This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local NewsNational NewsSports NewsState News

ಕನ್ನಡಿಗ ಕೆ.ಎಲ್​ ರಾಹುಲ್​ಗೆ ಒಲಿದ ಉಪನಾಯಕ ಸ್ಥಾನ

ಕನ್ನಡಿಗ ಕೆ.ಎಲ್​ ರಾಹುಲ್​ಗೆ ಒಲಿದ ಉಪನಾಯಕ ಸ್ಥಾನ

ಬೆಂಗಳೂರು: ಟೀಮ್​ ಇಂಡಿಯಾದ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರು ಗಾಯಕ್ಕೆ ತುತ್ತಾಗಿ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಹಿನ್ನೆಲೆ ಅವರ ಈ ಜವಾಬ್ದಾರಿಯನ್ನು ಕನ್ನಡಿಗ ಕೆ.ಎಲ್​ ರಾಹುಲ್​ಗೆ(KL Rahul) ನೀಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.

“ಬಿಸಿಸಿಐ ಕೆ.ಎಲ್ ರಾಹುಲ್ ಅವರನ್ನು ವಿಶ್ವಕಪ್‌ನ ಉಳಿದ ಪಂದ್ಯಗಳಿಗೆ ಭಾರತ ತಂಡದ ಉಪನಾಯಕನನ್ನಾಗಿ ನೇಮಿಸಿದೆ. ತಂಡದೊಂದಿಗೆ ಪ್ರಯಾಣಿಸುತ್ತಿರುವ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಶನಿವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

 

ಉಪನಾಯಕನ ಸ್ಥಾನ ಕಳೆದುಕೊಂಡಿದ್ದ ರಾಹುಲ್​
ರಾಹುಲ್​ ಅವರು ಈ ಹಿಂದೆ ಮೂರು ಮಾದರಿ ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾದ ಉಪನಾಯಕಾಗಿದ್ದರು. ಆದರೆ ಇದೇ ವರ್ಷಾರಂಭದಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ರಾಹುಲ್​ ಅವರು ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಎಲ್ಲ ಕಡೆಯಿಂದ ಭಾರಿ ಟೀಕೆ ಎದುರಿಸಿದ್ದರು. ಕಳಪೆ ಪ್ರದರ್ಶನ ನೀಡಿದ ಕಾರಣ ಅವರನ್ನು ಉಪನಾಯಕನ ಪಟ್ಟವನ್ನು ಮತ್ತು ತಂಡದಿಂದಲೇ ಕೈ ಬಿಡಲಾಗಿತ್ತು. ಬಳಿಕ ಐಪಿಎಲ್​ ವೇಳೆ ಗಾಯಗೊಂಡು ಅವರು ಕ್ರಿಕೆಟ್​ನಿಂದ ಕೆಲ ತಿಂಗಳುಗಳ ಕಾಲ ವಿಶ್ರಾಂತಿ ಪಡೆದಿದ್ದರು.

ಆಸೀಸ್​ ವಿರುದ್ಧ ಸರಣಿ ಗೆಲುವು
ವಿಶ್ವಕಪ್​ ಆರಂಭಕ್ಕೆ ಇನ್ನೇನು 2 ವಾರ ಇರುವಾಗ ಆಸ್ಟ್ರೇಲಿಯಾ ವಿರುದ್ಧ ನಡೆಸಿದ್ದ ಏಕದಿನ ಸರಣಿಯಲ್ಲಿ ಅನುಭವಿ ಆಟಗಾರರ ಅಲಭ್ಯತೆಯಲ್ಲಿಯೂ ರಾಹುಲ್​ ಅವರು ತಂಡದ ನಾಯಕತ್ವ ವಹಿಸಿ ಆಸೀಸ್​ ವಿರುದ್ಧ ಸರಣಿ ಗೆದ್ದ ಸಾಧನೆ ಮಾಡಿದ್ದರು. ಇದು ಇವರ ನಾಯಕತ್ವದ ಸಾಮರ್ಥ್ಯವನ್ನು ಮತ್ತು ಟೀಕೆ ಮಾಡಿದವರು ಬಾಯಿ ಮುಚ್ಚುವಂತೆ ಮಾಡಿತ್ತು. ಆದರೆ ಈ ಹಿಂದೆಯೇ ಪಾಮಡ್ಯಗೆ ಉಪನಾಯಕನ ಸ್ಥಾನ ನೀಡಿದ ಕಾರಣ ಅವರನ್ನೇ ವಿಶ್ವಕಪ್​ನಲ್ಲಿಯೂ ಮುಂದುವರಿಸಲಾಯಿತು. ಇದೀಗ ಮತ್ತೆ ರಾಹುಲ್​ಗೆ ಉಪನಾಯಕನ ಪಟ್ಟ ಒದಗಿ ಬಂದಿದೆ.

 

ಪ್ರಚಂಡ ಫಾರ್ಮ್​
ತೊಡೆಯ ಶಸ್ತ್ರಚಿಕಿತ್ಸೆ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದ ಕೆ.ಎಲ್​ ರಾಹುಲ್​ ವಿಶ್ವಕಪ್​ ಕಪ್​ನಲ್ಲಿ ಪ್ರತಿ ಪಂದ್ಯದಲ್ಲೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಜತೆಗೆ ಅತ್ಯತ್ತಮ ಕೀಪಿಂಗ್​ ಪ್ರದರ್ಶನದ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ 2 ಬಾರಿ ಉತ್ತಮ ಫೀಲ್ಡರ್​ ಎಂಬ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ. ರಾಹುಲ್​ ಅವರು ಇದೇ ಫಾರ್ಮ್​ ಮುಂದುವರಿಸಿದರೆ ರೋಹಿತ್​ ಶರ್ಮ ಬಳಿಕ ನಾಯಕತ್ವ ಸಿಗುವ ಎಲ್ಲ ಲಕ್ಷಣವಿದೆ.

ಮತ್ತೊಬ್ಬ ಕನ್ನಡಿಗ
ಹಾರ್ದಿಕ್‌ ಪಾಂಡ್ಯ (Hardik Pandya) ಈಗ ವಿಶ್ವಕಪ್‌ನಿಂದಲೇ ಹೊರಬಿದ್ದ ಕಾರಣ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಪ್ರಸಿದ್ಧ್​ ಕೃಷ್ಣ(prasidh krishna) ತಂಡ ಸೇರಿದ್ದಾರೆ. ಕನ್ನಡಿಗ, ವೇಗಿ ಪ್ರಸಿದ್ಧ್‌ ಅವರು ತಂಡ ಸೇರಿದ್ದು ಮತ್ತಷ್ಟು ಬಲ ಬಂದಂತಾಗಿದೆ. ಭಾರತದ ಪರ 17 ಏಕದಿನ ಹಾಗೂ 2 ಟಿ-20 ಪಂದ್ಯಗಳನ್ನು ಆಡಿರುವ ಪ್ರಸಿದ್ಧ್‌ ಕೃಷ್ಣ, ಒಟ್ಟು 33 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಕೆ.ಎಲ್‌.ರಾಹುಲ್‌ ಜತೆಗೆ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದ ಮತ್ತೊಬ್ಬ ಕನ್ನಡಿಗ ಎಂಬ ಖ್ಯಾತಿಗೆ ಪ್ರಸಿದ್ಧ್‌ ಕೃಷ್ಣ ಪಾತ್ರರಾಗಿದ್ದಾರೆ.

Nimma Suddi
";