This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

International NewsNational News

ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ:ಮಾಲ್ಡೀವ್ಸ್​ಗೆ ಹೋಗೋದು ಬಿಟ್ಟ ಭಾರತೀಯರು

ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ:ಮಾಲ್ಡೀವ್ಸ್​ಗೆ ಹೋಗೋದು ಬಿಟ್ಟ ಭಾರತೀಯರು

ನವದೆಹಲಿ: ಭಾರತೀಯ ಸೇನೆಯ ಮೊದಲ ಬ್ಯಾಚು ಮಾಲ್ಡೀವ್ಸ್​ನಿಂದ ಕಾಲ್ತೆಗೆಯುತ್ತಿರುವ ಹೊತ್ತಿನಲ್ಲೇ ಭಾರತೀಯ ಪ್ರವಾಸಿಗರ ಸಂಖ್ಯೆ ಮಾಲ್ಡೀವ್ಸ್​ನಲ್ಲಿ ಇಳಿಮುಖವಾಗುತ್ತಿದ್ದು, ಪ್ರತೀ ವರ್ಷ ಅತಿಹೆಚ್ಚು ಭಾರತೀಯ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದ್ದ ಮಾಲ್ಡೀವ್ಸ್ ದೇಶಕ್ಕೆ ಈಗ ಭಾರತೀಯರ ಅನುಪಸ್ಥಿತಿ ಕಾಡುತ್ತಿದೆ. ಭಾರತದಿಂದ ಮಾಲ್ಡೀವ್ಸ್​ಗೆ ಪ್ರವಾಸ ಹೋಗುವವರ ಸಂಖ್ಯೆಯಲ್ಲಿ ಬಹಳ ಕಡಿಮೆ ಆಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

2023ರಲ್ಲಿ ಮಾಲ್ಡೀವ್ಸ್​ಗೆ ಹೋದ ಪ್ರವಾಸಿಗರಲ್ಲಿ ಭಾರತೀಯರು ಟಾಪ್ ಆಗಿದ್ದು, 2024ರಲ್ಲಿ ಆರನೇ ಸ್ಥಾನಕ್ಕೆ ಇಳಿದಿದೆ. ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲವಾಗಿರುವ ಮಾಲ್ಡೀವ್ಸ್​ಗೆ ಇದು ಆತಂಕದ ಮತ್ತು ಸವಾಲಿನ ವಿಚಾರವಾಗಿದ್ದು, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2023ರಲ್ಲಿ 17 ಲಕ್ಷ ಪ್ರವಾಸಿಗರು ಆ ದೇಶಕ್ಕೆ ಭೇಟಿ ನೀಡಿದ್ದರು. ಈ ಪೈಕಿ 2.09 ಲಕ್ಷ ಜನರು ಭಾರತೀಯರೇ ಆಗಿದ್ದರು.

ರಷ್ಯಾ ಮತ್ತು ಚೀನಾದ ಪ್ರವಾಸಿಗರು ನಂತರದ ಸ್ಥಾನ ಹೊಂದಿದ್ದರು. 2024ರಲ್ಲಿ ಮಾರ್ಚ್ 2ರವರೆಗೂ ದೊರೆತ ಅಂಕಿ ಅಂಶದ ಪ್ರಕಾರ ಮಾಲ್ಡೀವ್ಸ್​ಗೆ ಪ್ರವಾಸ ಹೋದ ಭಾರತೀಯರ ಸಂಖ್ಯೆಯಲ್ಲಿ ಶೇ. 33ರಷ್ಟು ಇಳಿಮುಖವಾಗಿದ್ದು, 2023ರಲ್ಲಿ ಮಾರ್ಚ್ 2ರವರೆಗೆ 41,224 ಭಾರತೀಯರು ಮಾಲ್ಡೀವ್ಸ್​ಗೆ ಪ್ರವಾಸ ಹೋಗಿದ್ದರು. ಈ ವರ್ಷ (2024) ಇದೇ ಅವಧಿಯಲ್ಲಿ ಮಾಲ್ಡೀವ್ಸ್​ಗೆ ತೆರಳಿದ ಭಾರತೀಯರ ಸಂಖ್ಯೆ 27,224 ಎನ್ನಲಾಗಿದೆ.

ಮಾಲ್ಡೀವ್ಸ್​ನಲ್ಲಿ ಬಿಸಿಲ ಬೇಗೆ ಇರುವ ಅವಧಿಯು ಪೀಕ್ ಸೀಸನ್ ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಯೂರೋಪ್ ಪ್ರವಾಸಿಗರು ಬರುವುದಿಲ್ಲ. ಇಂಥ ಕಾಲಘಟ್ಟದಲ್ಲಿ ಮಾಲ್ಡೀವ್ಸ್​ಗೆ ಭಾರತೀಯರು ಹೋಗುತ್ತಿದ್ದು, ಇದು ಅಲ್ಲಿಯ ಪ್ರವಾಸೋದ್ಯಮಕ್ಕೆ ದೊಡ್ಡ ಬಲ ಸಿಕ್ಕಂತೆ. ಈಗ ಭಾರತದಿಂದ ಮಾಲ್ಡೀವ್ಸ್​ಗೆ ಹೋಗುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗುತ್ತಿದೆ ಎಂದು ಮಾಹಿತಿ ಕಂಡು ಬಂದಿದೆ.

";