This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Agriculture NewsBusiness NewsLocal NewsPolitics NewsState News

ಕರ್ನಾಟಕ ಪರಿಸರ ನಿರ್ವಹಣೆ ಸಂಸ್ಥೆಯಲ್ಲಿ ನೇಮಕಾತಿ: ವಿವಿಧ ಹುದ್ದೆಗೆ ಆನ್‌ಲೈನ್‌ ಅರ್ಜಿ ಆಹ್ವಾನ

ಕರ್ನಾಟಕ ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಅಂಡ್ ಪಾಲಿಸಿ ರಿಸರ್ಚ್‌ ಇನ್‌ಸ್ಟಿಟ್ಯೂಟ್ (ಎಂಪ್ರಿ) ವಿವಿಧ ಪದನಾಮಗಳ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಸೆಪ್ಟೆಂಬರ್ 20 ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆಗಳ ವಿವರ ಕೆಳಗಿನಂತಿದೆ.
ಹುದ್ದೆ ಹೆಸರು ವಿದ್ಯಾರ್ಹತೆ ವೇತನ ಶ್ರೇಣಿ
ಎಂಪ್ರಿ ಫೆಲೋ-ಪರಿಸರ ಪರಿಸರ, ವಿಜ್ಞಾನ ವಿಷಯಗಳಲ್ಲಿ ಪಿಹೆಚ್‌ಡಿ Rs.1,00,000.
ಕನ್ಸಲ್‌ಟಂಟ್ ದೈಹಿಕ, ಜೀವಶಾಸ್ತ್ರ, ಪರಿಸರ ವಿಜ್ಞಾನ ವಿಷಯಗಳಲ್ಲಿ ಪಿಜಿ Rs.1,00,000.
ರಿಸರ್ಚ್‌ ಸೈಂಟಿಸ್ಟ್‌ ಪರಿಸರ, ಭೂಗೋಳಶಾಸ್ತ್ರ, ಮೈನಿಂಗ್, ಫಾರೆಸ್ಟ್ರಿ ವಿಷಯಗಳಲ್ಲಿ ಪಿಹೆಚ್‌.ಡಿ Rs.67,000.
ರಿಸರ್ಚ್‌ ಅಸೋಸಿಯೇಟ್‌ ಎಂ.ಟೆಕ್‌ ಇನ್‌ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ Rs.30,000.
ಪ್ರಾಜೆಕ್ಟ್‌ ಅಸೋಸಿಯೇಟ್‌-II ಎಂಎಸ್ಸಿ ಇನ್ ಲೈಫ್‌ ಸೈನ್ಸ್‌ ಡಿಎಸ್‌ಟಿ ನಿಯಮಗಳ ಪ್ರಕಾರ.
ಟ್ರೈನಿಂಗ್ ಅಸೋಸಿಯೇಟ್‌ ಪರಿಸರ ವಿಜ್ಞಾನ, ಇತರೆ ವಿಷಯಗಳಲ್ಲಿ ಎಂಎಸ್ಸಿ Rs.35,000.
ಫೀಲ್ಡ್‌ ಅಸಿಸ್ಟಂಟ್ ಎಂಎಸ್ಸಿ ಇನ್ ಲೈಫ್‌ ಸೈನ್ಸ್‌ ಡಿಎಸ್‌ಟಿ ನಿಯಮಗಳ ಪ್ರಕಾರ.

ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಅತ್ಯಗತ್ಯವೇ?

ಹುದ್ದೆಗಳ ಅವಧಿ : 1 ವರ್ಷ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-09-2023 ರ ಸಂಜೆ 05 ಗಂಟೆಗೆ.

ಅರ್ಜಿ ಸಲ್ಲಿಸುವ ವಿಧಾನ
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ನಿಗದಿತ ಅಪ್ಲಿಕೇಶನ್‌ ಫಾರ್ಮ್‌ ಅನ್ನು ಡೌನ್‌ಲೋಡ್‌ ಮಾಡಿ ಭರ್ತಿ ಮಾಡಿಕೊಳ್ಳಬೇಕು. ನಂತರ ಸದರಿ ನಮೂನೆಯನ್ನು ಸ್ಕ್ಯಾನ್‌ ಮಾಡಿ ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಗಾಗಿ ಕ್ಲಿಕ್ ಮಾಡಿ.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗಾಗಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಕರ್ತವ್ಯ ಅನುಭವ, ಸಂದರ್ಶನದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು.