This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local NewsPolitics NewsState News

ಹಿಂದೂಗಳು ಜಾತ್ಯಾತೀತರಲ್ಲ ಎಂದು ಹೇಳಿದರೆ ಮೂರ್ಖತನ

ಹಿಂದೂಗಳು ಜಾತ್ಯಾತೀತರಲ್ಲ ಎಂದು ಹೇಳಿದರೆ ಮೂರ್ಖತನ

ಹಾಸನ
ಹಿಂದೂಗಳು ಜಾತ್ಯಾತೀತರಲ್ಲ ಎಂದು ಯಾರಾದರೂ ಹೇಳಿದರೆ ಅದು ಮೂರ್ಖತನ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾತ್ಯಾತೀತರಾಗಿರುವಂತಹವರು ಹಿಂದೂಗಳೇ ಹಿಂದೂ ಒಬ್ಬರೇ ಎಲ್ಲರಿಗೂ ಅವಕಾಶ ಕಲ್ಪಿಸುವರು ಇದನ್ನ ಸ್ವಾಮೀ ವಿವೇಕಾನಂದರು ಸರ್ವ ‘ರ್ಮ ಸಮ್ಮೇಳನದ ಮೊದಲ ‘ಷಣದಲ್ಲೇ ಹೇಳ್ತಾರೆ ಎಂದು ತಿಳಿಸಿದರು.

ಹಿಂದೂ ಯಾವತ್ತೂ ಸಹಿಷ್ಣು ಆಗಲಾರ, ಅವನು ಸಹಿಸಿಕೊಳ್ಳುವವನಲ್ಲ, ಎಲ್ಲರನ್ನೂ ಒಪ್ಪಿಕೊಳ್ಳುವವನು ಹೀಗಾಗಿ ಜಾತ್ಯಾತೀತ ಹಾಗೂ ಹಿಂದೂತ್ವ ಬೇರೆ ಬೇರೆ ಅಂತ ಅಲ್ಲಾ ಎಂದು ಹೇಳಿದರು.

ಸುಪ್ರೀಂಕೋರ್ಟ್ ಹೇಳುವ ಮುನ್ನವೇ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವಂತಹ ಪ್ರಯತ್ನ ಮಾಡಿದ್ದು ಅಕ್ಷಮ್ಯ ಅಪರಾದ. ಎಲ್ಲಾ ಪಕ್ಷಗಳನ್ನು ಮೊದಲೇ ವಿಶ್ವಾಸಕ್ಕೆ ತೆಗೆದುಕೊಂಡು ನೀರು ಬಿಡಬೇಕೋ, ಬೇಡವೋ ಎಂದು ಯೋಚನೆ ಮಾಡಬೇಕಿತ್ತು

ಐಎನ್‌ಡಿಐಎ ಮೈತ್ರಿಯ ದಾವಂತಕ್ಕೆ ಬಿದ್ದು ಕನ್ನಡಿಗರಿಗೆ ದ್ರೋಹ ಮಾಡಿದ್ದು, ಅವರನ್ನು ಕ್ಷಮಿಸಲಾರರು ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿ  ಎರಡು ಪಕ್ಷಗಳದ್ದು ಒಂದು ಲೆಕ್ಕಾಚಾರ ಇರಬಹುದು ಜೆಡಿಎಸ್‌ಗೆ ಪರ್ಸೆಂಟೇಜ್ ಲೆಕ್ಕವಾಗಿ ಅತ್ಯಂತ ಕಡಿಮೆ ಮತಗಳು ಬಂದಿವೆ

ಜೆಡಿಎಸ್‌ನ ಹಾಗೂ ಬಿಜೆಪಿಯ ಮತಗಳ ಕೂಡಿಕೊಂಡರೆ ಅರ್ದಷ್ಟು ಮತಗಳಾಗುತ್ತವೆ ಸಹಜವಾಗಿ ಕರ್ನಾಟಕದ ಅಷ್ಟು ಸೀಟುಗಳನ್ನು ಗೆಲ್ಲಬಹುದು ಎಂಬುದು ಅವರ ಲೆಕ್ಕಾಚಾರ ಆಗಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಚುನಾವಣೆ ಲೆಕ್ಕಾಚಾರ ಹೇಗಾದರೂ ಇರುತ್ತೆ ಆದರೆ ನಮಗೆ ಇರುವುದು ನರೇಂದ್ರಮೋದಿಯವರು ಕಳೆದ ಒಂ‘ತ್ತು ವರ್ಷಗಳಲ್ಲಿ ಮಾಡಿರುವ ಕೆಲಸವನ್ನು ಜನರಿಗೆ ಮುಟ್ಟಿಸಬೇಕು ಮೇಲೆ ಕುಳಿತಿರುವವರು ನಿರ್ಣಯ ತೆಗೆದುಕೊಳ್ತಾರೆ, ಅವರಿಗೆ ಗೊತ್ತಿರುತ್ತೆ
ನಾನು ಅದರ ಬಗ್ಗೆ ಕಮೆಂಟ್ ಮಾಡುವುದು ಸೂಕ್ತವಲ್ಲ ಅನ್ಸುತ್ತೆ ಎಂದು ಪ್ರತಿಕ್ರಿಯಿಸಿದರು.

ಹೇಗಾದರೂ ಮಾಡಿ ಹಿಂದುತ್ವವಾದಿಗಳು ಇತರೆ ಜನ ಬೇರೆ ಎನ್ನುವ ಪ್ರಯತ್ನ ಎನಿಸುತ್ತದೆ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೂ ಈ ತರಹದ್ದು ಒಂದೆರಡು ಪ್ರಕರಣ ಅಲ್ಲಾ ಅವರು ಸಾಕಷ್ಟು ಎಫ್‌ಐಆರ್ ಹಾಕುತ್ತಾರೆ.

Nimma Suddi
";