This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsHealth & FitnessLocal NewsState News

ತಾಲೂಕು ಕ್ರೀಡಾಕೂಟ ಉದ್ಘಾಟನೆ

ತಾಲೂಕು ಕ್ರೀಡಾಕೂಟ ಉದ್ಘಾಟನೆ

ಗಂಗಾವತಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ, ಶಾಲಾ ಶಿಕ್ಷಣ ಇಲಾಖೆ, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಗಂಗಾವತಿ ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಗಂಗಾವತಿ, ( ಕನಕಗಿರಿ,ಕಾರಟಗಿ) ತಾಲೂಕ ಮಟ್ಟದ ಪ್ರಾಥಮಿಕ/ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಭಾಗವಹಿಸಿದ್ದರು.

ಗಂಗಾವತಿಯ ಶ್ರೀ ಚನ್ನಬಸವ ಸ್ವಾಮಿ ತಾಲೂಕ ಕ್ರೀಡಾಂಗಣದಲ್ಲಿ ನಡೆದ ಗಂಗಾವತಿ ತಾಲೂಕ ಮಟ್ಟದ ಪ್ರಾಥಮಿಕ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಭಾಗಿಯಾಗಿ ಕ್ರೀಡಾ ಬಾವುಟ ಧ್ವಜಾರೋಹಣ ಹಾಗೂ ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ನಂತರ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ, ಕೊಪ್ಪಳ ಜಿಲ್ಲೆಯ ಮತ್ತು ಗಂಗಾವತಿಯ ಹೆಸರನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಲು ಬೇಕಾದ ಸಹಾಯ, ಸಹಕಾರ ನೀಡಲು ನಾನು ಎಂದಿಗೂ ಸಿದ್ದನಿದ್ದೇನೆ ಎಂದು ಶಾಸಕ ಜನಾರ್ಧನ ರೆಡ್ಡಿ ಭರವಸೆ ನೀಡಿದರು.  ಹಾಗೂ ಗಂಗಾವತಿಯ ಕ್ರೀಡಾಂಗಣವನ್ನು ಎಲ್ಲಾ ವ್ಯವಸ್ಥೆಗಳನ್ನುಳ್ಳ ಆಧುನಿಕ ಕ್ರೀಡಾಂಗಣವನ್ನಾಗಿ ನಿರ್ಮಿಸುವ ಭರವಸೆ ನೀಡಲಾಯಿತು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ್ ಎಸ್ ತಂಗಡಗಿ, ಗಂಗಾವತಿಯ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪೊಲೀಸ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ್ ರಾಮಚಂದ್ರಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕರು ರಂಗಸ್ವಾಮಿ ಕೆ, ಸೇರಿದಂತೆ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರುಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

";