ನಿಮ್ಮ ಸುದ್ದಿ ಬಾಗಲಕೋಟೆ
ಭಾರತ ದೇಶ ಭಾವೈಕ್ಯತೆಯ ಪ್ರತೀಕವಾಗಿ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿ ನಿಂತಿದೆ ಎಂದು ದೊಡ್ಡಣ್ಣವರ ಮೈನ್ಸ್ನ ಉಪಾಧ್ಯಕ್ಷ ರಾಚಪ್ಪ ಸರಡಗಿ ಹೇಳಿದರು.
ಜಿಲ್ಲೆಯ ಹಿರೇಮಾಗಿ ವ್ಯಾಪ್ತಿಯ ಎಚ್.ಆರ್.ಮೈನ್ಸ್ನಲ್ಲಿ ೭೨ನೇ ಗಣರಾಜೋತ್ಸವ ನಿಮಿತ್ತ ಹಮ್ಮಿಕೊಂಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭವ್ಯ ಇತಿಹಾಸ ಹೊಂದಿದ ನಮ್ಮ ಸಂಸ್ಕೃತಿಯನ್ನು ಯುವ ಪೀಳಿಗೆ ಅರಿತು ಮುನ್ನಡೆಯಬೇಕು ಎಂದರು.
ಚನ್ನಮ್ಮ ಸರಡಗಿ, ವ್ಯವಸ್ಥಾಪಕ ಪ್ರಕಾಶ, ತಾಪಂ ಮಾಜಿ ಅಧ್ಯಕ್ಷ ಪೀರಾ ಖಾದ್ರಿ, ಹುಸೇನ್ ನದಾಫ್, ಬಸವರಾಜ ನಿಂಬಲಗುAದಿ, ಸಾಯಿಕಿರಣ, ವಿಶ್ವನಾಥ ಹಾಗೂ ಕಾರ್ಮಿಕರು, ಸಿಬ್ಬಂದಿ ಇದ್ದರು.