This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

International NewsNational News

ಡಿಜಿಟಲ್ ಕ್ರಾಂತಿಗೆ ಕಾರಣವಾದ ಯುಪಿಐ: ಶ್ರೀಲಂಕಾ, ಮಾರಿಷಸ್​ನಲ್ಲೂ ಭಾರತದ ಯುಪಿಐ, ರುಪೇ ಕಾರ್ಡ್ ಲಭ್ಯ

ಡಿಜಿಟಲ್ ಕ್ರಾಂತಿಗೆ ಕಾರಣವಾದ ಯುಪಿಐ: ಶ್ರೀಲಂಕಾ, ಮಾರಿಷಸ್​ನಲ್ಲೂ ಭಾರತದ ಯುಪಿಐ, ರುಪೇ ಕಾರ್ಡ್ ಲಭ್ಯ

ನವದೆಹಲಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಒಂದು ಕಾರಣವಾಗಿರುವ ಯುಪಿಐ ಈಗ ಬೇರೆ ಬೇರೆ ದೇಶಗಳಲ್ಲಿ ಬಳಕೆಯಾಗತೊಡಗಿದೆ. ಸಿಂಗಾಪುರದಲ್ಲಿ ಚಲಾವಣೆಯಲ್ಲಿರುವ ಯುಪಿಐ ಸೇವೆ ಈಗ ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲೂ ಲಭ್ಯ ಇದೆ.

ಇಂದು ಸೋಮವಾರ ಈ ಎರಡು ದೇಶಗಳಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ ಸೇವೆ ಚಾಲನೆಗೊಂಡಿದೆ. ಇದರೊಂದಿಗೆ ಆ ದೇಶಗಳಿಗೆ ಪ್ರವಾಸ ಹೋಗುವ ಭಾರತೀಯರಿಗೆ, ಹಾಗೂ ಭಾರತಕ್ಕೆ ಪ್ರವಾಸ ಬರುವ ಆ ದೇಶದ ಜನರಿಗೆ ಹಣಕಾಸು ವಹಿವಾಟು ಮಾಡುವುದು ಸುಲಭವಾಗಲಿದೆ.ಶ್ರೀಲಂಕಾದಲ್ಲಿ ಡಿಜಿಟಲ್ ವಹಿವಾಟಿಗೆ ಲಂಕಾ ಪೇ (Lanka Pay) ಪ್ಲಾಟ್​ಫಾರ್ಮ್ ಇದೆ. .

ಇನ್ನು ರುಪೇ ಕಾರ್ಡ್ ಜಾಗತಿಕವಾಗಿ ಮಾನ್ಯತೆ ಪಡೆಯುತ್ತಿದೆ. ಶ್ರೀಲಂಕಾ ಮತ್ತು ಮಾರಿಷಸ್​ನಲ್ಲೂ ಈಗ ರುಪೇ ಕಾರ್ಡ್ ಬಳಸಿ ವಹಿವಾಟು ನಡೆಸಬಹುದು. ಇದು ಈ ಎರಡು ದೇಶಗಳ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ.‘ಮಾರಿಷಸ್​ನಲ್ಲಿ ರುಪೇ ಕಾರ್ಡ್ ಸೇವೆ ವಿಸ್ತರಿಸುವುದರಿಂದ ಅಲ್ಲಿನ ಬ್ಯಾಂಕುಗಳು ರುಪೇ ಚೌಕಟ್ಟಿನಲ್ಲಿ ಕಾರ್ಡ್​ಗಳನ್ನು ನೀಡಬಹುದು.

ಭಾರತ ಮತ್ತು ಮಾರಿಷಸ್​ನಲ್ಲಿ ಇಂಥ ರುಪೇ ಕಾರ್ಡ್ ಬಳಕೆ ಸಾಧ್ಯವಾಗುತ್ತದೆ,’ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.2022ರ ಫೆಬ್ರುವರಿಯಲ್ಲಿ ಸಿಂಗಾಪುರದ ಪೇನೌ ಜೊತೆ ಯುಪಿಐ ಅನ್ನು ಜೋಡಿಸಲಾಗಿತ್ತು. ಈ ಮೂಲಕ ಸಿಂಗಾಪುರದಲ್ಲಿರುವ ಭಾರತೀಯರು ತಮ್ಮ ತವರೂರಿಗೆ ಹಣ ಕಳುಹಿಸುವುದು ಬಹಳ ಸುಲಭವಾಗಿದೆ.

";