This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsEntertainment NewsHealth & FitnessInternational NewsLocal NewsNational NewsState News

ಏಷ್ಯಾ ಕಪ್ ಗೆ ಭಾರತ ತಂಡ ರೆಡಿ

ಏಷ್ಯಾ ಕಪ್ ಗೆ ಭಾರತ ತಂಡ ರೆಡಿ

ಮುಂಬಯಿ:

ಪ್ರತಿಷ್ಠಿತ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಗೆ(Asia Cup) 17 ಸದಸ್ಯರ ತಂಡ ಸೋಮವಾರ ಪ್ರಕಟಗೊಂಡಿದೆ. ಆಯ್ಕೆ ಸಮಿತಿಯ ನೂತನ ಅಧ್ಯಕ್ಷ(India men’s cricket chief selector) ಅಜಿತ್​ ಅಗರ್ಕರ್​(Ajit Agarkar) ಅವರು ತಂಡದ ಪಟ್ಟಿಯನ್ನು ರೋಹಿತ್ ಶರ್ಮ(Rohit Sharma)​ ಉಪಸ್ಥಿತಿಯಲ್ಲಿ ಪ್ರಕಟಿಸಿದರು. ಇದೇ ವೇಳೆ ವಿಶ್ವಕಪ್​ ಟೂರ್ನಿಗೆ ತಂಡ ಪ್ರಕಟಿಸುವ(ODI World Cup 2023 squad) ಕುರಿತಾಗಿಯೂ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ನನಗೆ ಬುದ್ಧಿ ಇದೆ
ಈಗಾಗಲೇ ಆಸ್ಟ್ರೇಲಿಯಾ ಮತ್ತು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​ಗೆ ಸಂಭಾವ್ಯ ತಂಡಗಳನ್ನು ಪ್ರಕಟಿದೆ. ಆದರೆ ಆತಿಥೇಯ ಭಾರತ ಮಾತ್ರ ತಡವರಿಸಲು ಕಾರಣ ಏನು? ಅಥವಾ ಏಷ್ಯಾಕಪ್​ಗೆ ಪ್ರಕಟಗೊಂಡ ತಂಡೆವೇ ವಿಶ್ವಕಪ್​ಗೂ ಅಂತಿಮವಾ? ಎಂದು ಪತ್ರಕರ್ತರೊಬ್ಬರು ಅಗರ್ಕರ್​ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಗರ್ಕರ್​, “ಏಕದಿನ ವಿಶ್ವಕಪ್‌ ಟೂರ್ನಿಗೂ ಈಗಲೇ ತಂಡವನ್ನು ಪ್ರಕಟಿಸಲು ನನಗೆ ಬುದ್ದಿ ಇಲ್ಲವಾ? ಈ ತಂಡ ಏಷ್ಯಾ ಕಪ್‌ ಟೂರ್ನಿಗೆ ಮಾತ್ರ ಸೀಮಿತ. ಗಾಯಗೊಂಡು ದೀರ್ಘಕಾಲ ತಂಡದಿಂದ ಹೊರಗುಳಿದಿದ್ದ ಪ್ರಮುಖ ಆಟಗಾರರು ತಂಡಕ್ಕೆ ಮರಳಿದ್ದಾರೆ. ಜತೆಗೆ ಯುವ ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ. ಇವರೆಲ್ಲ ಈ ಟೂರ್ನಿಯಲ್ಲಿ ಚೆನ್ನಾಗಿ ಪ್ರದರ್ಶನ ತೋರಲಿದ್ದಾರೆ ಎಂಬ ನಂಬಿಕೆ ಇದೆ. ಆದರೆ ವಿಶ್ವಕಪ್​ಗೆ ಬೇರೆಯೇ ತಂಡ ಪ್ರಕಟಗೊಳ್ಳಲಿದೆ” ಎಂದರು.

ಇನ್ನೂ ಸಮಯವಿದೆ
ವಿಶ್ವಕಪ್‌ ಟೂರ್ನಿಗೆ ತಂಡ ಪ್ರಕಟಿಸಲು ಇನ್ನೂ ಸಮಯವಿದೆ. ಇದಕ್ಕೂ ಮುನ್ನ ಭಾರತ ಏಷ್ಯಾ ಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಇಲ್ಲಿನ ಪ್ರದರ್ಶನವನ್ನು ನೋಡಿಕೊಂಡು ತಂಡ ಪ್ರಕಟಿಸಲಾಗುವುದು. ಏಷ್ಯಾ ಕಪ್​ನಲ್ಲಿ ಸ್ಥಾನ ಪಡೆದ ಎಲ್ಲ ಆಟಗಾರರು ವಿಶ್ವಕಪ್​ಗೂ ಆಯ್ಕೆಯಾಗುತ್ತಾರೆ ಎನ್ನುವ ಭ್ರಮೆ ಯಾರಿಗೂ ಬೇಡ. ಪ್ರದರ್ಶನ ತೋರಿದರಷ್ಟೇ ಆಯ್ಕೆ ಎಂದು ಹೇಳಿದರು.

ಏಷ್ಯಾಕಪ್​ ಟೂರ್ನಿ ಆಗಸ್ಟ್​ 30 ರಿಂದ ಆರಂಭವಾಗಲಿದೆ. ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್‌ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಸೆಪ್ಟಂಬರ್​ 2 ರಂದು ಲಂಕಾದ ಕ್ಯಾಂಡಿಯಲ್ಲಿ ಸೆಣಸಾಟ ನಡೆಸಲಿದೆ.

ಏಷ್ಯಾಕಪ್​ಗೆ ಭಾರತ ತಂಡ
ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).

";