This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Education NewsNational NewsState News

ಮಕ್ಕಳ ಆಧಾರ್ ಕಾರ್ಡ್‌ ಅರ್ಜಿ ಬದಲಾಗಿದೆ! ಕಿಡ್ಸ್ ಆಧಾರ್ ನೋಂದಣಿ ಹೇಗೆ?

ಮಕ್ಕಳ ಆಧಾರ್ ಕಾರ್ಡ್‌ ಅರ್ಜಿ ಬದಲಾಗಿದೆ! ಕಿಡ್ಸ್ ಆಧಾರ್ ನೋಂದಣಿ ಹೇಗೆ?

ನವದೆಹಲಿ:

ಆಧಾರ್ ನೋಂದಣಿ (Aadhaar Registration) ಮತ್ತು ಅಪ್‌ಗ್ರೇಡ್ (Aadhaar Upgrade) ಮಾಡುವುದಕ್ಕೆ 18 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಹಾಗೂ 0-5 ವರ್ಷದ ಮಕ್ಕಳಿಗೆ ಪ್ರತ್ಯೇಕ ಫಾರ್ಮ್‌ಗಳನ್ನು ಬಳಸಲಾಗುತ್ತದೆ (Aadhaar for kids) ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(UIDAI)ವು ಹೇಳಿದೆ. ಈ ಕುರಿತು ಯುಐಡಿಎಐ ಕಳೆದ ಫಬ್ರವರಿ ತಿಂಗಳಲ್ಲೇ ಘೋಷಣೆ ಮಾಡಿದೆ.

ಈ ಹಿಂದೆ, 0-5 ಮತ್ತು 5-18 ವಯಸ್ಸಿನ ವರ್ಗಗಳ ಫಾರ್ಮ್‌ಗಳ ಕಾಲಮ್ ಸಂಖ್ಯೆ 5 ಮತ್ತು 8 ರಲ್ಲಿ “ಮಗುವಿನ ಹೆಸರಿನೊಂದಿಗೆ ಜನನ ಪ್ರಮಾಣಪತ್ರಗಳನ್ನು ಅನುಮತಿಸಲಾಗುವುದಿಲ್ಲ…” ಎಂದು ನಮೂದಿಸಲಾಗುತ್ತಿತ್ತು. ಆದರೆ, ಹೆಚ್ಚಿನ ಚರ್ಚೆಯ ಬಳಿಕ, ಈ ನಿಬಂಧನೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕೈ ಬಿಡಲಾಗಿದೆ.

2023ರ ಆಗಸ್ಟ್ 25ರ ಕಛೇರಿಯ ಜ್ಞಾಪಕ ಪತ್ರದ ಪ್ರಕಾರ 0-5 ಮತ್ತು 5-18 ವಯೋಮಾನದವರ ಫಾರ್ಮ್‌ಗಳಲ್ಲಿ ಕಾಲಮ್ ಸಂಖ್ಯೆ 2023 ರ ಅಡಿಯಲ್ಲಿ ಉಲ್ಲೇಖಿಸಲಾಗಿದ್ದು, ಮಗುವಿನ ಹೆಸರಿನೊಂದಿಗೆ ಜನನ ಪ್ರಮಾಣಪತ್ರವನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

5 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳ ಬಯೋಮೆಟ್ರಿಕ್ ಅಗತ್ಯವಿರುವುದಿಲ್ಲ. ಆ ಮಕ್ಕಳ ಯುಐಡಿಯನ್ನು ಜನಸಂಖ್ಯಾ ಮಾಹಿತಿ ಮತ್ತು ಅವರ ಪೋಷಕರ ಯುಐಡಿಯೊಂದಿಗೆ ಲಿಂಕ್ ಮಾಡಲಾದ ಮುಖದ ಛಾಯಾಚಿತ್ರದ ಆಧಾರದ ಮೇಲೆ ಪ್ರಕ್ರಿಯೆಗೊಳಿಸಲಾಗುತ್ತದೆ. ಈ ಮಕ್ಕಳು ತಮ್ಮ ಹತ್ತು ಬೆರಳುಗಳ ಬಯೋಮೆಟ್ರಿಕ್ಸ್, ಐರಿಸ್ ಮತ್ತು ಮುಖದ ಛಾಯಾಚಿತ್ರವನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಆದರೆ, ಆ ಮಕ್ಕಳು 5 ವರ್ಷ ಮತ್ತು 15 ವರ್ಷ ದಾಟಿದ ಮೇಲೆ ಆಧಾರ್ ಅಪ್‌ಡೇಟ್ ಮಾಡಬೇಕಾಗುತ್ತದೆ.

ಮಕ್ಕಳ ಆಧಾರ್ ಕಾರ್ಡ್ ನೋಂದಣಿ ಹೇಗೆ?
-ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರ ಭೇಟಿ ನೀಡಿ.
-ಮಕ್ಕಳ ಆಧಾರ್ ಕಾರ್ಡ್‌ಗೆ ಅಗತ್ಯವಿರುವ ಫಾರ್ಮ್ ಭರ್ತಿ ಮಾಡಿ.
-ಪೋಷಕರ ಆಧಾರ್ ಕಾರ್ಡ್ ಹಾಗೂ ಮಕ್ಕಳ ಜನನ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಿ.
-ಪೋಷಕರ ಆಧಾರ್ ಕಾರ್ಡ್ ಮಾಹಿತಿ ಮತ್ತು ಮೊಬೈಲ್ ನಂಬರ್ ಮಾಹಿತಿಯನ್ನು ಕಡ್ಡಾಯವಾಗಿ ನೀಡಲೇಬೇಕು.
-ದೃಢೀಕರಣ ಪ್ರಕ್ರಿಯೆಗಳ ಬಳಿಕ ಮಗುವಿನ ಭಾವಚಿತ್ರವನ್ನು ಸೆರೆ ಹಿಡಿಯಲಾಗುತ್ತದೆ.
-ಐದು ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್ ಅಗತ್ಯವಿರುವುದಿಲ್ಲ.
-ಒಂದು ವೇಳೆ ಮಗು ಐದು ವರ್ಷ ಅದಕ್ಕಿಂತ ಮೇಲ್ಪಟ್ಟದ್ದಾಗಿದ್ದರೆ ಫೋಟಗ್ರಾಫ್ ಹಾಗೂ ಐರಿಸ್, ಫಿಂಗರ್‌ಪ್ರಿಂಟ್ ಸೇರಿದಂತೆ ಬಯೋಮೆಟ್ರಿಕ್ ಮಾಹಿತಿಯನ್ನು ಪಡೆಯಲಾಗುತ್ತದೆ.
-ಮುಂದಿನ ಉಲ್ಲೇಖಗಳಿಗಾಗಿ ಕೇಂದ್ರದಲ್ಲಿ ನೀಡಲಾಗುವ ಸ್ವೀಕೃತಿ ಪತ್ರವನ್ನು ತೆಗೆದಿಟ್ಟುಕೊಳ್ಳಿ.
-ಅರ್ಜಿ ಸಲ್ಲಿಸಿದ 60 ದಿನದೊಳಗೆ ನಿಮಗೊಂದ ಪಠ್ಯ ಸಂದೇಶವನ್ನು ಕಳುಹಿಸಲಾಗುತ್ತಿದೆ. ಇದೇ ಕಾಲಾವಧಿಯಲ್ಲಿ ಮಕ್ಕಳ ಆಧಾರ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

Nimma Suddi
";