This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Entertainment News

ಕಾಂಚಾಣಕ್ಕಾಗಿ ಕಂಡವರ ಕನಸನ್ನು ಕಿತ್ತಿಕೊಳ್ಳುವುದು ಕಾಮನ್…

ಕಾಂಚಾಣಕ್ಕಾಗಿ ಕಂಡವರ ಕನಸನ್ನು ಕಿತ್ತಿಕೊಳ್ಳುವುದು ಕಾಮನ್…

ದೊಡ್ಡ ವ್ಯಕ್ತಿಗಳೆಲ್ಲಾ ದುಡ್ಡಿನ ಮುಂದೆ ದಡ್ಡರಾಗಿದ್ದಾರೆ ಗೌರವಕ್ಕಾಗಿ,ಸಾಧನೆಗಾಗಿ ಸಮಾಜಕ್ಕಾಗಿ ದುಡಿಯುವವರ ಸಂಖ್ಯೆ ಇಂದು ಶೂನ್ಯವಾಗುತ್ತ ಇದೆ. ಮಕ್ಕಳಿಂದಿಡಿದು ಯುವಕರು, ಹಿರಿಯರಿಗೂ ಅರ್ಥವಾಗಿದೆ ಹಣವೊಂದಿದ್ದರೆ ಎಲ್ಲವನ್ನು ಕೊಂಡುಕೊಳ್ಳಬಹುದು ಎಂದು.

ಕಾಂಚಾಣಕ್ಕಾಗಿ ಕಂಡವರ ಕಸಬನ್ನು,ಕನಸನ್ನು ಕಿತ್ತಿಕೊಳ್ಳುವುದು ಕಾಮನ್ ಆಗಿ ಬಿಟ್ಟಿದೆ. ಹೀಗಿರುವಾಗ ಸಾಮಾನ್ಯರ ಬದುಕು ಸಾವಿನೊಂದಿಗೆ ಸೆಣಸಾಟವಾಗಿರುತ್ತದೆ. ಲಕ್ಷಕೊಟ್ಟು ಪದವಿ ಗಿಟ್ಟಸಿಕೊಳ್ಳುತ್ತೇವೆ, ಪದವಿ ನಂತರ ೧೫ಸಾವಿರ ಸಂಬಳದ ಕಾಯಕಕ್ಕೆ ಅಲೆದಾಟ ನೆಡೆಸುತ್ತೇವೆ.

ಪ್ರಸ್ತುತ ದಿನದಲ್ಲಿ ಸರ್ಕಾರಿ,ಖಾಸಗಿ ಉದ್ಯೋಗಕ್ಕೂ ರೆಪ್ರೆನ್ಸ್ ಇಲ್ಲದೆ ಯಾರು ಕೆಲಸ ನೀಡುವುದಿಲ್ಲ, ನೀಡಿದರು ನೆಮ್ಮದಿ ಇರುವುದಿಲ್ಲ. ಏನು ಅರಿಯದೇ ಇರುವವರಿಗೆ ಅಧಿಕಾರವಿತ್ತರೆ, ಎಲ್ಲ ಬಲ್ಲವರ ತಲೆಯ ಮೇಲೆ ಕಲ್ಲು ಎಸೆಯುತ್ತಾ ಇದ್ದಾರೆ.

ವಿದ್ಯಾವಂತರೇ ಭಯದಲ್ಲಿ ನೆಲೆಸಿದ್ದಾರೆ ಮುಂದಿನ ಭವಿಷ್ಯ ನೆನಸಿಕೊಂಡು, ಇನ್ನು ಅನಕ್ಷರಸ್ಥರ ಜೀವನ ಬಡತನದಲ್ಲಿಯೇ ಬಣ್ಣ ಹಚ್ಚಿಕೊಂಡು ಬದುಕುವುದಾಗಿದೆ.

ಕೆಲವೊಂದಿಷ್ಟು ಜನ ಸಮಾಜ ಸೇವೆಯ ಹೆಸರಿನಲ್ಲಿ ಜನರ ಉಸಿರು ನಿಲ್ಲಿಸಲು ಮುಂದಾಗಿದ್ದಾರೆ. ನೋಡುವುದಕ್ಕೆ ಮತ್ತು ಅವರ ನಡವಳಿಕೆಯಲ್ಲಿಯೂ ಅವರು ಕೆಟ್ಟವರು ಎಂದು ಕಂಡು ಹಿಡಿಯುವುದಕ್ಕೆ ಸ್ವಲ್ಪವೂ ಸುಳಿವು ಸಿಗುವುದಿಲ್ಲ. ಇತ್ತೀಚಿಗೆ ಅಕ್ಷರ ದ್ರೋಹಿಗಳು ಸಹ ಬೇಕಾದಷ್ಟು ಇದ್ದು, ಅವರು ಮಾನವೀಯತೆಯನ್ನು ಮೀರಿ ಬದಕುತ್ತಾ ಇದ್ದಾರೆ.

ಯಾರು ಸತ್ತರೇ ನನಗೇನು ನನ್ನ ಹೊಟ್ಟೆ ತುಂಬಿದರೆ ಸಾಕು ಎನ್ನುವ ಜನ, ಕೆಲಸ ನೀಡುತ್ತೇನೆ ದುಡ್ಡು ಕೊಡಿ, ಶಿಕ್ಷಣ ನೀಡುತ್ತೇವೆ ದುಡ್ಡು ಕೊಡಿ, ನಿನ್ನ ನಾಯಕನ್ನಾಗಿ ಮಾಡುತ್ತೇನೆ ಹಣ ಕೊಡಿ, ನಿನ್ನ ಆರೋಗ್ಯ ಚೆನ್ನಾಗಿ ಕಾಪಾಡುತ್ತವೇ ರೊಕ್ಕ ನೀಡಿ, ಕಾಯಕವೇ ಕೈಲಾಸ ಎನ್ನುವ ಕಾಲ ಮರೆಯಾಗಿ ಕಾಸೇ ಕೈಲಾಸ ಎನ್ನುವ ಕಾಲ ಒದಗಿ ಬಂದಿದೆ.

ಇAತಹ ಒಂದು ಕ್ರೂರ, ಭಾವನಾತ್ಮಕವಿಲ್ಲದ ವ್ಯಕ್ತಿಗಳ ಪರಿಚಯ ಪ್ರತಿಯೊಬ್ಬರಿಗೂ ಸರ್ವೆ ಸಾಮಾನ್ಯ, ಅದಕ್ಕಾಗಿ ನಿಮ್ಮನ್ನು ನೀವು ತಯಾರಿ ಮಾಡಿಕೊಳ್ಳಿ ಸಹಜವಾಗಿ ಬದಕಲು.

ದುಡ್ಡಿಗಾಗಿ ದೊಡ್ಡವರು,ಓದಿಕೊಂಡವರು ಬಲೆಯಾಗಿದ್ದಾರೆ, ಎಷ್ಟೇ ಉನ್ನತ ಮಟ್ಟದಲ್ಲಿರುವ ವ್ಯಕ್ತಿಗಳು ನಿಮಗೆ ಪರಿಚಯವಿದ್ದರೆ, ಇಲ್ಲವೇ ನಿಮ್ಮ ಮೇಲೆ ಕಾಳಜಿ ಇದ್ದರೆ ಅದೆಲ್ಲ ಅವರ ಸ್ವಾರ್ಥಕ್ಕಾಗಿ ಅಷ್ಟೇ, ನಿಮಗೆ ಕಷ್ಟದ ಸನ್ನಿವೇಶಗಳು ಬಂದಾಗ ಯಾರೂ ಬರುವುದಿಲ್ಲ ಅವುಗಳನ್ನೆಲ್ಲವು ನಿವು ಒಬ್ಬರೇ ಹೊಡೆದೋಡಿಸಬೇಕು.

ಇನ್ನೊಬ್ಬರನ್ನು ಬಣ್ಣಿಸಿ ಸಂತಸ ಪಡುವುದಕ್ಕಿಂತ ನೀವೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ, ಹಣದ ದಾಸರಾಗಬೇಡಿ, ಗುಣದ ಗುಲಾಮರಾಗಲು ಮುನ್ನುಗ್ಗಿ, ಹಣದ ಬಲೆಯಲ್ಲಿ ಇರುವವರು ಒಂದು ದಿನ ಎಲ್ಲವನ್ನು ಕಳೆದುಕೊಂಡು ಸೆರೆ ಮನೆಯಲ್ಲಿ ಕಂಬಿಯನ್ನು ಎನಿಸುತ್ತ ಇರುತ್ತಾರೆ, ಗುಣಕ್ಕೆ ಶರಣಾದವರು ಮುಂದೊAದು ದಿನ ಇತಿಹಾಸ ಪುಟದಲ್ಲಿ ಮೆರೆಯುತ್ತಾರೆ. ಯೋಚಿಸಿ ಜೀವನದ ನಿರ್ಧಾರ ತೆಗೆದುಕೊಳ್ಳಿ…

ಶಶಿ.ಎನ್.ಟಿ

Nimma Suddi
";