This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Entertainment News

ಜಸ್​ಪ್ರೀತ್ ಬುಮ್ರಾ ಮತ್ತೊಂದು ದಾಖಲೆ: ಶ್ರೀನಾಥ್ ದಾಖಲೆ ಮುರಿಯುವಲ್ಲಿ ಮುಂದಾದ್ರು ಬೂಮ್ ಬೂಮ್ ಬುಮ್ರಾ

ಜಸ್​ಪ್ರೀತ್ ಬುಮ್ರಾ ಮತ್ತೊಂದು ದಾಖಲೆ: ಶ್ರೀನಾಥ್ ದಾಖಲೆ ಮುರಿಯುವಲ್ಲಿ ಮುಂದಾದ್ರು ಬೂಮ್ ಬೂಮ್ ಬುಮ್ರಾ

ಭಾರತ ಮತ್ತು ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ ಪಂದ್ಯವು ಗುರುವಾರದಿಂದ ಶುರುವಾಗಲಿದ್ದು, ರಾಜ್​ಕೋಟ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಜಸ್​ಪ್ರೀತ್ ಬುಮ್ರಾ ಏಕೆಂದರೆ ಬಾಝ್​ಬಾಲ್ ರಣತಂತ್ರಕ್ಕೆ ಇದೀಗ ಬೂಮ್​ಬಾಲ್ ಪ್ರತಿತಂತ್ರ ಸಿದ್ಧವಾಗಿದೆ.

ಈ ಪ್ರತಿತಂತ್ರದ ಫಲವೇ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮುಗ್ಗರಿಸಿರುವುದು. ಈ ಪಂದ್ಯದ ಗೆಲುವಿನ ರೂವಾರಿ ಜಸ್​ಪ್ರೀತ್ ಬುಮ್ರಾ. ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್ ಕಬಳಿಸಿದ್ದ ಬುಮ್ರಾ 2ನೇ ಇನಿಂಗ್ಸ್​ನಲ್ಲಿ 3 ವಿಕೆಟ್ ಉರುಳಿಸಿದ್ದರು.

ಇತ್ತ ಜಸ್​ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 12 ಬಾರಿ ಐದು ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಇನಿಂಗ್ಸ್​ನಲ್ಲಿ ಬುಮ್ರಾ 5 ವಿಕೆಟ್ ಪಡೆದರೆ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಸರಿಗಟ್ಟಬಹುದು.

ಕೂಡ ಮೈಸೂರ್ ಎಕ್ಸ್​ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಮುರಿಯುವ ಸನಿಹದಲ್ಲಿ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ವೇಗದ ಬೌಲರ್​ಗಳ ಪಟ್ಟಿಯಲ್ಲಿ ಜಾವಗಲ್ ಶ್ರೀನಾಥ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಒಟ್ಟು 13 ಬಾರಿ ಐದು ವಿಕೆಟ್ ಕಬಳಿಸಿ ಕನ್ನಡಿಗ ಈ ವಿಶೇಷ ದಾಖಲೆ ಬರೆದಿಟ್ಟಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

";