ಮಸಾಲೆಗಳು ರುಚಿ ಹಾಗೂ ಸುವಾಸನೆ ನೀಡುವ ಜತೆಗೆ ಹಲವಾರು ಬಗೆಯ ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಇಂತಹ ಮಸಾಲೆಗಳಲ್ಲಿ ಮೆಂತ್ಯೆಯು ಒಂದಾಗಿದೆ. ಮೆಂತ್ಯೆಯಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಹಾಗೂ ಜೈವಿಕ ಸಕ್ರಿಯ ಅಂಶಗಳು ಮತ್ತು ನಿಯಾಸಿನ್, ಪೊಟಾಶಿಯಂ, ಪ್ರೋಟೀನ್, ನಾರಿನಾಂಶ, ವಿಟಮಿನ್ ಸಿ ಮತ್ತು ಕಬ್ಬಿಣಾಂಶವು ಇದರಲ್ಲಿದೆ.
ಮೆಂತ್ಯೆಕಾಳುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕರಗುವ ನಾರಿನಾಂಶ ಮತ್ತು ಗ್ಯಾಲಕ್ಟೋಮನ್ನನ್ ಅಂಶವು ಮೆಂತ್ಯೆಕಾಳಿನಲ್ಲಿದ್ದು, ಇದು ಕಾರ್ಬೋಹೈಡ್ರೇಟ್ಸ್ ಮತ್ತು ಸಕ್ಕರೆ ಹೀರುವಿಕೆಯನ್ನು ನಿಧಾನವಾಗಿಸಿ, ರಕ್ತದಲ್ಲಿ ಗ್ಲುಕೋಸ್ ಮಟ್ಟವು ಏರಿಕೆ ಆಗುವುದನ್ನು ತಡೆಯುವುದು. ಮೆಂತ್ಯೆ ಕಾಳನ್ನು ನಿಯಮಿತವಾಗಿ ಸೇವನೆ ಮಾಡಿದರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಬಹುದು. ಮಧುಮೇಹ ಇರುವವರು ಮತ್ತು ಮಧುಮೇಹ ಬರುವ ಸಾಧ್ಯತೆ ಇರುವವರು ಈ ಮೆಂತ್ಯೆಕಾಳನ್ನು ಎರಡು ವಾರಗಳ ನಿಯಮಿತವಾಗಿ ಸೇವನೆ ಮಾಡಬಹುದು.
ಮೆಂತ್ಯೆಕಾಳಿನಲ್ಲಿ ಹಸಿವು ಕಡಿಮೆ ಮಾಡುವ ಗುಣಗಳು ಇದ್ದು, ಇದು ತೂಕ ನಿರ್ವಹಣೆ ಮಾಡಲು ತುಂಬಾ ಸಹಕಾರಿ ಆಗಿರುವುದು. ಇದರಲ್ಲಿ ಹೀರಿಕೊಳ್ಳುವ ನಾರಿನಾಂಶವು ಇರುವ ಕಾರಣ ಹೊಟ್ಟೆಯಲ್ಲಿ ಕಾಳುಗಳು ಊದಿಕೊಳ್ಳೂವುದು ಮತ್ತು ಇದರಿಂದ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ಬಯಕೆ ತಗ್ಗಿಸುವುದು. ಹೊಟ್ಟೆಗೆ ತೃಪ್ತಿ ನೀಡುವ ಕಾರಣದಿಂದ ಇದು ಕ್ಯಾಲರಿ ಸೇವನೆ ಕಡಿಮೆ ಮಾಡಿಸುವುದು ಮತ್ತು ತೂಕ ನಿರ್ವಹಣೆಗೆ ಇದು ತುಂಬಾ ಸಹಕಾರಿ ಆಗಿರುವುದು. ಇದನ್ನು ಸಮತೋಲಿತ ಆಹಾರ ಕ್ರಮದ ಭಾಗವಾಗಿ ಸೇವನೆ ಮಾಡಬಹುದು.
ಮೆಂತ್ಯೆಕಾಳಿನಲ್ಲಿ ಇರುವ ಅಧಿಕ ನಾರಿನಾಂಶವು ಜೀರ್ಣಕ್ರಿಯೆ ಆರೋಗ್ಯವನ್ನು ಕಾಪಾಡಿ ಮಲಬದ್ಧತೆ ತಗ್ಗಿಸುವುದು, ಕರುಳಿನ ಕ್ರಿಯೆಯು ಸರಾಗವಾಗಿಸಿ, ಜೀರ್ಣಕ್ರಿಎಯ ಸಮಸ್ಯೆಯಾಗಿರುವ ಅಜೀರ್ಣ ಮತ್ತು ಹೊಟ್ಟೆ ಉಬ್ಬರ ತಡೆಯುವುದು. ಮೆಂತ್ಯೆ ಕಾಳಿನಲ್ಲಿ ಮ್ಯೂಸಿಲೇಜ್ ಎನ್ನುವ ಅಂಶವಿದ್ದು, ಇದು ಹೊಟ್ಟೆಯಲ್ಲಿ ಪದರವನ್ನು ಉಂಟು ಮಾಡಿ ಜಠರಕರುಳಿನ ಉರಿಯೂತವನ್ನು ಕಡಿಮೆ ಮಾಡುವುದು. ಮೆಂತ್ಯೆಕಾಳು ಸೇವನೆ ಮಾಡಿದರೆ ಆಗ ಜೀರ್ಣಕ್ರಿಯೆಯು ಸರಿಯಾಗಿ ಆಗುವುದು ಮತ್ತು ಸಂಪೂರ್ಣ ಆರೋಗ್ಯವು ಸುಧಾರಣೆ ಆಗುವುದು.