ಫಿಲ್ಟರ್ ಕಾಫಿ (Filter Coffee) ಪ್ರಿಯರಿಗೊಂದು ಶುಭ ಸುದ್ದಿಯನ್ನು ನಾವು ನೀಡಲಿದ್ದು ವಿಶ್ವದ ಟಾಪ್ 38 ಕಾಫಿ ಪಟ್ಟಿಯಲ್ಲಿ ಭಾರತದ (Indian) ಫಿಲ್ಟರ್ ಕಾಫಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಪ್ಲಾಟ್‌ಫಾರ್ಮ್ ಟೇಸ್ಟ್ ಅಟ್ಲಾಸ್ ಕುದಿಸಿದ ಸುಗಂಧಯುಕ್ತ ಪಾನೀಯವಾದ ಕಾಫಿಯ ಜಾಗತಿಕ ರೇಟಿಂಗ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು.
ಇದರಲ್ಲಿ ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ ಎರಡನೇ ಸ್ಥಾನ ನೀಡುವ ಮೂಲಕ ಟೇಸ್ಟ್ ಅಟ್ಲಾಸ್ ಭಾರತದ ಕಾಫಿಯ ಪ್ರಯಾಣವನ್ನು ಇನ್ನಷ್ಟು ಆಹ್ಲಾದಗೊಳಿಸಿದೆ.
ಫಿಲ್ಟರ್ ಕಾಫಿಗೆ ಎರಡನೇ ಸ್ಥಾನ
ಅದರಲ್ಲಿ ಭಾರತದ ಫಿಲ್ಟರ್ ಕಾಫಿ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ದೇಶದ ಖ್ಯಾತಿಯನ್ನು ಇನ್ನಷ್ಟು ವಿಸ್ತಾರಗೊಳಿಸಿದೆ. ಇಡಿಯ ದೇಶವೇ ಹೆಮ್ಮೆಪಡುವ ಸಂಗತಿ ಇದಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಫಿಲ್ಟರ್ ಕಾಫಿಗೆ ಎರಡನೇ ಸ್ಥಾನ ಪಡೆದುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕ್ಯೂಬನ್ ಎಸ್ಪ್ರೆಸೊಗೆ ಮೊದಲ ಸ್ಥಾನ
ಜಾಗತಿಕ ಪಟ್ಟಿಯಲ್ಲಿ ಕ್ಯೂಬನ್ ಎಸ್ಪ್ರೆಸೊ ಮೊದಲ ಸ್ಥಾನದಲ್ಲಿದ್ದು ದಕ್ಷಿಣ ಭಾರತದ ಫಿಲ್ಟರ್ ಕಾಫಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ. ಕೆಫೆ ಕ್ಯುಬಾನೊ ಅಥವಾ ಕ್ಯೂಬನ್ ಎಸ್ಟ್ರೆಸೊ ಎಂದೂ ಕರೆಯುವ ಈ ಕಾಫಿ ಕ್ಯೂಬಾದಲ್ಲಿ ಜನ್ಮತಾಳಿದ ಒಂದು ರೀತಿಯ ಕಾಫಿಯಾಗಿದೆ.
ಡಾರ್ಕ್ ರೋಸ್ಟ್ ಕಾಫಿ ಬೀಜಗಳಿಂದ ತಯಾರಿಸಿ ಕಾಫಿ ಹುಡಿ ಹಾಗೂ ಸಕ್ಕರೆ ಬಳಸಿ ತಯಾರಿಸಲಾದ ಸಿಹಿಯಾದ ಎಸ್ಪ್ರೆಸೊವನ್ನು (ಸಾಂಪ್ರದಾಯಿಕವಾಗಿ ನೈಸರ್ಗಿಕ ಕಂದು ಸಕ್ಕರೆಯೊಂದಿಗೆ) ಒಳಗೊಂಡಿರುತ್ತದೆ.
ಕಾಫಿ ಕುದಿಯುವಾಗ ಇದಕ್ಕೆ ಸಕ್ಕರೆಯನ್ನು ಸೇರಿಸಲಾಗುತ್ತದೆ ಹಾಗೂ ಒಂದು ಚಮಚ ಕೆನೆಯನ್ನು ನೊರೆಯ ರೀತಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಇದನ್ನು ಸ್ಟವ್ಟಾಪ್ ಎಸ್ಪ್ರೆಸೊ ತಯಾರಕ ಅಥವಾ ವಿದ್ಯುತ್ ಎಸ್ಪ್ರೆಸೊ ಯಂತ್ರದಲ್ಲಿ ಕುದಿಸಲಾಗುತ್ತದೆ.
ಫಿಲ್ಟರ್ ಕಾಫಿಯನ್ನು ಹೇಗೆ ತಯಾರಿಸಲಾಗುತ್ತದೆ?
ಭಾರತದ ಫಿಲ್ಟರ್ ಕಾಫಿಯನ್ನು ಸರಳ ಹಾಗೂ ಕಾಫಿ ಫಿಲ್ಟರ್ ಯಂತ್ರ ಬಳಸಿ ತಯಾರಿಸಲಾಗುತ್ತದೆ. ಕಾಫಿ ತಯಾರಿಸುವಾಗ ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇರಿಸಲಾಗುತ್ತದೆ ಇದು ಕುದಿದ ಮೇಲೆ ನುಣ್ಣಗೆ ಪುಡಿ ಮಾಡಿದ ಕಾಫಿ ಪುಡಿಯನ್ನು ಈ ನೀರಿಗೆ ಸೇರಿಸಲಾಗುತ್ತದೆ.
ಕುದಿದ ನೀರನ್ನು ಡಿಕಾಂಟರ್ ಎಂದು ಕರೆಯಲಾಗುತ್ತದೆ. ಇದಾದ ನಂತರ ಕಾಫಿಯನ್ನು ಸಣ್ಣ ಉರಿಯಲ್ಲಿ ಕುದಿಸಲಾಗುತ್ತದೆ ಘಮ್ಮನೆ ಪರಿಮಳವರೆಗೆ ಕಾಫಿಯನ್ನು ಕುದಿಸಬೇಕು.
ದಕ್ಷಿಣ ಭಾರತದಲ್ಲಿ ಕಾಫಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಕಾಫಿಯ ತಯಾರಿ ಕೂಡ ಅತ್ಯಧಿಕವಾಗಿದೆ. ಇಲ್ಲಿನ ಫಿಲ್ಟರ್ ಕಾಫಿ ಬರೇ ಪಾನೀಯ ಮಾತ್ರವಲ್ಲ ಬದಲಿಗೆ ಸಂಸ್ಕೃತಿ ಹಾಗೂ ಸಂಪ್ರದಾಯದ ಒಂದು ಭಾಗ ಎಂದೆನಿಸಿದೆ.
ಫಿಲ್ಟರ್ ಕಾಫಿಯ ವಿಶೇಷತೆ ಏನು?
ದಕ್ಷಿಣ ಭಾರತದಲ್ಲಿ ಅನೇಕ ಮನೆಗಳಲ್ಲಿ ರಾತ್ರಿಯೇ ಫಿಲ್ಟರ್ ತಯಾರಿಸುತ್ತಾರೆ. ಇದರಿಂದ ಬೆಳಗ್ಗಿನ ಜಾವ ಬಿಸಿ ಬಿಸಿ ಕಾಫಿಯನ್ನು ತಯಾರಿಸಿ ಹಾಲು ಸೇರಿಸಿ ಕುಡಿಯುತ್ತಾರೆ.
ಕಾಫಿ ಫಿಲ್ಟರ್‌ಗೆ ಬಿಸಿಯಾದ ಮಂದ ಹಾಲು ಹಾಗೂ ಸಕ್ಕರೆಯನ್ನು ಬೆರೆಸಿ ಕಾಫಿ ಸಿದ್ಧಪಡಿಸುತ್ತಾರೆ. ಕಾಫಿಯನ್ನು ಸಾಮಾನ್ಯವಾಗಿ ಸ್ಟೀಲ್ ಇಲ್ಲವೇ ಹಿತ್ತಾಳೆ ಇಲ್ಲವೇ ಗಾಜಿನ ಲೋಟದಲ್ಲಿ ನೀಡಲಾಗುತ್ತದೆ.
ಒಟ್ಟಾರೆಯಾಗಿ ದಕ್ಷಿಣದಲ್ಲಿ ಕಾಫಿ ಇಲ್ಲದೆ ದಿನದ ಆರಂಭ ಹಾಗೂ ಅಂತ್ಯ ನಡೆಯುವುದೇ ಇಲ್ಲ ಎಂದೆನ್ನುವ ಮಟ್ಟಿಗೆ ಕಾಫಿ ಜನಪ್ರಿಯತೆ ಪಡೆದುಕೊಂಡಿದೆ ಎಂದೆನ್ನಬಹುದು.
ಕ್ಯೂಬನ್ ಎಸ್ಪ್ರೆಸೊ (ಕ್ಯೂಬಾ)
ದಕ್ಷಿಣ ಭಾರತದ ಕಾಫಿ (ಭಾರತ)
ಎಸ್ಪ್ರೆಸೊ ಫ್ರೆಡ್ಡೊ (ಗ್ರೀಸ್)
ಫ್ರೆಡ್ಡೋ ಕ್ಯಾಪುಸಿನೊ (ಗ್ರೀಸ್)
ಕ್ಯಾಪುಚ್ಚಿನೊ (ಇಟಲಿ)
ಟರ್ಕಿಶ್ ಕಾಫಿ (ಟರ್ಕಿಯೆ)
ರಿಸ್ಟ್ರೆಟ್ಟೊ (ಇಟಲಿ)
ಫ್ರಾಪ್ಪೆ (ಗ್ರೀಸ್)
ಐಸ್ಕಫೀ (ಜರ್ಮನಿ)
ವಿಯೆಟ್ನಾಮೀಸ್ ಐಸ್ಡ್ ಕಾಫಿ (ವಿಯೆಟ್ನಾಂ)