ನಿಮ್ಮ ಸುದ್ದಿ ಬಾಗಲಕೋಟೆ
ಬಾಗಲಕೋಟೆಯ ಸಮಾಜವೀರ ಕನ್ನಡ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದ ದಿ.ಎನ್ .ಎಚ್.ಶಾಲಗಾರ ಅವರ ಸ್ಮರಣಾರ್ಥ ಎನ್ .ಎಚ್.ಶಾಲಗಾರ ಮೆಮೋರಿಯಲ್ ಟ್ರಸ್ಟ್ ನ್ನು ಇಂದು ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ ಹಾಗೂ ಮಾಜಿ ಸಚಿವರು, ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಅಜಯಕುಮಾರ ಸರನಾಯಕ ಅವರು ಉದ್ಘಾಟಿಸಿದರು.
ಹಿರಿಯ ಪತ್ರಕರ್ತರಾದ ಶ್ರೀ ರಾಮ ಮನಗೂಳಿ ಸರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವೀರಣ್ಣ ಚರಂತಿಮಠ, ಖ್ಯಾತ ವೈದ್ಯರಾದ ಡಾ.ಬಿ.ಎಚ್.ಕೆರೂಡಿ, ಕಾನಿಪ ಜಿಲ್ಲಾಧ್ಯಕ್ಷ ಆನಂದ ದಲಭಂಜನ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ, ಫತ್ತೇಶಾ ದರ್ಗಾದ ಮುಖಂಡರು, ಪತ್ರಿಕೆ ಸಂಪಾದಕ ಎಮ್.ಎನ್.ಶಾಲಗಾರ ವೇದಿಕೆಯಲ್ಲಿ ಇದ್ದರು.
ಈ ಸಂದರ್ಭದಲ್ಲಿ ಕೆರೂಡಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಏರ್ಪಡಿಸಲಾಗಿತ್ತು.