This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

International NewsNational NewsSports News

ಸಿಂಪಲ್​ ಕ್ಯಾಚ್ ಬಿಟ್ಟು ಅಪಹಾಸ್ಯಕ್ಕೆ ಒಳಗಾದರೂ ನೇಪಾಳಿ ಹಾಡಿಗೆ ಸೊಂಟ ಕುಣಿಸಿದ ಕೊಹ್ಲಿ!

ಸಿಂಪಲ್​ ಕ್ಯಾಚ್ ಬಿಟ್ಟು ಅಪಹಾಸ್ಯಕ್ಕೆ ಒಳಗಾದರೂ ನೇಪಾಳಿ ಹಾಡಿಗೆ ಸೊಂಟ ಕುಣಿಸಿದ ಕೊಹ್ಲಿ!

ಪಲ್ಲೆಕೆಲೆ: ಏಷ್ಯಾಕಪ್ 2023ರ (Asia Cup 2023) ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಭಾರತ ತಂಡ ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಅತ್ಯಂತ ಕಳಪೆ ಫೀಲ್ಡಿಂಗ್​ ಮಾಡಿತು. ಅರಂಭಿಕ 26 ಎಸೆತಗಳ ಒಳಗೆ ಮೂರು ಬಾರಿ ಕ್ಯಾಚ್​ ಬಿಡುವ ಮೂಲಕ ಭಾರತ ತಂಡ ಟೀಕೆಗೆ ಒಳಗಾಯಿತು. ಇದರಲ್ಲೊಂದು ಸುಲಭ ಕ್ಯಾಚ್​ ಬಿಟ್ಟವರು ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ. ಈ ಕ್ಯಾಚ್​ಗಳು ಭಾರತದ ಪಾಲಿಗೆ ಹಿನ್ನಡೆ ಉಂಟು ಮಾಡಿದವು. ಇಷ್ಟೆಲ್ಲ ಅಪಹಾಸ್ಯಕ್ಕೆ ಒಳಗಾದ ನಡುವೆಯೂ ವಿರಾಟ್​ ಕೊಹ್ಲಿ ನೇಪಾಳಿ ಹಾಡೊಂದಕ್ಕೆ ಡಾನ್ಸ್​ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ಇನ್ನಿಂಗ್ಸ್​​ನ ಎರಡನೇ ಓವರ್​ನಲ್ಲಿ ಶಾರ್ಟ್ ಕವರ್​ನಲ್ಲಿ ವಿರಾಟ್​ ಕೊಹ್ಲಿ ಸುಲಭ ಕ್ಯಾಚ್​ ಕೈಬಿಟ್ಟಿದ್ದರಿಂದ ಭಾರತೀಯ ಅಭಿಮಾನಿಗಳಿಗೆ ಬೇಸರ ಉಂಟಾಯಿತು. ಈ ಕ್ಯಾಚ್ ಡ್ರಾಪ್ ನಂತರ ನೇಪಾಳದ ಆಟಗಾರ ಆಸಿಫ್ ಶೇಖ್ ಅರ್ಧಶತಕ ಗಳಿಸಿ ತಮ್ಮ ತಂಡದ ಇನ್ನಿಂಗ್ಸ್ ಅನ್ನು ಮುನ್ನಡೆಸಿದರು.

ಕೊಹ್ಲಿ ಅಂತಿಮವಾಗಿ 30 ನೇ ಓವರ್​ನಲ್ಲಿ ಶೇಖ್ ಅವರ ಇನಿಂಗ್ಸ್​​ಗೆ ತರೆ ಎಳೆದರು. ಅಸಾಧಾರಣ ಒಂದು ಕೈ ಕ್ಯಾಚ್ ತೆಗೆದುಕೊಳ್ಳುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಭಾರತದ ಮಾಜಿ ನಾಯಕ ಶೇಖ್ ಅವರ ಬ್ಯಾಟ್​ನಿಂದ ಎತ್ತರಕ್ಕೆ ಜಿಗಿದಿದ್ದ ಚೆಂಡನ್ನು ಹಿಡಿಯಲು ಸಿಕ್ಕಾಪಟ್ಟೆ ಕಷ್ಟಪಟ್ಟರು. ಅದೇ ಸ್ಥಾನದಲ್ಲಿ ಅವರು ಈ ಹಿಂದೆ ಕ್ಯಾಚ್ ಬಿಟ್ಟಿದ್ದರು.

ಅದಕ್ಕಿಂತ ಮೊದಲು ಹತ್ತನೇ ಓವರ್​ನಲ್ಲಿ ಎದುರಾಳಿ ತಂಡದ ಮೊದಲು ವಿಕೆಟ್​ ಪಡೆಯಲು ಯಶಸ್ವಿಯಾದ ನಂತರ ಭಾರತೀಯ ಆಟಗಾರರು ನಿರಾಳರಾದರು. ಅದರಲ್ಲೂ ವಿರಾಟ್​ 14 ನೇ ಓವರ್ ಮುಗಿದ ನಂತರ ನೇಪಾಳಿ ಕುತು ಮಾ ಕುತುಗೆ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಿರುವು ಕೊಟ್ಟ ಜಡೇಜಾ
ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಕೇವಲ ನಾಲ್ಕು ರನ್​ಗೆ ವಿರಾಟ್ ಕೊಹ್ಲಿ ಔಟಾಗಿದ್ದರು. ಶಾಹೀನ್ ಅಫ್ರಿದಿ ವಿರುದ್ಧ ತಮ್ಮ ದೌರ್ಬಲ್ಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದರು ಕೊಹ್ಲಿ. ಆರಂಭಿಕ ಪಂದ್ಯದಲ್ಲಿ ಛಾಪು ಮೂಡಿಸಲು ವಿಫಲವಾದ ಕೊಹ್ಲಿ, ನೇಪಾಳ ವಿರುದ್ಧ ದೊಡ್ಡ ಶತಕ ಗಳಿಸುವ ಹಸಿವಿನಲ್ಲಿದ್ದಾರೆ.

ನಿಯಮಿತ ವಿರಾಮಗಳಲ್ಲಿ ವಿಕೆಟ್​ಗಳನ್ನು ಕಳೆದುಕೊಂಡರೂ, ನೇಪಾಳದ ಬ್ಯಾಟರ್​ಗಳು ತಮ್ಮ ಮೊತ್ತಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸಿದರು. 48.2 ಓವರ್​​ಗಳಲ್ಲಿ 230 ರನ್​ ಮಾಡಿ ಆಲ್ಔಟ್​ ಆದರು. ಭಾರತದ ಪರ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್​ ತಲಾ 3 ವಿಕೆಟ್ ಪಡೆದರು.

ಬರ ತಾಲೂಕು ಘೋಷಣೆ 1 ವಾರ ಮುಂದಕ್ಕೆ; 134 ತಾಲೂಕಲ್ಲಿ ಮತ್ತೆ ಜಂಟಿ ಸಮೀಕ್ಷೆ!

 

 

 

Nimma Suddi
";