಳನ್ನು ಕೊಂಡುಕೊಳ್ಳಿ

ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಹೋಳಿ ಹಬ್ಬವನ್ನು ಸಂತೋಷ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೆಚ್ಚಾಗಿ ಈ ಹಬ್ಬವು ಮಾರ್ಚ್ ತಿಂಗಳಿನಲ್ಲಿಯೇ ಬರುತ್ತಿದ್ದು, ಹೋಳಿ ಹಬ್ಬ, ಕಾಮಣ್ಣನ ದಹನ ಅಥವಾ ಹೋಲಿಕಾ ದಹನದ ಬಳಿಕ ಬಣ್ಣಗಳಿಂದ ತುಂಬಿದ ಹೋಳಿ ಹಬ್ಬ, ಹೀಗೆ ಈ ಹಬ್ಬವನ್ನು ಆಚರಣೆ ಮಾಡಲು ಜನರು ಇಡೀ ವರ್ಷ ಕಾಯುತ್ತಾರೆ.

ಇನ್ನು, ಕೆಲವು ನಂಬಿಕೆಗಳ ಪ್ರಕಾರ ಹೋಳಿ ಹಬ್ಬದಂದು ಮನೆಗೆ ಕೆಲವು ವಸ್ತು ತರುವುದರಿಂದ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ, ಆಶೀರ್ವಾದ ನೀಡುವ ಮೂಲಕ ಹರಸುತ್ತಾಳೆ ಎಂದು ಹೇಳಲಾಗುತ್ತಿದ್ದು, ಈ ಕಾರಣದಿಂದಾಗಿ ಹೋಳಿಯ ದಿನ ಲಕ್ಷ್ಮೀ ದೇವಿಗೆ ಇಷ್ಟವಾದ ಕೆಲವು ವಸ್ತುಗಳನ್ನು ಖರೀದಿಸಿ ಮನೆಗೆ ತರಲಾಗುತ್ತದೆ. ಇದರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಎಂದಿಗೂ ಹಣದ ಕೊರತೆ ಬರುವುದಿಲ್ಲ.

ಹಾಗಾದರೆ ಆ ವಸ್ತುಗಳು ಯಾವವು? ಇಲ್ಲಿದೆ ಸಂಪೂರ್ಣ ಮಾಹಿತಿ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೋಳಿ ಹಬ್ಬದಂದು ಬಿದಿರಿನ ಸಸ್ಯಗಳನ್ನು ಮನೆಗೆ ತರಬಹುದು.

ಮನೆಗೆ ಬಿದಿರಿನ ಗಿಡವನ್ನು ತನ್ನಿ ಗಿಡವು ಮಂಗಳಕರವಾಗಿದ್ದು ಹಾಗಾಗಿ ಇದನ್ನು ಮನೆಗೆ ತರುವುದರಿಂದ ಲಕ್ಷ್ಮೀ ದೇವಿಯು ಸಂತೋಷಪಡುತ್ತಾಳೆ ಮತ್ತು ಮನೆಯಲ್ಲಿ ಹಣದ ಕೊರತೆಯನ್ನು ನೀಗಿಸಿ, ಶಾಂತಿಯ ವಾತಾವರಣವನ್ನು ಸೃಷ್ಠಿಸುತ್ತಾಳೆ ಎಂದು ನಂಬಲಾಗಿದೆ.ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ದೀಪಾವಳಿಯಂದು ಬೆಳ್ಳಿಯ ನಾಣ್ಯವನ್ನು ಮನೆಗೆ ತರುವಂತೆಯೇ,

ಹೋಳಿ ದಿನದಂದು ಬೆಳ್ಳಿಯ ನಾಣ್ಯವನ್ನು ಮನೆಗೆ ತರುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಿ, ಆರ್ಥಿಕ ನಷ್ಟವನ್ನು ತಡೆಯುತ್ತದೆ.  ಈ ನಾಣ್ಯವನ್ನು ಕೆಲವು ಅಕ್ಕಿ ಕಾಳುಗಳೊಂದಿಗೆ ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿ ಇರಿಸಿ. ಈ ರೀತಿ ಮಾಡುವುದರಿಂದ ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.

ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಹೋಳಿ ಹಬ್ಬದ ದಿನ ಕುಬೇರ ಯಂತ್ರ ಅಥವಾ ಶ್ರೀ ಯಂತ್ರವನ್ನು ಹೊಂದಿರುವ ಲೋಹದ ಆಮೆಯನ್ನು ಮನೆಗೆ ತನ್ನಿ, ಲಕ್ಷ್ಮೀ ದೇವಿ ಇದರಿಂದ ಸಂತುಷ್ಟಳಾಗುತ್ತಾಳೆ ಜೊತೆಗೆ ಮನೆಯಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಎಂದು ನಂಬಲಾಗಿದೆ. ಅದಲ್ಲದೆ ಇದನ್ನು ತರುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿಯು ದ್ವಿಗುಣ ಗೊಳ್ಳುತ್ತದೆ.

Nimma Suddi
";