This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

National NewsState News

IPL 2024: ಲಕ್ನೋ ತೊರೆದು ಕೆಕೆಆರ್ ಸೇರಿದ ಕೊಹ್ಲಿಯ ಬದ್ಧ ವೈರಿ​

IPL 2024: ಲಕ್ನೋ ತೊರೆದು ಕೆಕೆಆರ್ ಸೇರಿದ ಕೊಹ್ಲಿಯ ಬದ್ಧ ವೈರಿ​

ಕೋಲ್ಕೊತಾ: ಟೀಮ್​ ಇಂಡಿಯಾದ ಮಾಜಿ ಆಟಗಾರ, ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡದ ಮೆಂಟರ್​ ಆಗಿದ್ದ ಗೌತಮ್​ ಗಂಭೀರ್(Gautam Gambhir)​ ಅವರು ಮತ್ತೆ ತಮ್ಮ ಐಪಿಎಲ್(IPL 2024)​ ತವರು ತಂಡವಾದ ಕೆಕೆಆರ್​ಗೆ ಮರಳಿದ್ದಾರೆ. ಲಕ್ನೋ ಫ್ರಾಂಚೈಸಿ ಜತೆಗಿನ ಒಪ್ಪಂದವನ್ನು ಕೈಬಿಟ್ಟು ಕೆಕೆಆರ್​ಗೆ(Kolkata Knight Riders) ಮೆಂಟರ್​ ಆಗಿ ನೇಮಕಗೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್‌ ಸ್ಥಾನದಿಂದ ಕೆಳಗಿದ ವಿಚಾರವನ್ನು ಗಂಭೀರ್​ ಬುಧವಾರ ಖಚಿತಪಡಿಸಿದ್ದಾರೆ.

“ಲಕ್ನೋ ಪ್ರಾಂಚೈಸಿಯೊಂದಿಗಿನ 2 ವರ್ಷಗಳ ಪಯಣವನ್ನು ಮುಗಿಸುತ್ತಿದ್ದೇನೆ. ಈ ಪಯಣದಲ್ಲಿ ಹಲವು ಆಟಗಾರರೊಂದಿಗೆ ಕಳೆದ ಸಂಭ್ರಮದ ಕ್ಷಣವನ್ನು ಮರೆಯಲು ಅಸಾಧ್ಯ. ಎಲ್ಲ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಪ್ರತಿಯೊಬ್ಬರಿಗೂ ನಾನು ಪ್ರೀತಿ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ” ಎಂದು ಗಂಭೀರ್​ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಬರೆದುಕೊಂಡು ಮೆಂಟರ್‌ ಸ್ಥಾನದಿಂದ ಕೆಳಗಿದ ವಿಚಾರವನ್ನು ತಿಳಿಸಿದ್ದಾರೆ.

“2 ವರ್ಷಗಳ ಕಾಲ ಎಲ್ಲ ಹೊಸ ಪ್ರಯತ್ನಗಳಿಗೆ ಬೆಂಬಲ ನೀಡಿದ ಲಕ್ನೋ ತಂಡದ ಮಾಲಿಕರಾದ ಡಾ. ಸಂಜೀವ್ ಗೋಯೆಂಕಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ತಂಡವು ಭವಿಷ್ಯದಲ್ಲಿ ಇನ್ನಷ್ಟು ಅದ್ಭುತ ಪ್ರದರ್ಶನ ತೋರಲಿ. ಪ್ರತಿಯೊಬ್ಬ ಲಕ್ನೋ ತಂಡದ ಅಭಿಮಾನಿಯನ್ನು ಹೆಮ್ಮೆಪಡುವಂತೆ ಮಾಡಲಿ. ಆಲ್ ದಿ ಬೆಸ್ಟ್ LSG ಬ್ರಿಗೇಡ್!” ಎಂದು ಗಂಭೀರ್‌ ಹಾರೈಸಿದ್ದಾರೆ.

 

ಕೆಕೆಆರ್​ ತಂಡದ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಗಂಭೀರ್‌ ಮುಂದಿನ ಆವೃತ್ತಿಯಲ್ಲಿ ತಂಡದ ಮೆಂಟರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆಯೇ ಗಂಭೀರ್​ ಕೆಕೆಆರ್​ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದು ಈಗ ನಿಜವಾಗಿದೆ.

ಕೆಕೆಆರ್​ನ ಯಶಸ್ವಿ ನಾಯಕ ಗಂಭೀರ್​…
ಡೆಲ್ಲಿ ಕ್ಯಾಪಿಟಲ್ಸ್​​ ತಂಡದಲ್ಲಿ ಆಟಗಾರನಾಗಿದ್ದ ಗಂಭೀರ್ ಅವರನ್ನು​ 2011ರ ಆವೃತ್ತಿಯ ಹರಾಜಿನಲ್ಲಿ ದಾಖಲೆಯ 2.4 ಮಿಲಿಯನ್ ಯುಎಸ್ ಡಾಲರ್​ಗೆ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಖರೀದಿಸಿತ್ತು. ಅವರ ನಾಯಕತ್ವದಲ್ಲಿ ಕೆಕೆಆರ್​ ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ನಾಲ್ಕು ಋತುಗಳಲ್ಲಿ, ಅವರು ತಂಡವನ್ನು ಮುನ್ನಡೆಸಿದ್ದರು. ವಿಶೇಷವಾಗಿ 2012ರಲ್ಲಿ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. ಇದಾದ ಬಳಿಕ 2014 ರಲ್ಲಿ ಎರಡನೇ ಬಾರಿ ತಂಡಕ್ಕೆ ಕಪ್​ ಗೆಲ್ಲಿಸಿ ಕೊಟ್ಟಿದ್ದರು. ಇದರಿಂದಾಗಿ ಕೆಕೆಆರ್​ ತಂಡದ ಯಶಸ್ವಿ ನಾಯಕ ಎಂಬ ಖ್ಯಾತಿ ಹೊಂದಿದ್ದಾರೆ.

ಕೊಹ್ಲಿಯೊಂದಿಗೆ ಜಗಳ
2013ರ ಐಪಿಎಲ್​ನಲ್ಲಿ ಗಂಭೀರ್​ ಕೆಕೆಆರ್​ ತಂಡದ ನಾಯಕನಾಗಿದ್ದಾಗ ವಿರಾಟ್​ ಕೊಹ್ಲಿ ಜತೆ ಮೈದಾನದಲ್ಲಿ ಜಗಳವಾಡಿದ್ದರು. ಕೊಹ್ಲಿ ಔಟಾದಾಗ ಗಂಭೀರ್​ ಅತಿರೇಕದ ಸಂಭ್ರಮ ಆಚರಿಸಿದ್ದರು. ಇದರಿಂದ ಕೆರಳಿದ ಕೊಹ್ಲಿ ಸಿಟ್ಟಿನಲ್ಲಿ ಗಂಭೀರ್​ಗೆ ಏನೋ ಹೇಳಿದ್ದರು. ಬಳಿಕ ವಾಗ್ವಾದ ನಡೆದು ಸಹ ಆಟಗಾರರು ಮತ್ತು ಅಂಪೈರ್​ ಮಧ್ಯಪ್ರವೇಶಿಸಿ ಇಬ್ಬರ ಜಗಳವನ್ನು ತಿಳಿಗೊಳಿದ್ದರು. ಇಲ್ಲಿಂದ ಆರಂಭಗೊಂಡ ಇಬರಿಬ್ಬರ ಮುನಿಸು ಈಗಾಗಲೂ ಮುಂದುವರಿದಿದೆ. ಇದೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿಯೂ ಕೊಹ್ಲಿ ಮತ್ತು ಗಂಭೀರ್​ ಕಿತ್ತಾಟ ನಡೆಸಿದ್ದರು. ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು ಉಭಯ ಆಟಗಾರರ ಜಗಳ.