This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ

ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ

ಬಾಗಲಕೋಟೆ

ನ್ನಡ ನಾಡಿನಲ್ಲಿ ಮಾತೃಭಾಷೆ ಕನ್ನಡಕ್ಕೆ ಪ್ರಥಮ ಆದ್ಯತೆ ಎಂಬ ನೀತಿಯನ್ನು ನಮ್ಮ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಇದಕ್ಕೆ ಪೂರಕವಾಗಿ ಎಲ್ಲಾ ಹಂತಗಳಲ್ಲೂ ಕನ್ನಡದ ಅನುಷ್ಠಾನಕ್ಕೆ ಮುಂದಾಗಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯ ಜನರು ಈ ನೆಲದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಎಂದೆAದಿಗೂ ಆರಾಧಿಸುವರು. ಇಂತಹ ಸಹೃದಯಿ ಬಂಧುಗಳ ಅಪೇಕ್ಷೆಯಂತೆ ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಸರ್ಕಾರ ವಿಶೇಷ ಗಮನಹರಿಸಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಇಲ್ಲಿನ ಸಂಸ್ಕೃತಿಗೆ ಧಕ್ಕೆಯಾಗದಂತೆ ಕನ್ನಡ ಭಾಷೆಯನ್ನು ಸಧೃಡವಾಗಿ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ಇಂದಿಗೆ 50 ವರ್ಷ ಪೂರ್ಣಗೊಂಡ ಈ ಶುಭ ಸಂದರ್ಭದಲ್ಲಿ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಮಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲು ಸರಕಾರ ನಿರ್ಧರಿಸಿರುತ್ತದೆ ಎಂದು ಹೇಳಿದರು.


ನುಡಿದಂತೆ ನಡೆಯುವುದು ನಮ್ಮ ಸರಕಾರದ ಧ್ಯೇಯವಾಕ್ಯವಾಗಿದೆ. ಜನರು ಸಣ್ಣ ಪುಟ್ಟ ಕೆಲಸಗಳಿಗೂ ಸರ್ಕಾರಿ ಕಚೇರಿಗಳಿಗೆ, ಶಾಸಕರ, ಜಿಲ್ಲಾ ಮಂತ್ರಿಗಳ, ಮುಖ್ಯಮಂತ್ರಿಗಳ ಬಳಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಡಿ ರಾಜ್ಯಾದ್ಯಂತ ಏಕ ಕಾಲದಲ್ಲಿ ಸೆಪ್ಟೆಂಬರ 25 ರಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಪ್ರತಿ 15 ದಿನಗಳಿಗೊಮ್ಮೆ ತಾಲೂಕಾ ಹಂತದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ, ಬಾಗಲಕೋಟೆ ಮತ್ತು ಜಮಖಂಡಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಇ-ಕಚೇರಿ ತಂತ್ರಾAಶ ಅನುಷ್ಟಾನಗೊಳಿಸಲಾಗಿದೆ. ನವೆಂಬರ 2 ರಿಂದ ಜಿಲ್ಲೆಯ ಎಲ್ಲ 9 ತಾಲೂಕಾ ತಹಶೀಲ್ದಾರ ಕಚೇರಿಗಳಲ್ಲಿಯೂ ಸಹ ಇ-ಕಚೇರಿ ತಂತ್ರಾAಶ ಅನುಷ್ಠಾನಗೊಳಿಸಾಗುತ್ತಿದೆ. ಇದರಿಂದ ಶೀಘ್ರ ಪಾರದರ್ಶಕ, ಪರಿಸರಸ್ನೇಹಿ ವಾತಾವರಣ ನಿರ್ಮಾಣವಾಗಲು ಸಹಾಯವಾಗುತ್ತದೆ. 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 27294 ಎಕರೆ ಭೂಸ್ವಾಧೀನಪಡಿಸಿಕೊಂಡು ಪ್ರಗತಿ ಸಾಧಿಸಲಾಗಿದೆ. ಬಾಕಿ 11.06 ಲಕ್ಷ ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಈ ಪೈಕಿ 43,734 ಎಕರೆ ಕ್ಷೇತ್ರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದ್ದು, ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ ಎಂದು ಹೇಳಿದರು


ಕಾರ್ಯಕ್ರಮದಲ್ಲಿ ಬಾಗಲಕೋಟೆ ಬಸವೇಶ್ವರ ಕಲಾ ಮಾಹವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟçಗೀತೆ, ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಗೂ ಪ್ರತಿಭಾನ್ವಿತ ಎಸ್ ಸಿ/ಎಸ್ ಟಿ ಬಾಲಕಿಯರ ಪೌಢ ಶಾಲೆಯ ವಿದ್ಯಾರ್ಥಿನಿಯರು ರೈತಗೀತೆ ಪ್ರಸ್ತುತ ಪಡಿಸಿದರು.

ವಿವಿಧ ತಂಡಗಳಿAದ ಪಥಸಂಚಲನ, ವಿವಿಧ ಇಲಾಖೆಗಳ ಸ್ಥಬ್ದ ಚಿತ್ರಗಳ ಪ್ರದರ್ಶನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ, ಸಾಂಸ್ಕೃತಿಕ ಸಮೂಹ ನೃತ್ಯಗಳು ನಡೆದವು.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಹೆಚ್.ವಾಯ್ ಮೇಟಿ, ಎಮ್ ಎಲ್ ಸಿ ಪಿ.ಹೆಚ್ ಪೂಜಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಮ್. ಸಿ ಇ ಒ ಶಶಿಧರ ಕುರೇರ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸೇರಿ ಅನೇಕ ಹಿರಿಯ ಅಧಿಕಾರಿಗಳು ಮತ್ತು ಗಣ್ಯಮಾನ್ಯರು ಇದ್ದರು.

35 ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 35 ಸಾಧಕರಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು.
ಬಸವರಾಜ ಕೋತಿನ-ಶಿಕ್ಷಣ 2) ವಿಜಯಕುಮಾರ ಕೆ.-ವಿಜ್ಞಾನ 3) ಕ್ಯಾಪ್ಟನ್ ಅರ್ಜುನ ಕೋರಿ-ಭಾರತೀಯ ಸೇನೆ 4) ಇಮಾಮ್ಸಾಬ್ ಬಳಬಟ್ಟಿ-ಅಲೆಮಾರಿ ಸಮಾಜ ಅಭಿವೃದ್ಧಿ, 5) ಡಾ. ಉಮಾಕಾಂತ ಬೋಕೆ _ ವೈದ್ಯಕೀಯ, 6) ರೇಣುಕಾ ನ್ಯಾಮಗೌಡರ- ಸಮಾಜಸೇವೆ 7)ಉಮೇಶ ಶಿವಲಿಂಗಪ್ಪ ಶಿರೂರ-ಸಮಾಜ ಸೇವೆ, 8) ಬಸವರಾಜ ಕೊಣ್ಣೂರು- (ರಕ್ತದಾನ) ಸಮಾಜ ಸೇವೆ, 9) ಮಲ್ಲಪ್ಪ ಘಟ್ನೂರು – ಸಮಾಜ ಸೇವೆ, 10) ಶರಣಪ್ಪ ಭಜಂತ್ರಿ- ಶಹನಾಯಿ ಹಾಗೂ ಕರಡಿಮಜಲು, 11) ವೀರಭದ್ರಯ್ಯ ಗುಡದೂರಕಲ್ಮಠ – ಸಂಗೀತ, 12) ತಿಮ್ಮನಗೌಡ ಪಾಟೀಲ-ಜಾನಪದ, 13) ಪ್ರಕಾಶ ಪತ್ತಾರ- ಸಂಗೀತ, 14) ಮುತ್ತಪ್ಪ ಕಠಾಣೆ- ಸಾಹಿತ್ಯ, 15) ರಾಜೇಸಾಬ ತಟಗಾರ- ರಂಗಭೂಮಿ 16) ಶಂಕರಯ್ಯ ಹಿರೇಮಠ- ನಾಟಕ, 17) ಬಸಪ್ಪ ತೋಟದ – ಕರಡಿಮಜಲು 18) ಕುಮಾರಿ ಸೌಜನ್ಯ ಮೋಹರೆ – ಭರತನಾಟ್ಯ 19) ಶಂಕ್ರಪ್ಪ ಪ್ರಭಾಕರ – ಜಾನಪದ, 20) ಸೋನಾಬಾಯಿ ಭೋಜಪ್ಪಗೋಳ-ಚೌಡಕಿಪದ, 21) ಪುಟ್ಟರಾಜ ಭಜಂತ್ರಿ-ಶಹನಾಯಿ, 22) ವಿಜಯಲಕ್ಷಿö್ಮ ಕಟ್ಟಿ- ರಂಗಬೂಮಿ, 23) ವಿನೋದ ಯಡಹಳ್ಳಿ- ರಂಗಭೂಮಿ, 24) ಶಿವಪ್ರಕಾಶಸ್ವಾಮಿ ಸರಗಣಾಚಾರಮಠ-ಚಿತ್ರಕಲೆ, 25) ಗಂಗಪ್ಪ ಕರಡಿ- ಕರಡಿಮಜಲು, 26) ಚಿದಾನಂದ ಕಾಟವಾ-ಸಂಗೀತ, 27)ಅಶೋಕ ಭಜಂತ್ರಿ- ಸ್ಥಬ್ದಚಿತ್ರ, 28) ಬಸಯ್ಯ ಕಡಕೋಳಮಠ-ಪರಿಸರ, 29) ಆನಂದ ಚಿಚಖಂಡಿ-ಕೃಷಿ, 30) ಸೋಮಲಿಂಗಪ್ಪ ಮಧುರಖಂಡಿ-ಕೃಷಿ, 31) ನಾಗರಾಜ ಕಲಗೋಡಿ ಕ್ರೀಡೆ, 32) ಅಶೋಕ ಹಡಪದ- ಪತ್ರಿಕೋದ್ಯಮ, 33) ವಿಠ್ಠಲ ಮೂಲಿಮನಿ- ಪತ್ರಿಕೋದ್ಯಮ, 34) ಶ್ರೀಮತಿ ಪರಿಮಳಾ ಮನಗೂಳಿ – ಪತ್ರಿಕೋದ್ಯಮ, 35) ಸುಲೇಮಾನ ಚೋಪದಾರ -ಪತ್ರಿಕೋದ್ಯಮ

";