This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ಸಾವಿತ್ರಿಬಾಯಿ ಫುಲೆ ಪ್ರೇರಣೆ

ನಿಮ್ಮ ಸುದ್ದಿ ಬಾಗಲಕೋಟೆ

ಗುರಿ ಸಾಧನೆಯ ಹಾದಿಯಲ್ಲಿ ಕಲ್ಲು ಮುಳ್ಳುಗಳು, ಅಪಹಾಸ್ಯ-ಅವಮಾನಗಳು ಸಹಜ ಎಂದು ಶಿಕ್ಷಕ ಅಶೋಕ ಬಳ್ಳಾ ತಿಳಿಸಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲ್ಯವಿವಾಹ, ವಿಧವೆಯರ ಕೇಶಮುಂಡನ, ಸತಿ ಪದ್ಧತಿಯಂತಹ ಹೀನ ಆಚರಣೆಗಳ ಕಾಲಘಟ್ಟದಲ್ಲಿ ಮಹಿಳೆಯರ ಹಕ್ಕುಗಳು, ಶಿಕ್ಷಣ, ಸ್ವಾವಲಂಬನೆ, ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿ ಯಶಸ್ವಿಯಾದ ಮಹಿಳೆ ದೇಶದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಎಂದು ಹೇಳಿದರು.

ತನ್ನ ಸಾಮಾಜಿಕ ಕಳಕಳಿಯಿಂದ ಮಹಿಳಾ ಶಿಕ್ಷಣದ ಗುರಿ ಸಾಸಲು ಶಾಲೆಗಳನ್ನು ಪ್ರಾರಂಭಿಸಿದರು. ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗೆ ತೆರಳುವಾಗ ಸಾವಿತ್ರಿಬಾಯಿ ಪುಲೆಯವರಿಗೆ ಸಮಾಜದ ಕೆಲವರು ಅವಹೇಳನಕಾರಿಯಾಗಿ ನಿಂದಿಸುವುದು, ಕಲ್ಲು ಎಸೆಯುವುದು, ಸಗಣಿ ಎರಚುವಂತಹ ನೀಚ ಕೃತ್ಯಗಳನ್ನು ಎಸಗಿದರು. ಇಷÁ್ಟದರೂ ತಮ್ಮ ಗುರಿ ಸಾಧನೆ ಮಾಡಿದ ಛಲಗಾತಿ ಸಾವಿತ್ರಿಬಾಯಿ ಪುಲೆ. ಇಂತಹ ಸಾಧಕಿ ಇಂದಿನ ಗ್ರಾಮೀಣ ಹೆಣ್ಣು ಮಕ್ಕಳಿಗೆ ಪ್ರೇರಣೆಯಾಗಲಿ. ಆ ಮೂಲಕ ಇನ್ನೂ ಕೆಲವೆಡೆ ಅಸ್ತಿತ್ವದಲ್ಲಿರುವ ಬಾಲ್ಯ ವಿವಾಹ, ವರದಕ್ಷಿಣೆ ಪಿಡುಗುಗಳು ದೇಶದಿಂದ ನಾಶವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಶಿಕ್ಷಕ ಎಸ್.ಎಸ್.ಲಾಯದಗುಂದಿ, ಶಾಲೆಗಳಲ್ಲಿ ಆಚರಣೆ ಮಾಡುವ ಸಾಧಕರ, ಮಹಾಪುರುಷÀರ ಜಯಂತಿ ಕಾರ್ಯಕ್ರಮಗಳ ಮುಖ್ಯ ಉದ್ದೇಶ ಮಕ್ಕಳಿಗೆ ಅವರನ್ನು ಪರಿಚಯಿಸುವುದು, ಅವರ ಸೇವೆ ಸಾಧನೆಗಳನ್ನು ಮೆಲುಕು ಹಾಕುವುದು, ಅವರಂತೆಯೇ ಸಾಧನೆಯೆಡೆಗೆ ತುಡಿಯುವ ಹಂಬಲ ಬೆಳೆಸುವುದು ಎಂದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪ್ರೊಜೆಕ್ಟರ್ ಮೂಲಕ ಸಾವಿತ್ರಿಬಾಯಿ ಪುಲೆ ಕುರಿತ ಸಾಕ್ಷ್ಯ ಚಿತ್ರ ತೋರಿಸಲಾಯಿತು. ಮುಖ್ಯಗುರು ಎ.ಐ.ಕಂಬಳಿ, ಶಿಕ್ಷಕರಾದ ಎಸ್.ಜಿ.ಪಾಟೀಲ, ಬಿ.ಬಿ.ವಾಲಿಕಾರ, ಎಂ.ಜಿ.ಬಡಿಗೇರ, ಎಸ್.ಎಲ್.ಕಣಗಿ ಇತರರು ಇದ್ದರು.

 

Nimma Suddi
";